AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರ ಜತೆ ಬೇಕಾದ್ರೂ ಹೋಗು ನನ್ನ ಜೀವಂತ ಬಿಟ್ಬಿಡು ಎಂದು ಬೇಡುವಂತಾಗಿದೆ ಹುಡುಗರ ಸ್ಥಿತಿ, ಆಂಧ್ರದಲ್ಲಿ ಮತ್ತೊಂದು ನವವಿವಾಹಿತನ ಹತ್ಯೆ

ಆಂಧ್ರಪ್ರದೇಶದ ಗದ್ವಾಲ್ ಪಟ್ಟಣದಲ್ಲಿ ನವವಿವಾಹಿತರೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆಯು ಮೇಘಾಲಯದಲ್ಲಿ ನಡೆದ ರಾಜಾ ರಘುವಂಶಿ ಕೊಲೆಯನ್ನು ನೆನಪಿಸುತ್ತದೆ. ತೆಲಂಗಾಣದ ಗದ್ವಾಲ್​ನ ರಾಜವೀಧಿನಗರದ 32 ವರ್ಷದ ತೇಜೇಶ್ವರ್ ನಂದ್ಯಾಲ್ ಜಿಲ್ಲೆಯ ಪನ್ಯಂ ಪೊಲೀಸ್ ಠಾಣೆ ವ್ಯಾಪ್ತಿಯ ಸುಗಲಿಮೆಟ್ಟದ ಎಚ್‌ಎನ್‌ಎಸ್‌ಎಸ್ ಕಾಲುವೆಯ ಬಳಿ ಶವವಾಗಿ ಪತ್ತೆಯಾಗಿದ್ದು, ಅವರ ಪತ್ನಿ ಮೇಲೆ ಅನುಮಾನ ಮೂಡಿದೆ.

ಯಾರ ಜತೆ ಬೇಕಾದ್ರೂ ಹೋಗು ನನ್ನ ಜೀವಂತ ಬಿಟ್ಬಿಡು ಎಂದು ಬೇಡುವಂತಾಗಿದೆ ಹುಡುಗರ ಸ್ಥಿತಿ, ಆಂಧ್ರದಲ್ಲಿ ಮತ್ತೊಂದು ನವವಿವಾಹಿತನ ಹತ್ಯೆ
ಕೊಲೆ
ನಯನಾ ರಾಜೀವ್
|

Updated on: Jun 23, 2025 | 11:59 AM

Share

ಆಂಧ್ರಪ್ರದೇಶ, ಜೂನ್ 23: ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ನವವಿವಾಹಿತರ ಹತ್ಯೆ ಪ್ರಕರಣಗಳನ್ನು ನೋಡಿ ಪುರುಷರು ಮದುವೆ(Marriage)ಯಾಗಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಡೆದಿರುವ ಬಹುತೇಕ ಘಟನೆಗಳಲ್ಲಿ ಮಹಿಳೆಯು ವಿವಾಹೇತರ ಸಂಬಂಧ ಹೊಂದಿದ್ದು, ಅದಕ್ಕೆ ಗಂಡ ಅಡ್ಡಿ ಬರುತ್ತಾನೆಂದು ಪ್ರಿಯಕರನ ಜತೆ ಸೇರಿ ಕೊಲೆ ಮಾಡಿರುವ ಘಟನೆಗಳೇ ಹೆಚ್ಚಿವೆ. ಈಗ ಹುಡುಗರ  ಮನಸ್ಥಿತಿ ಏನಾಗಿದೆ ಎಂದರೆ ನೀನು ಯಾರೊಂದಿಗೆ ಬೇಕಾದ್ರೂ ಹೋಗು ನನ್ನನ್ನು ಜೀವಂತ ಬಿಟ್ಟುಬಿಡು ಎನ್ನುವಂತಾಗಿದೆ.

ಆಂಧ್ರಪ್ರದೇಶದ ಗದ್ವಾಲ್ ಪಟ್ಟಣದಲ್ಲಿ ನವವಿವಾಹಿತರೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆಯು ಮೇಘಾಲಯದಲ್ಲಿ ನಡೆದ ರಾಜಾ ರಘುವಂಶಿ ಕೊಲೆಯನ್ನು ನೆನಪಿಸುತ್ತದೆ. ತೆಲಂಗಾಣದ ಗದ್ವಾಲ್​ನ ರಾಜವೀಧಿನಗರದ 32 ವರ್ಷದ ತೇಜೇಶ್ವರ್ ನಂದ್ಯಾಲ್ ಜಿಲ್ಲೆಯ ಪನ್ಯಂ ಪೊಲೀಸ್ ಠಾಣೆ ವ್ಯಾಪ್ತಿಯ ಸುಗಲಿಮೆಟ್ಟದ ಎಚ್‌ಎನ್‌ಎಸ್‌ಎಸ್ ಕಾಲುವೆಯ ಬಳಿ ಶವವಾಗಿ ಪತ್ತೆಯಾಗಿದ್ದು, ಅವರ ಪತ್ನಿ ಮೇಲೆ ಅನುಮಾನ ಮೂಡಿದೆ.

ಅವರು ಕರ್ನೂಲಿನ ಐಶ್ವರ್ಯಾ ಎಂಬುವವರನ್ನು ಕಳೆದ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ವ್ಯಕ್ತಿಯ ಕುಟುಂಬವು ಅವರ ಪತ್ನಿ ಹಾಗೂ ಸಂಬಂಧಿ ವಿರುದ್ಧ ಬೆರಳು ಮಾಡಿ ತೋರಿಸುತ್ತಿದೆ. ತೇಜೇಶ್ವರ್ ಜೂನ್ 17ರಿಂದ ಕಾಣೆಯಾಗಿದ್ದರು. ಅವರ ಸಹೋದರ ತೇಜವರ್ಧನ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಮೊಬೈಲ್​ ಟ್ರ್ಯಾಕ್ ಮಾಡಿ ಜೂನ್ 21ರಂದು ಕಾಲುವೆ ಬಳಿ ಶವವನ್ನು ಪತ್ತೆ ಮಾಡಿದ್ದರು.

ಇದನ್ನೂ ಓದಿ
Image
ಭಾರತದ ಸ್ನೇಹಿತರಿಂದ ಕೆಲವು ಮಾಹಿತಿ ಪಡೆದಿದ್ದು ಹೌದೆಂದು ಒಪ್ಪಿಕೊಂಡ ನಾಸಿರ್
Image
11 ವರ್ಷಗಳಲ್ಲಿ ಭಾರತದ ಜನರ ಬದುಕನ್ನು ಕೇಂದ್ರ ಸರ್ಕಾರ ಹೇಗೆ ಬದಲಿಸಿದೆ?
Image
ಹೊಸ ಇತಿಹಾಸ ಸೃಷ್ಟಿಯತ್ತ ಶುಭಾಂಶು ಶುಕ್ಲ; ಮುಖ್ಯಾಂಶಗಳು
Image
ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕರು, ಐದಕ್ಕಿಂತ ಹೆಚ್ಚು ಮಂದಿ ಸಾವು

ಐಶ್ವರ್ಯಾ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದು, ಆಕೆ ಬ್ಯಾಂಕ್ ಮ್ಯಾನೇಜರ್​​ ಜತೆ ವಿವಾಹೇತರ ಸಂಬಂಧ ಹೊಂದಿದ್ದಾಳೆ. ತೇಜೇಶ್ವರ್ ತಮ್ಮ ಸಂಬಂಧಗಳಿಗೆ ಅಡ್ಡಿಯಾಗಬಹುದು ಎಂದು ಭಾವಿಸಿ ಆತನನ್ನು ಕೊಲ್ಲಲು ಸಂಚು ರೂಪಿಸಿದ್ದಳು ಎಂದು ತೇಜೇಶ್ವರ್ ಸಹೋದರ ಆರೋಪಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಮೇಘಾಲಯದಲ್ಲಿ ಕೊಲೆಗೂ ಮೊದಲಿನ ರಾಜ ರಘುವಂಶಿಯ ಕೊನೆಯ ವಿಡಿಯೋ ಬಯಲು

ಆಕೆಗೆ ಆಗಾಗ ಬರುತ್ತಿದ್ದ ಫೋನ್ ಕರೆಗಳು, ರಹಸ್ಯ ಸಂಭಾಷಣೆಗಳು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದ್ದವು. ತೇಜೇಶ್ವರ್ ಈ ಕುರಿತು ಪ್ರಶ್ನೆ ಮಾಡಿದಾಗಲೆಲ್ಲಾ ಆಕೆ ತನ್ನ ತಾಯಿಯೊಂದಿಗೆ ಮಾತನಾಡುತ್ತಿದ್ದೇನೆ ಎಂದು ಸಬೂಬು ಹೇಳುತ್ತಿದ್ದಳು.ಮೇ 18ರಂದು ಐಶ್ವರ್ಯಾ ತೇಜೇಶ್ವರ್ ಪ್ರೇಮ ವಿವಾಹವಾಗಿದ್ದರು.

ರಾಜಾ ರಘುವಂಶಿ ಹತ್ಯೆ ಮಧ್ಯಪ್ರದೇಶದ ಇಂದೋರ್ ಮೂಲದ ರಾಜಾ ರಘುವಂಶಿ ಎಂಬುವವರು ಸೋನಮ್ ಅವರನ್ನು ವಿವಾಹವಾಗಿದ್ದರು. ಕೆಲವೇ ದಿನಗಳಲ್ಲಿ ಹನಿಮೂನ್ ನೆಪದಲ್ಲಿ ಗಂಡನನ್ನು ಕರೆದೊಯ್ದು ತನ್ನ ಪ್ರಿಯಕರನ ಕೈಯಲ್ಲೇ ಆತನನ್ನು ಹತ್ಯೆ ಮಾಡಿಸಿದ್ದಳು. ಕೊಲೆಯಾಗಿ ಕೆಲವು ದಿನಗಳ ಬಳಿಕ ರಾಜಾ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆ ಮದುವೆಗೂ ಮುನ್ನ ರಾಜ್ ಕುಶ್ವಾಹ ಎಂಬುವವನ್ನು ಪ್ರೀತಿಸುತ್ತಿದ್ದಳು. ಆತನನ್ನೇ ಮದುವೆಯಾಗಬೇಕೆಂದು ಬಯಸಿದ್ದಳು. ಆದರೆ ಮನೆಯಲ್ಲಿ ಒಪ್ಪಲಿಲ್ಲ. ಮನೆಯವರ ಮಾತಿಗೆ ಕಟ್ಟುಬಿದ್ದು ಆಕೆ ಮದುವೆಯಾಗಿದ್ದಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!