AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಗೂ ಮುನ್ನ ಪ್ರಿಯಕರನಿಗೆ 100 ಬಾರಿ ಕರೆ ಮಾಡಿದ್ದ ಸೋನಮ್, ಆಕೆಯ ಕಣ್ಮುಂದೆ ನಡೆದಿತ್ತು ಗಂಡನ ಕೊಲೆ

Raja Raghuvanshi murder case: ಹನಿಮೂನ್​ಗೆಂದು ಹೋಗಿದ್ದ ಮೇಘಾಲಯದ ಗಂಡ-ಹೆಂಡತಿ ನಾಪತ್ತೆಯಾಗಿದ್ದರು. ಅವರಲ್ಲಿ ಗಂಡ ರಘುವಂಶಿ ಹೆಣ ಪತ್ತೆಯಾಗಿತ್ತು. ಪತ್ನಿ ಸೋನಮ್ ನಾಪತ್ತೆಯಾಗಿದ್ದರು. ಮೇಘಾಲಯದ ಡಿಜಿಪಿ ಸೋನಮ್ ತನ್ನ ಗಂಡನ ಕೊಲೆ ಪಿತೂರಿಯಲ್ಲಿ ಭಾಗಿಯಾಗಿದ್ದಾಳೆ ಎಂದು ಹೇಳಿದ್ದಾರೆ. ಸೋನಮ್ ಮದುವೆಗೂ ಮುನ್ನ 100 ಬಾರಿ ಪ್ರಿಯಕರನಿಗೆ ಕರೆ ಮಾಡಿದ್ದಳು. ಮದುವೆಯ ಬಳಿಕವೂ ಕರೆ, ಮೆಸೇಜ್ ಹಾಗೆಯೇ ಮುಂದುವರೆದಿತ್ತು.

ಮದುವೆಗೂ ಮುನ್ನ ಪ್ರಿಯಕರನಿಗೆ 100 ಬಾರಿ ಕರೆ ಮಾಡಿದ್ದ ಸೋನಮ್, ಆಕೆಯ ಕಣ್ಮುಂದೆ ನಡೆದಿತ್ತು ಗಂಡನ ಕೊಲೆ
ಸೋನಮ್, ರಾಜಾ
ನಯನಾ ರಾಜೀವ್
|

Updated on: Jun 19, 2025 | 8:02 AM

Share

ಇಂದೋರ್, ಜೂನ್ 19: ಹನಿಮೂನ್(Honeymoon)​​ಗೆಂದು ಹೋಗಿ ಹೆಣವಾಗಿ ಬಂದ ರಾಜಾ ರಘುವಂಶಿ ಕೊಲೆಯ ಸುತ್ತ ಮುತ್ತ ಹಲವು ಸಂಗತಿಗಳು ಬಹಿರಂಗಗೊಳ್ಳುತ್ತಿವೆ. ಸೋನಮ್​ಗೆ ರಾಜಾರನ್ನು ಮದುವೆಯಾಗಲು ಇಷ್ಟ ಇರಲಿಲ್ಲ. ಆಕೆ ರಾಜ್ ಕುಶ್ವಾಹ ಎಂಬಾತನನ್ನು ಪ್ರೀತಿಸುತ್ತಿದ್ದಳು. ರಾಜಾ ಜತೆ ಮದುವೆಗೂ ಸ್ವಲ್ಪ ಸಮಯದ ಹಿಂದೆ 100 ಬಾರಿ ಸೋನಂ ರಾಜ್​​ಗೆ ಕರೆ ಮಾಡಿದ್ದಳು.

ನವವಿವಾಹಿತ ಉದ್ಯಮಿ ರಾಜಾ ರಘುವಂಶಿ ಅವರ ಕೊಲೆ ಪ್ರಕರಣವು ನಾಟಕೀಯ ತಿರುವು ಪಡೆದುಕೊಂಡಿದ್ದು, ಅವರ ಪತ್ನಿ ಸೋನಮ್ ರಘುವಂಶಿ ಮತ್ತು ಆಕೆಯ ಪ್ರಿಯಕರ ಎಂದು ಹೇಳಲಾಗುವ ರಾಜ್ ಕುಶ್ವಾಹ ಅವರು ರೂಪಿಸಿದ ಪೂರ್ವಯೋಜಿತ ಸಂಚನ್ನು ಪೊಲೀಸರು ಬಯಲು ಮಾಡಿದ್ದಾರೆ. ಮದುವೆಯ ನಂತರವೂ ಕಾಲ್, ಮೆಸೇಜ್​ಗಳೆಲ್ಲವೂ ಮುಂದುವರೆದಿದ್ದವು. ಮೇಘಾಲಯಕ್ಕೆ ಗಂಡನನ್ನು ಕೊಲೆ ಮಾಡಲೆಂದೇ ಆಕೆ ಕರೆದುಕೊಂಡು ಹೋಗಿದ್ದಳು.

ಶಿಲ್ಲಾಂಗ್​​ನಲ್ಲಿ ಭೀಕರ ಕೊಲೆ ಮೇ 23ರಂದು ಮೇಘಾಲಯದ ಸೊಹ್ರಾದಲ್ಲಿ ಇಂದೋರ್​​ನ ಉದ್ಯಮಿ ರಾಜಾ ರಘುವಂಶಿಯನ್ನು ಕೊಲೆ ಮಾಡಲಾಗಿತ್ತು.ರಾಜ್, ವಿಶಾಲ್, ಆಕಾಶ್ ಮತ್ತು ಆನಂದ್ ರಾಜಾ ಮೇಲೆ ದಾಳಿ ನಡೆಸಿದ್ದರು. ಸೋನಂ ಕೂಡ ಅಪರಾಧ ಸ್ಥಳದಲ್ಲಿದ್ದಳು. ಆಕೆಯ ಎದುರೇ ರಾಜಾನನ್ನು ಕೊಲ್ಲಲಾಯಿತು. ಈ ಗುಂಪು ಗುವಾಹಟಿ, ನೊಂಗ್ರಿಯಾಟ್ ಮತ್ತು ವೈಸಾವ್ಡಾಂಗ್ ಜಲಪಾತಗಳು ಸೇರಿದಂತೆ ಮೂರು ಬಾರಿ ರಾಜಾರನ್ನು ಕೊಲೆ ಮಾಡಲು ಯತ್ನಿಸಿತ್ತು.

ಇದನ್ನೂ ಓದಿ
Image
ಭಾರತದ ಸ್ನೇಹಿತರಿಂದ ಕೆಲವು ಮಾಹಿತಿ ಪಡೆದಿದ್ದು ಹೌದೆಂದು ಒಪ್ಪಿಕೊಂಡ ನಾಸಿರ್
Image
11 ವರ್ಷಗಳಲ್ಲಿ ಭಾರತದ ಜನರ ಬದುಕನ್ನು ಕೇಂದ್ರ ಸರ್ಕಾರ ಹೇಗೆ ಬದಲಿಸಿದೆ?
Image
ಹೊಸ ಇತಿಹಾಸ ಸೃಷ್ಟಿಯತ್ತ ಶುಭಾಂಶು ಶುಕ್ಲ; ಮುಖ್ಯಾಂಶಗಳು
Image
ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕರು, ಐದಕ್ಕಿಂತ ಹೆಚ್ಚು ಮಂದಿ ಸಾವು

ಸೋನಂ ಮೇಘಾಲಯದಿಂದ ಪರಾರಿ ಕೊಲೆಯ ಬಳಿಕ ಸೋನಮ್ ಮೇಘಾಲಯದಿಂದ ಪಲಾಯನ ಮಾಡಿ ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಪ್ರಯಾಣಿಸಿ ಜೂನ್ 8ರಂದು ಘಾಜಿಪುರದಲ್ಲಿ ಸಿಕ್ಕಿಬಿದ್ದಿದ್ದಳು. ಹೋಂಸ್ಟೇನಲ್ಲಿ ತನ್ನ ಉಂಗುರ ಹಾಗೂ ಮಂಗಳಸೂತ್ರ ತೆಗೆದಿಟ್ಟು ಅನುಮಾನಾಸ್ಪದವಾಗಿ ಹೊರಟುಹೋಗಿದ್ದಳು. ರಾಜಾ ನಾಪತ್ತೆಯಾಗಿ ಸುಮಾರು 10 ದಿನಗಳ ಬಳಿಕ ಜೂನ್ 2ರಂದು ಜಲಪಾತದ ಬಳಿಕ ಆಳವಾದ ಕಂದಕದಿಂದ ಮೃತದೇಹವನ್ನು ಹೊರತೆಗೆಯಲಾಯಿತು.

ಮತ್ತಷ್ಟು ಓದಿ: ನನ್ನ ಕಣ್ಣೆದುರೇ ಗಂಡನನ್ನು ಕೊಂದರು; ರಾಜಾ ರಘುವಂಶಿ ಪತ್ನಿ ಸೋನಮ್ ಹೇಳಿದ್ದೇನು?

ಇಂದೋರ್​​ನಲ್ಲೂ ಪೊಲೀಸ್ ತನಿಖೆ ಮೇಘಾಲಯ ಪೊಲೀಸರ ವಿಶೇಷ ತಂಡ ಆಳವಾಗಿ ತನಿಖೆ ನಡೆಸುತ್ತಿದೆ. ತನಿಖೆ ಇಂದೋರ್ ತಲುಪಿದೆ. ಮದುವೆಯ ನಂತರ ಸೋನಂ ಅವರ ವರ್ತನೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಮೇಘಾಲಯ ಪೊಲೀಸರು ಸಹಕಾರ್ ನಗರದಲ್ಲಿರುವ ಅವರ ನಿವಾಸಕ್ಕೂ ಭೇಟಿ ನೀಡಿದ್ದಾರೆ ಎಂದು ರಾಜಾ ಅವರ ಸಹೋದರ ವಿಪಿನ್ ರಘುವಂಶಿ ದೃಢಪಡಿಸಿದ್ದಾರೆ.

ರಾಜಾ ಮತ್ತು ಸೋನಮ್ ಮೇ 11 ರಂದು ಇಂದೋರ್‌ನಲ್ಲಿ ವಿವಾಹವಾದರು ಮತ್ತು ಮೇ 20 ರಂದು  ಹನಿಮೂನ್‌ಗೆ ಹೋಗಿದ್ದರು. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಾದ್ಯಂತ ಸೋನಮ್, ಕುಶ್ವಾಹ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ