ಕುಡಿದು ಬಂದು ರಸ್ತೆ ಬದಿ ಮಲಗಿದ್ದವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸುತ್ತಿದ್ದ ಕಿಲ್ಲರ್‌ ಅಂದರ್‌!

ಬೆಂಗಳೂರಿನಲ್ಲಿ ಕಳೆದ ಒಂದು ವಾರದಲ್ಲಿ ಎರಡು ಕೊಲೆಗಳು ನಡೆದಿದ್ದವು. ಅದು ಜಯನಗರ 7ನೇ ಬಡಾವಣೆ ಮತ್ತು ಸಿಟಿ ಮಾರ್ಕೆಟ್ ಹಿಂಭಾಗದ ಕಾಂಪ್ಲೆಕ್ಸ್​​ನಲ್ಲಿ. ಈ ಎರಡೂ ಕೊಲೆಗಳನ್ನು ಒಬ್ಬನೇ ಮಾಡಿದ್ದನು. ಈ ವಿಚಾರ ತಿಳಿದ ಪೊಲೀಸರು ಆರೋಪಿಗಾಗಿ ಕಾರ್ಯಾಚರಣೆ ನಡೆಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಡಿದು ಬಂದು ರಸ್ತೆ ಬದಿ ಮಲಗಿದ್ದವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸುತ್ತಿದ್ದ ಕಿಲ್ಲರ್‌ ಅಂದರ್‌!
ಆರೋಪಿ ಗಿರೀಶ್​, ಬನಶಂಕರಿ ಪೊಲೀಸ್​ ಠಾಣೆ
Edited By: ವಿವೇಕ ಬಿರಾದಾರ

Updated on: May 26, 2024 | 10:54 AM

ಬೆಂಗಳೂರು, ಮೇ 26: ನಟೋರಿಯಸ್​ ಕೊಲೆಗಾರ ಗಿರೀಶ್​ನನ್ನು ಬೆಂಗಳೂರಿನ (Bengaluru) ಬನಶಂಕರಿ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ಆರೋಪಿ ಗಿರೀಶ್​​ ಒಂದೇ ವಾರದಲ್ಲಿ ಎರಡು ಕೊಲೆ ಮಾಡಿದ್ದನು. ಕುಡಿದು ಬಂದು ರಸ್ತೆ ಬದಿ ಮಲಗಿದ್ದವರನ್ನು ಆರೋಪಿ ಗಿರೀಶ್ ಕೊಲೆ ಮಾಡುತ್ತಿದ್ದನು. ​​

ಕುಡಿದ ಮತ್ತಿನಲ್ಲಿ ಮೇ 12ರಂದು ಜಯನಗರ 7ನೇ ಬಡಾವಣೆಯಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದನು. ​ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮತ್ತೆ ಮೇ 18ರಂದು ಸಿಟಿ ಮಾರ್ಕೆಟ್ ಹಿಂಭಾಗದ ಕಾಂಪ್ಲೆಕ್ಸ್​​ನಲ್ಲಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದನು. ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಾಗಿ ಎರಡೂ ಠಾಣೆ ಪೊಲೀಸರು ಬಲೆ ಬೀಸಿದ್ದರು. ಇದೀಗ ಬನಶಂಕರಿ ಠಾಣೆ ಪೊಲೀಸರು ಆರೋಪಿ ಗಿರೀಶ್​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಬಾತ್​​ ರೂಮ್​ನ​ಲ್ಲಿ ಯುವತಿ ಶವ ಪತ್ತೆ ಕೇಸ್​: ಪ್ರಬುದ್ಧಳ ಕೈ ಕೋಯ್ದು ಕೊಲೆಗೈದ ಬಾಲಕ

ಡ್ರಗ್ ಪೆಡ್ಲರ್ ಬಂಧಿಸಿದ ಪೊಲೀಸರು

ನಗರದ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಡ್ರಗ್ ಪೆಡ್ಲರ್ ರೂಪೇಶ್​​ನನ್ನು ಬಂಧಿಸಿದ್ದಾರೆ. ಆರೋಪಿ ರೂಪೇಶ್ ಆಫ್ರಿಕಾ, ನೈಜೀರಿಯನ್ ಪೆಡ್ಲರ್​ಗಳಿಂದ ಡ್ರಗ್ಸ್​​ ತರಿಸಿಕೊಳ್ಳುತ್ತಿದ್ದನು. ಬಳಿಕ ನಗರದಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ಡ್ರಗ್ಸ್​ ಸಪ್ಲೈ ಮಾಡುತ್ತಿದ್ದನು.

ಇದನ್ನು ತಿಳಿದ ಪೊಲೀಸರು ಆರೋಪಿ ರೂಪೇಶ್​ನನ್ನು ಬಂಧಿಸಿದ್ದಾರೆ. ಬಂಧಿತನಿಂದ 120 ಗ್ರಾಂ ಸಿಂಥೆಟಿಕ್ ಡ್ರಗ್, ಎಮ್​ಡಿಎಮ್​ಎ ವಶಕ್ಕೆ ಪಡೆದುಕೊಳ್ಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
Follow Us