AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದ್ದಿ ಬಿತ್ತರಿಸುವುದಾಗಿ ಬೆದರಿಕೆ, ಸುಲಿಗೆ: ಖಾಸಗಿ ಯೂಟ್ಯೂಬ್ ವಾಹಿನಿ ಮಾಲೀಕ ಸೇರಿದಂತೆ ಇಬ್ಬರ ಬಂಧನ

ಖಾಸಗಿ ಯೂಟ್ಯೂಬ್ ವಾಹಿನಿಯಲ್ಲಿ ಸುದ್ದಿ ಬಿತ್ತರಿಸುವುದಾಗಿ ಬೆದರಿಕೆವೊಡ್ಡಿ, ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಬೆದರಿಕೆ, ಸುಲಿಗೆ ಕೇಸ್​ಗಳು ಕೂಡ ದಾಖಲಾಗಿದ್ದವು.

ಸುದ್ದಿ ಬಿತ್ತರಿಸುವುದಾಗಿ ಬೆದರಿಕೆ, ಸುಲಿಗೆ: ಖಾಸಗಿ ಯೂಟ್ಯೂಬ್ ವಾಹಿನಿ ಮಾಲೀಕ ಸೇರಿದಂತೆ ಇಬ್ಬರ ಬಂಧನ
ಬಂಧಿತರು
Shivaprasad B
| Edited By: |

Updated on: Jul 31, 2023 | 4:38 PM

Share

ಬೆಂಗಳೂರು, ಜುಲೈ 31: ಸುದ್ದಿ ಬಿತ್ತರಿಸುವುದಾಗಿ ಬೆದರಿಕೆವೊಡ್ಡಿ ಸುಲಿಗೆ ಮಾಡುತ್ತಿದ್ದ ಖಾಸಗಿ ಯೂಟ್ಯೂಬ್ ವಾಹಿನಿ (YouTube channel) ಮಾಲೀಕ ಸೇರಿದಂತೆ ಇಬ್ಬರನ್ನು ಸೋಮವಾರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆತ್ಮಾನಂದ್, ಆನಂದ್@ ಫಿಗರ್ ಆನಂದ್ ಬಂಧಿತರು. ಗ್ಯಾಸ್ ರೀಫಿಲಿಂಗ್ ಅಡ್ಡೆ, ಅಕ್ರಮ ಗೋಮಾಂಸ ಸಾಗಣೆ ವಾಹನ, ಸ್ಪಾಗಳಲ್ಲಿ ಬೆದರಿಸಿ ಲಕ್ಷಾಂತರ ರೂ. ಹಣ ವಸೂಲಿ ಮಾಡುತ್ತಿದ್ದ ಆರೋಪ ಹಿನ್ನೆಲೆ ನಗರದ ವಿವಿಧ ಠಾಣೆಗಳಲ್ಲಿ ಬೆದರಿಕೆ, ಸುಲಿಗೆ ಕೇಸ್ ದಾಖಲಾಗಿದ್ದವು. ಸದ್ಯ ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕೌಟುಂಬಿಕ ಕಲಹ, ಪತಿಯಿಂದಲೇ ಪತ್ನಿಯ ಕೊಲೆ

ಮಂಡ್ಯ: ಕೌಟುಂಬಿಕ ಕಲಹ ಹಿನ್ನೆಲೆ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆ ಪಾಂಡವಪುರ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ನಡೆದಿದೆ. ಸೌಮ್ಯ(28 ) ಹತ್ಯೆಯಾದ ಮಹಿಳೆ. ಪತಿ ಗಣೇಶ್​ನಿಂದ ಕೃತ್ಯವೆಸಗಿದ್ದು, ಘಟನೆ ನಂತರ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪಾಂಡವಪುರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಸಹೋದರಿ ಮೇಲೆ ಕಣ್ಣು ಹಾಕಿದ್ದವನ ಕಾಲು ಮುರಿದಿದ್ದ ಸಹೋದರನ ಕೊಲೆ

ಶ್ರೀಗಂಧದ ಮರ ಕಳ್ಳತನ ಮಾಡಿ ಸಾಗಿಸುತ್ತಿದ್ದ ಗ್ಯಾಂಗ್ ಬಂಧನ

ಬೀದರ್: ಅರಣ್ಯ ಇಲಾಖೆ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಮೂಲಕ ಶ್ರೀಗಂಧದ ಮರ ಕಳ್ಳತನ ಮಾಡಿ ಸಾಗಿಸುತ್ತಿದ್ದ ಗ್ಯಾಂಗ್​​ನ್ನು ಬಂಧಿಸಿದ್ದಾರೆ. ಜಿಲ್ಲೆಯ ಭಾಲ್ಕಿ ತಾಲೂಕಿನ ತಳವಾಡ ಬಳಿ ಶ್ರೀಗಂಧದ ಮರ ಕದ್ದು ಸಾಗಿಸುತ್ತಿದ್ದ 3 ಜನರನ್ನು ಬಂಧಿಸಲಾಗಿದ್ದು, 3 ಲಕ್ಷ ಮೌಲ್ಯದ 60 ಕೆಜಿ ಶ್ರೀಗಂಧ, ಶ್ರೀಗಂಧ ಕಟ್ ಮಾಡುವ ಮಶೀನ್, ಒಂದು ಕಾರು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಜುವೆಲ್ಲರಿ ಶಾಪ್ ಮಾಲೀಕನ ಕಳ್ಳಾಟ ಬಯಲು, ಚಿನ್ನ ಕಳ್ಳತನವಾಗಿದೆ ಎಂದು ದೂರು ನೀಡಿದ್ದವನನ್ನೇ ಬಂಧಿಸಿದ ಪೊಲೀಸ್ರು

ರಾತ್ರೋರಾತ್ರಿ ಕಳ್ಳರ ಕೈಚಳಕ: ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಲೂಟಿ ಕಳ್ಳತನ

ಗದಗ: ರಾತ್ರೋರಾತ್ರಿ ಕಳ್ಳರು ಕೈಚಳಕ ತೋರಿಸುವ ಮೂಲಕ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಲೂಟಿ ಕಳ್ಳತನ ಮಾಡಿರುವಂತಹ ಘಟನೆ ಗದಗ ನಗರದ ಧೋಬಿ ಘಾಟ ಬಳಿಯ ಡಾ. ಚೆನ್ನಮ್ಮ ರೆಡ್ಡಿ ಎಂಬುವರ ಮನೆಯಲ್ಲಿ ನಡೆದಿದೆ. ತವರು ಮನೆಗೆ ಹೋಗಿ ವಾಪಸ್ ಬರುವಷ್ಟರಲ್ಲೇ ಮನೆ ಲೂಟಿ ಮಾಡಲಾಗಿದೆ. ಸ್ಥಳಕ್ಕೆ ಗ್ರಾಮೀಣ ಪೊಲೀಸರು, ಬೆರಳಚ್ವು ತ‌ಜ್ಞರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮದುವೆಯಲ್ಲಿ ಮಗಳಿಗೆ ಪ್ರೀತಿಯಿಂದ ಕೊಟ್ಟ ಬೆಳ್ಳಿ ವಸ್ತುಗಳ ಕಳ್ಳತನವಾಗಿದ್ದರಿಂದ ತಾಯಿ ಕಣ್ಣೀರು ಹಾಕಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.