ಬೆಂಗಳೂರು, ಜನವರಿ 24: ಹೆಚ್ಚಿನ ಲಾಭ ಕೊಡುತ್ತೇವೆ ಎಂದು ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದ ಗ್ಯಾಂಗ್ ಅನ್ನು ಕಾಟನ್ ಪೇಟೆ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ಪ್ರತಾಪ್ ರೆಡ್ಡಿ, ಒಬಳೇಶ್, ಮಣಿ ಮತ್ತು ಗೋಪಿ ಬಂಧಿತ ಅರೋಪಿಗಳು. ಆರೋಪಿಗಳು ಕೆ.ಆರ್.ಪುರದಲ್ಲಿ ಎಸ್ಫೈಎಸ್ ಎಂಬ ಕಂಪನಿಯನ್ನು ಶುರುಮಾಡಿದ್ದರು. ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೇ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿ ಆಂಧ್ರ ಪ್ರದೇಶ (Andhra Pradesh) ಮತ್ತು ಕರ್ನಾಟಕದ (Karnataka) ಜನರಿಂದ ಹಣ ಪೀಕಿದ್ದರು.
ಒಂದು ಲಕ್ಷ ಹೂಡಿಕೆ ಮಾಡಿದರೇ ತಿಂಗಳಿಗೆ 19 ಪರ್ಸೆಂಟ್ ಲಾಭ ಕೊಡುವುದಾಗಿ ನಂಬಿಸಿದ್ದರು. ಅದರಂತೆ ಪ್ರಾರಂಭದಲ್ಲಿ ಹಣ ವಾಪಸ್ಸು ಕೊಟ್ಟಿದ್ದಾರೆ. ನಂತರ ಹಣವನ್ನು ಕೊಡದೆ, ನಿಮ್ಮ ಹಣವನ್ನು ಹರಿಯಾಣದಲ್ಲಿ ಹೂಡಿಕೆ ಮಾಡಿದ್ದೇವೆ, ಅಲ್ಲಿ ಲಾಭ ಬಂದಮೇಲೆ ಕೊಡುವುದಾಗಿ ಹೂಡಿಕೆದಾರರಿಗೆ ಹೇಳಿದ್ದರು. ಆದರೆ ಸುಮಾರು ದಿನಗಳು ಕಾಯ್ದರು ಹಣ ನೀಡಲಿಲ್ಲ.
ಇದನ್ನೂ ಓದಿ: ಮಲತಂದೆಯಿಂದಲೇ ಮಗಳನ್ನು ವೇಶ್ಯೆವಾಟಿಕೆಗೆ ತಳ್ಳಿದ್ದ ಆರೋಪ: ಆರೋಪಿಗಳ ಬಂಧನ
ಇದರಿಂದ ರೋಸಿಹೋದ ಆಂಧ್ರ ಪ್ರದೇಶ ಮೂಲದ ಹೂಡಿಕೆದಾರ ಸಂದಡಿ ನರಸಿಮ್ಮ ರೆಡ್ಡಿ ಎಂಬುವವರು ಕಾಟನ್ ಪೇಟೆಗೆ ಪೊಲೀಸ್ ಠಾಣೆಗೆ ದೂರು ನೀಡಿದರು. ದೂರು ದಾಖಲಿಸಿಕೊಂಡು ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದಾಗ ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ಒಟ್ಟು ನಾಲ್ಕು ಬ್ಯಾಂಕ್ ಅಕೌಂಟ್ಗಳ ಮೂಲಕ 30 ಕೋಟಿ ರೂ. ವ್ಯವಹಾರವಾಗಿರುವುದು ಪತ್ತೆಯಾಗಿದೆ. ಸದ್ಯ ಯಾವ ಯಾವ ಅಕೌಂಟ್ಗೆ ಹಣ ಹೋಗಿದೆ ಎಂದು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.
ತನಿಖೆ ವೇಳೆ ಹೊರಗೆ ಇದ್ದರೆ, ಜನಕ್ಕೆ ಕೈಗೆ ಸಿಕ್ಕರೇ ಕಷ್ಟ ಎಂದು ಪ್ರತಾಪ್ ರೆಡ್ಡಿ ಕೊಲಾರದಲ್ಲಿ 307 ಕೇಸ್ ಒಂದರಲ್ಲಿ ಅರೆಸ್ಟ್ ಆಗಿ ಜೈಲಿನಲ್ಲಿದ್ದನು. ಸದ್ಯ ಪ್ರತಾಪ್ನನ್ನು ಬಾಡಿ ವಾರೆಂಟ್ ಮೂಲಕ ಕರೆದುಕೊಂಡು ಬಂದು ಕಾಟನ್ ಪೇಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ವೆಂಕಟೇಶ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಅಕ್ರಮವಾಗಿ ವಶಕ್ಕೆ ಪಡೆದಿದ್ದಾರೆ ಎಂದು ವೆಂಕಟೇಶ ಆರೋಪ ಮಾಡಿದ್ದಾನೆ. ಆದರೆ ನೋಟಿಸ್ ನೀಡಿಯೇ ವಿಚಾರಣೆ ನಡೆಸಿದ್ದೆವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ