ನಟ ಬೊಮನ್ ಇರಾನಿ ಸೋದರ ಸಂಬಂಧಿ ಮನೆಯಲ್ಲಿ ಕಳ್ಳತನ ಮಾಡಿದ್ದ ತಾಯಿ-ಮಗ ಬೆಂಗಳೂರಿನಲ್ಲಿ ಅರೆಸ್ಟ್

ಐಪಿಎಲ್ ಬೆಟ್ಟಿಂಗ್​ನಿಂದ ಆದ ನಷ್ಟ ಸರಿದೂಗಿಸಲು ತಾಯಿ-ಮಗ ಕಳ್ಳತನದ ಕೃತ್ಯ ಆರಂಭಿಸಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ನಟ ಬೊಮನ್ ಇರಾನಿ ಸೋದರ ಸಂಬಂಧಿ ಮನೆಯಲ್ಲಿ ಕಳ್ಳತನ ಮಾಡಿದ್ದ ತಾಯಿ-ಮಗ ಬೆಂಗಳೂರಿನಲ್ಲಿ ಅರೆಸ್ಟ್
ಬೊಮನ್ ಇರಾನಿ (ಸಂಗ್ರಹ ಚಿತ್ರ)
TV9kannada Web Team

| Edited By: ganapathi bhat

Apr 07, 2022 | 10:43 AM

ಬೆಂಗಳೂರು: ಬಾಲಿವುಡ್ ನಟ ಬೊಮನ್ ಇರಾನಿ ಸೋದರ ಸಂಬಂಧಿ, ಖುರ್ಷೀದ್ ಇರಾನಿ ಮನೆಯಲ್ಲಿ ಕಳ್ಳತನ ನಡೆಸುತ್ತಿದ್ದ ಮನೆಯ ಕೆಲಸದಾಕೆ ಮತ್ತು ಆಕೆಯ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಅಬ್ಬಾಸ್ ಅಲಿ ರಸ್ತೆಯ, ಎಂಬಸ್ಸಿ ಕ್ರೌನ್ ಅಪಾರ್ಟ್​ಮೆಂಟ್​ನಲ್ಲಿ ಕಳೆದ ಮೂರು ವರ್ಷಗಳಿಂದ ಈ ಖದೀಮರು ಸ್ವಲ್ಪ ಸ್ವಲ್ಪವೇ ಸಂಪತ್ತನ್ನು ದೋಚುತ್ತಿದ್ದರು. ಹೀಗೆ ಕಳ್ಳತನವಾಗುತ್ತಿದ್ದದ್ದನ್ನು ಈ ಡಿಸೆಂಬರ್​ನಲ್ಲಿ ಖುರ್ಷೀದ್ ಇರಾನಿ ಗಮನಿಸಿ ಪೊಲೀಸರಿಗೆ ದೂರು ನೀಡಿದ್ದರು.

ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಕಳ್ಳತನ ನಡೆಸುತ್ತಿದ್ದ ಮನೆಕೆಲಸದವಳು ಮತ್ತು ಆತನ ಮಗನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಕೆ.ಜಿ. ಹಳ್ಳಿಯ ಮೇರಿ ಅಲೈಸ್ (65) ಮತ್ತು ಮೈಕೆಲ್ ವಿನ್ಸೆಂಟ್ (22) ಕಳ್ಳತನ ನಡೆಸುತ್ತಿದ್ದ ಆರೋಪಿಗಳು.

ಖುರ್ಷೀದ್ ಇರಾನಿ ನೀಡಿದ ದೂರಿನಂತೆ, 700 ಗ್ರಾಂ ತೂಕದ ಒಟ್ಟು ಏಳು ಚಿನ್ನದ ಬಿಸ್ಕೆಟ್​ಗಳು, ₹ 85 ಲಕ್ಷ ಹಣ, ₹ 11 ಲಕ್ಷ ಮೊತ್ತದ 15 ಸಾವಿರ ಅಮೆರಿಕ ಡಾಲರ್ ಮನೆಯಿಂದ ಕಳುವಾಗಿತ್ತು.

ಕಳ್ಳತನ ಮಾಡುತ್ತಿದ್ದ ತಾಯಿ ಮೆರಿ ಅಲೈಸ್ ಕಳೆದ 25 ವರ್ಷಗಳಿಂದ ಖುರ್ಷೀದ್ ಇರಾನಿ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಮಗ ವಿನ್ಸೆಂಟ್ ಅನಿಮೇಷನ್ ಕೋರ್ಸ್ ನಡೆಸುತ್ತಿದ್ದ. ಐಪಿಎಲ್ ಬೆಟ್ಟಿಂಗ್​ನಲ್ಲೂ ಆತ ತೊಡಗಿಸಿಕೊಂಡು ನಷ್ಟ ಅನುಭವಿಸಿದ್ದ ಎಂದು ತಿಳಿದುಬಂದಿದೆ. ಐಪಿಎಲ್ ಬೆಟ್ಟಿಂಗ್​ನಿಂದ ಆದ ನಷ್ಟ ಸರಿದೂಗಿಸಲು ತಾಯಿ-ಮಗ ಕಳ್ಳತನದ ಕೃತ್ಯ ಆರಂಭಿಸಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada