ಕಳ್ಳತನದ ಮೊಬೈಲ್​ಗಳನ್ನು ಠಾಣೆಗೆ ಪೋಸ್ಟ್ ಮಾಡಿದರೆ ನೋ ಕೇಸ್; ದೇಶದಲ್ಲೇ ಮೊದಲ ಬಾರಿ ಕಳ್ಳರಿಗೂ ಒಂದು ಅವಕಾಶ ಕೊಟ್ಟ ಬೆಂಗಳೂರು ಪೊಲೀಸರು

ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಪೊಲೀಸರು ಕಳ್ಳರಿಗೂ ಒಂದು ಅವಕಾಶವನ್ನು ನೀಡಿದ್ದಾರೆ. ಟ್ರಾಫಿಕ್ ದಂಡ ಬಾಕಿ ಇರಿಸಿದ ವಾಹನ ಚಾಲಕರು ದಂಡದ ಮೊತ್ತ ಪಾವತಿಸಲು ಡಿಸ್ಕೌಂಟ್ ಆಫರ್ ಕೊಡಲಾಗಿತ್ತು. ಅದೇ ರೀತಿ, ಕಳ್ಳತನ ಮಾಡಿದ ಮೊಬೈಲ್​ಗಳನ್ನು ಪೋಸ್ಟ್​ ಮೂಲಕ ಹಿಂದಿರುಗಿಸಿದರೆ ಅಂತಹ ಕಳ್ಳರ ವಿರುದ್ಧ ಪ್ರಕರಣ ದಾಖಲಿಸದಿರುವ ನಿರ್ಧಾರಕ್ಕೆ ಬಂದಿದ್ದಾರೆ.

ಕಳ್ಳತನದ ಮೊಬೈಲ್​ಗಳನ್ನು ಠಾಣೆಗೆ ಪೋಸ್ಟ್ ಮಾಡಿದರೆ ನೋ ಕೇಸ್; ದೇಶದಲ್ಲೇ ಮೊದಲ ಬಾರಿ ಕಳ್ಳರಿಗೂ ಒಂದು ಅವಕಾಶ ಕೊಟ್ಟ ಬೆಂಗಳೂರು ಪೊಲೀಸರು
ದೇಶದಲ್ಲೇ ಮೊದಲ ಬಾರಿ ಕಳ್ಳರಿಗೂ ಒಂದು ಅವಕಾಶ ಕೊಟ್ಟ ಬೆಂಗಳೂರು ಪೊಲೀಸರು; ಕಳ್ಳತನದ ಮೊಬೈಲ್​ಗಳನ್ನು ಠಾಣೆಗೆ ಪೋಸ್ಟ್ ಮಾಡಿದರೆ ನೋ ಕೇಸ್
Edited By: Rakesh Nayak Manchi

Updated on: Feb 16, 2024 | 9:36 AM

ಬೆಂಗಳೂರು, ಫೆ.16: ಬಾಕಿ ಟ್ರಾಫಿಕ್ ದಂಡ ಪಾವತಿಗಾಗಿ ಪ್ರಯೋಗಿಸಿದ ಡಿಸ್ಕೌಂಟ್ ಆಫರ್ ಯಶಸ್ವಿ ಬೆನ್ನಲ್ಲೇ, ಬೆಂಗಳೂರು ಪೊಲೀಸರು, ಕಳ್ಳತನ ಮಾಡಿದ ಮೊಬೈಲ್​ಗಳನ್ನು (Mobile Theft) ಪೋಸ್ಟ್​ ಮೂಲಕ ಹಿಂದಿರುಗಿಸಿದರೆ ಅಂತಹ ಕಳ್ಳರ ವಿರುದ್ಧ ಪ್ರಕರಣ ದಾಖಲಿಸದಿರುವ ನಿರ್ಧಾರಕ್ಕೆ ಬಂದಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಪೊಲೀಸರು (Bengaluru Police) ಕಳ್ಳರಿಗೂ ಒಂದು ಅವಕಾಶವನ್ನು ನೀಡಿದ್ದಾರೆ.

ಇತ್ತೀಚೆಗೆ, ಬೆಂಗಳೂರು ನಗರದಲ್ಲಿ ಮೊಬೈಲ್ ಸ್ನ್ಯಾಚಿಂಗ್ ಹೆಚ್ಚಾಗುತ್ತಿದೆ. ಪೊಲೀಸರು ಕೂಡ ಶ್ರಮವಹಿಸಿ ಮೊಬೈಲ್ ಕಳ್ಳರನ್ನ ಬಂಧಿಸುತ್ತಲೇ ಇದ್ದಾರೆ. ಆದರೆ ಮೊಬೈಲ್ ಸ್ನ್ಯಾಚರ್ಸ್ ಹಾವಳಿ ಕಡಿಮೆಯಾಗುತ್ತಿಲ್ಲ. ಹೀಗಾಗಿ ನಗರ ಪೊಲೀಸರು ಹೊಸ ವಿಧಾನ ಕಂಡುಕೊಂಡಿದ್ದಾರೆ.

ತಪ್ಪನ್ನು ಅರಿತು ಮೊಬೈಲ್ ಪೋಸ್ಟ್ ಬಾಕ್ಸ್​ಗೆ ಹಾಕಬೇಕು. ಆದರೆ ಕಳ್ಳತನ ಮಾಡಿಯೂ ಪೊಲೀಸರು ಕೊಟ್ಟ ಅವಕಾಶವನ್ನ ಮಿಸ ಯೂಸ್ ಮಾಡಿದರೆ ಕ್ರಮ ಕೈಗೊಳ್ಳುತ್ತಾರೆ. ಅಕಸ್ಮಾತ್, ಮೊಬೈಲ್ ರಸ್ತೆಯಲ್ಲಿ ಸಿಕ್ಕಿದರೂ ಕೂಡ ಪೊಲೀಸ್ ಠಾಣೆಗೆ ಒಪ್ಪಿಸುವ ಪ್ರಮೇಯ ಇಲ್ಲ. ಅಂತಹ ಮೊಬೈಲ್​ಗಳನ್ನೂ ಪೋಸ್ಟ್​ ಬಾಕ್ಸ್​ಗೆ ಹಾಕಿದರೆ ಸಾಕು. ಈ ಮೊಬೈಲ್​ಗಳನ್ನು ಮಾಲೀಕರಿಗೆ ತಲುಪಿಸುವ ಜವಾಬ್ದಾರಿ ಪೊಲೀಸರದ್ದು.

ಇದನ್ನೂ ಓದಿ: ಹಳಿಯಾಳದಲ್ಲಿ ಬುರ್ಖಾ ಧರಿಸಿಕೊಂಡು ಬಂದ‌ ಮಹಿಳೆಯರ ಗ್ಯಾಂಗ್‌ನಿಂದ ಚಿನ್ನ ಕಳ್ಳತನ

ಇನ್ನು ಮುಂದೆ, ಮೊಬೈಲ್ ಕಳೆದು ಹೋದರೆ ಇ – ಲಾಸ್ಟ್​ನಲ್ಲಿ, ಎಫ್​ಐಆರ್, ಎನ್​ಸಿಆರ್ ಮಾಡಿಸುವ ಅವಶ್ಯಕತೆ ಇಲ್ಲ. ಮೊಬೈಲ್ ಕಳೆದು ಹೋದ ಬಳಿಕೆ ಕಂಟ್ರೊಲ್ ರೂಂಗೆ ತಿಳಿಸಿ ನಂತರ Central equipment identity register ಆ್ಯಪ್ ಮುಖಾಂತರ ಮೊಬೈಲ್ ನಂಬರ್ ಐಎಂಇಐ ನಂಬರ್ ನಮೂದಿಸಬೇಕು.

ಪೊಲೀಸರು ಈ ಆ್ಯಪ್ ಮುಖಾಂತರ ಸಾಧ್ಯವಾಷ್ಟು ಬೇಗ ಮೊಬೈಲ್ ಹಿಂದಿರುಗಿಸುವ ವ್ಯವಸ್ಥೆ ಮಾಡಲಿದ್ದಾರೆ. ಕಳ್ಳರು ಕೂಡ ಇದೇ ಪೋಸ್ಟ್ ಬಾಕ್ಸ್​ನಲ್ಲಿ ಮೊಬೈಲ್ ಡಂಪ್ ಮಾಡಿದರೆ ಅವರ ವಿರುದ್ಧ ಕೇಸ್ ದಾಖಲಾಗುವುದಿಲ್ಲ.

ಶೀಘ್ರದಲ್ಲೇ ಸಿಇಐಆರ್ ಲಾಂಚ್

ಪೊಲೀಸರು ಇನ್ನೆರಡು ದಿನದಲ್ಲಿ ಸಿಇಐಆರ್ ಲಾಂಚ್ ಮಾಡಲಿದ್ದು, ಮೊದಲಿಗೆ ಕಮಾಂಡ್ ಸೆಂಟರ್ ಬಳಿ ಪೋಸ್ಟ್ ಬಾಕ್ಸ್ ಇಡಲು ನಿರ್ಧಾರ ಮಾಡಲಾಗಿದೆ. ಪೊಲೀಸರ ಈ ಪ್ಲಾನ್ ವರ್ಕ್ ಆಗುತ್ತಾ ಎಂಬುದನ್ನ ಕಾದು ನೋಡಬೇಕಿದೆ. ಪೊಲೀಸರ ಈ ಯೋಜನೆ ಯಶಸ್ವಿಯಾದರೆ ಇದೊಂದು ವಿನೂತನ ಪ್ರಯೋಗವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Rachappaji Naik S

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
Follow Us