ನೆಲಮಂಗಲ: ಯುವತಿ ಮೇಲೆ ಅತ್ಯಾಚಾರ, ಆರೋಪಿ ಅರೆಸ್ಟ್​​

| Updated By: ವಿವೇಕ ಬಿರಾದಾರ

Updated on: Feb 05, 2024 | 12:20 PM

ಬೀದರ್​ ಮೂಲದ ಶಿವಕುಮಾರ್​ ಹೊಸಳ್ಳಿ ಆರು ವರ್ಷದ ಹಿಂದೆ ನೆಲಮಂಗಲದ ಮೂಲದ ಯುವತಿಗೆ ಉಡುಪಿಯಲ್ಲಿ ಪರಿಚಯವಾಗಿದ್ದಾನೆ. ಯುವತಿಯ ನಂಬರ್​ ಪಡೆದು ಮೆಸೆಜ್​, ಫೋನ್​ ಕಾಲ್​ ಮಾಡಲು ಆರಂಭಿಸಿದ್ದಾನೆ. ಬಳಿಕ ಒಂದು ದಿನ ನೆಲಮಂಗಲದಲ್ಲಿರುವ ಯುವತಿ ಮನೆಗೆ ಹೋಗಿದ್ದಾನೆ. ಮುಂದೇನಾಯ್ತು ಈ ಸ್ಟೋರಿ ಓದಿ..

ನೆಲಮಂಗಲ: ಯುವತಿ ಮೇಲೆ ಅತ್ಯಾಚಾರ, ಆರೋಪಿ ಅರೆಸ್ಟ್​​
ನೆಲಮಂಗಲ ಟೌನ್​ ಪೊಲೀಸ್​ ಠಾಣೆ
Follow us on

ನೆಲಮಂಗಲ, ಫೆಬ್ರವರಿ 05: ಯುವತಿ ಮೇಲೆ ಅತ್ಯಾಚಾರವೆಸಗಿರುವ ಆರೋಪಿ ವಿರುದ್ಧ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲ (Nelamangal) ಟೌನ್ ಪೊಲೀಸ್ (Police)​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೀದರ್ (Bidar) ಮೂಲದ ಯುವಕ ಶಿವಕುಮಾರ್ ಹೊಸಳ್ಳಿ (25) ಅತ್ಯಾಚಾರವೆಸಗಿದ ಆರೋಪಿ. ಬೆಂಗಳೂರಿನ ಚಿಕ್ಕಪೇಟೆಯಲ್ಲಿ ವಾಸವಾಗಿರುವ ಶಿವಕುಮಾರ್, ಆರು ವರ್ಷದ ಹಿಂದೆ (2018) ರಲ್ಲಿ ಉಡುಪಿಯಲ್ಲಿ (Udupi) ನಡೆದ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಯುವತಿಗೆ ಪರಿಚಯವಾಗಿದ್ದಾನೆ.

ಬಳಿಕ ಶಿವಕುಮಾರ್​ ಯುವತಿಯ ತಾಯಿ ಬಳಿ ಸಂತ್ರಸ್ತೆಯ ಮೊಬೈಲ್ ನಂಬರ್ ತೆಗೆದುಕೊಂಡು ಮೆಸೇಜ್ ಮಾಡಲು ಆರಂಭಿಸಿದ್ದಾನೆ. 2018ರ ಮಾರ್ಚ್​​ನಲ್ಲಿ ನೆಲಮಂಗಲದಲ್ಲಿರುವ ಯುವತಿ ಮನೆಗೆ ಶಿವಕುಮಾರ್​ ಹೋಗಿದ್ದಾನೆ. ಈ ವೇಳೆ ಯುವತಿ ಮನೆಯಲ್ಲಿ ಯಾರೂ ಇರಲಿಲ್ಲ. ಈ ಸಮಯದಲ್ಲಿ ಯುವತಿ ಮೇಲೆ ಅತ್ಯಾಚರವೆಸಗಿದ್ದಾನೆ. ಈ ವೇಳೆ ಯುವತಿಗೆ ಗೊತ್ತಿಲ್ಲದಹಾಗೆ ಶಿವಕುಮಾರ್​ ಫೋನಿನಲ್ಲಿ ಫೋಟೋ ತೆಗೆದು, ವಿಡಿಯೋ ಮಾಡಿಕೊಂಡಿದ್ದಾನೆ. ಆಗ ಯುವತಿಗೆ 16 ವರ್ಷ.

ಈ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ, ಹಲವಾರು ಬಾರಿ ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ಸಂತ್ರಸ್ತೆಯಿಂದ 85,000 ಹಣವನ್ನು ಶಿವಕುಮಾರ್​ ಪಡೆದುಕೊಂಡಿದ್ದಾನೆ. ಬಳಿಕ ಸಂತ್ರಸ್ತೆಯ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸಂತ್ರಸ್ತೆಯ ಚಿಕ್ಕಪ್ಪನ ಮಗಳ ಮೊಬೈಲ್​ಗೆ ಕಳಸಿದ್ದಾನೆ.

ಇದನ್ನೂ ಓದಿ: ತುಮಕೂರು: ಕುಡಿದ ಅಮಲಿನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಸ್ಥಳೀಯರಿಂದ ಬಾಲಕಿಯ ರಕ್ಷಣೆ

ಜನವರಿ 30 ರಂದು ಸಂತ್ರಸ್ತೆ ಮತ್ತು ಅವರ ತಂದೆ-ತಾಯಿ ಎಲ್ಲರೂ ನೆಲಮಂಗಲದ ಗಣೇಶನ ಗುಡಿ ದೇವಸ್ಥಾನಕ್ಕೆ ಹೋದಾಗ, ಶಿವಕುಮಾರ್​ ಸಂತ್ರಸ್ತೆಗೆ ಕರೆ ಮಾಡಿ ಬಾ ನಾನು ನಿನ್ನೊಂದಿಗೆ ಸಂಭೋಗ ಮಾಡಬೇಕು ಎಂದು ಬಲವಂತವಾಗಿ ಪೀಡಿಸಿದ್ದಾನೆ. ಈ ವಿಚಾರವನ್ನು ಸಂತ್ರಸ್ತೆ ತಂದೆ ತಾಯಿಗೆ ತಿಳಿಸಿದ್ದಾರೆ. ನಂತರ ಈ ಬಗ್ಗೆ ದೂರು ನೀಡುವುದು ಒಳ್ಳೆಯದೆಂದು ತೀರ್ಮಾನಿಸಿ ಸಂತ್ರಸ್ತೆ ನೆಲಮಂಗಲ ಟೌನ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿವಕುಮಾರ್ ಹೊಸಳ್ಳಿ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಸಂತ್ರಸ್ತೆ ಆಗ್ರಹಿಸಿದ್ದಾರೆ.

ಕಲಂ 66(E), 67(A) IT ACT, ಕಲಂ 4, 5( L), 14, 15, 6 POCSO ACT, ಕಲಂ 354(A), 354(D), 354(C), 376(2)(n), 506, 507, 384 IPC ಅಡಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ