ಅಪ್ರಾಪ್ತೆ ಮೇಲೆ ಅತ್ಯಾಚಾರ, ಬ್ಲ್ಯಾಕ್​​ಮೇಲ್ ಪ್ರಕರಣ; ಆರೋಪಿಗೆ 20 ವರ್ಷ ಶಿಕ್ಷೆ, 62 ಸಾವಿರ ರೂ ದಂಡ ವಿಧಿಸಿದ ನ್ಯಾಯಾಲಯ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಜೂರು ಗ್ರಾಮದ ನಿವಾಸಿಯಾಗಿರುವ ಆರೋಪಿ, ಪ್ರತಿ ದಿನ ಬಾಲಕಿಯನ್ನು ತನ್ನ ಆಟೋದಲ್ಲಿ ಶಾಲೆಗೆ ಬಿಡುತಿದ್ದ. ಈ ವೇಳೆ ಒತ್ತಾಯ ಪೂರ್ವಕವಾಗಿ ಬಾಲಕಿಯ ಫೋಟೋ, ವಿಡಿಯೋ ಮಾಡಿ ವೈರಲ್ ಮಾಡುವುದಾಗಿ ಬೆದರಿಸಿ ಅತ್ಯಾಚಾರವೆಸಗಿದ್ದಾನೆ.

ಅಪ್ರಾಪ್ತೆ ಮೇಲೆ ಅತ್ಯಾಚಾರ, ಬ್ಲ್ಯಾಕ್​​ಮೇಲ್ ಪ್ರಕರಣ; ಆರೋಪಿಗೆ 20 ವರ್ಷ ಶಿಕ್ಷೆ, 62 ಸಾವಿರ ರೂ ದಂಡ ವಿಧಿಸಿದ ನ್ಯಾಯಾಲಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jan 26, 2024 | 7:03 AM

ಉಡುಪಿ, ಜ.26: ಅಪ್ರಾಪ್ತ ಬಾಲಕಿಯನ್ನು ಅರೆನಗ್ನಗೊಳಿಸಿ ವಿಡಿಯೋ ಚಿತ್ರೀಕರಣ ಮಾಡಿ ವಿಡಿಯೋ ವೈರಲ್ ನೆಪದಲ್ಲಿ (Blackmail) ರೆಸಾರ್ಟ್, ಲಾಡ್ಜ್​ಗೆ ಕರೆದುಕೊಂಡು ಹೋಗಿ ಬಾಲಕಿ (Girl) ಮೇಲೆ ನಿರಂತರ ಅತ್ಯಾಚಾರವೆಸಗಿದ ಆರೋಪಿಗೆ ಜೈಲು ಶಿಕ್ಷೆ ಪ್ರಕಟವಾಗಿದೆ. 20 ವರ್ಷ ಕಠಿಣ ಶಿಕ್ಷೆ, 62 ಸಾವಿರ ರೂಪಾಯಿ ದಂಡ ವಿಧಿಸಿ ಉಡುಪಿ ಜಿಲ್ಲಾ ಪೋಕ್ಸೋ ವಿಶೇಷ ಕೋರ್ಟ್​​​​​​​​ ಆದೇಶ ಹೊರಡಿಸಿದೆ. ಮಜೂರು ನಿವಾಸಿ ಶಂಶುದ್ದೀನ್ (24) ಶಿಕ್ಷೆಗೆ ಗುರಿಯಾದ ಆರೋಪಿ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಜೂರು ಗ್ರಾಮದ ನಿವಾಸಿಯಾಗಿರುವ ಆರೋಪಿ, ಪ್ರತಿ ದಿನ ಬಾಲಕಿಯನ್ನು ತನ್ನ ಆಟೋದಲ್ಲಿ ಶಾಲೆಗೆ ಬಿಡುತಿದ್ದ. ಆಟೋದಲ್ಲಿ ಶಾಲೆಗೆ ಬಿಡ್ತಿದ್ದ ವೇಳೆ ಒತ್ತಾಯ ಪೂರ್ವಕವಾಗಿ ಬಾಲಕಿಯ ಫೋಟೋ, ವಿಡಿಯೋ ಮಾಡಿ ವೈರಲ್ ಮಾಡುವುದಾಗಿ ಬೆದರಿಸಿದ್ದ. ನನ್ನ ಜೊತೆ ಬಂದರೆ ವಿಡಿಯೋ ಡಿಲೀಟ್ ಮಾಡುವುದಾಗಿ ನಂಬಿಸಿದ್ದ. ಆರೋಪಿಯ ಮಾತುಗಳನ್ನು ನಂಬಿದ ಬಾಲಕಿ ಆತನ ಜೊತೆ ಬರಲು ಒಪ್ಪಿಕೊಂಡಿಳು. ಆಗ ಆರೋಪಿ ಬಾಲಕಿಯನ್ನು ಲಾಡ್ಜ್, ರೆಸಾರ್ಟ್ ಗೆ ಕರೆದುಕೊಂಡು ಹೋಗಿ ನಿರಂತರ ಅತ್ಯಾಚಾರ ಎಸಗಿದ್ದಾನೆ.

ಮತ್ತೆ ಕರೆದಾಗ ಬಾಲಕಿ ಹೋಗಲು ನಿರಾಕರಿಸಿದಕ್ಕೆ ಅರೆನಗ್ನ ವಿಡಿಯೋವನ್ನು ತಾಯಿಗೆ ಕಳುಹಿಸಿದ್ದಾನೆ. ಬಾಲಕಿಯ ವಿಡಿಯೋ ತಾಯಿಯ ಮೊಬೈಲ್‌ಗೆ ಕಳುಹಿಸಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ನೊಂದ ಬಾಲಕಿಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಾಪು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸದ್ಯ ಆರೋಪಿಗೆ ಕಠಿಣ ಶಿಕ್ಷೆ ಸಿಕ್ಕಿದೆ.

ಇದನ್ನೂ ಓದಿ: ವಿದ್ಯುತ್ ಕಂಬಕ್ಕೆ ಸ್ಕೂಟರ್ ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು

ಹೆಣ್ಣು ಮಗುವನ್ನ ಬಿಸಾಡಿರುವ ಪೋಷಕರು

ಒಂದು ದಿನದ ಮಗುವನ್ನ ಪಾಪಿಗಳು ರಸ್ತೆಯಲ್ಲಿ ಬಿಸಾಡಿಹೋಗಿದ್ದಾರೆ. ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಬಳಿ ನವಜಾತ ಶಿಶು ಪತ್ತೆಯಾಗಿದೆ. ಹೆಣ್ಣು ಮಗು ಎಂಬ ಕಾರಣಕ್ಕೆ ಬಿಸಾಡಿದ್ದಾರೆ. ಹಸುಗೂಸನ್ನ ಬೀದಿನಾಯಿಗಳ ಹಿಂಡು ಸುತ್ತುವರಿದಿತ್ತು. ಇದನ್ನ ಗಮನಿಸಿದ ಸ್ಥಳೀಯರು ಮಗುವನ್ನ ರಕ್ಷಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ರು. ಸದ್ಯ ಮಗುವನ್ನ ರಕ್ಷಿಸಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಮಗುವಿನ ಪೋಷಕರಿಗಾಗಿ ತಿಲಕ್​ನಗರ ಪೊಲೀಸರು ಶೋಧ ನಡೆಸಿತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ