AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕೌಂಟ್ ಅಪ್ಡೇಟ್ ನೆಪದಲ್ಲಿ ಕಸ್ಟಮರ್​ಗೆ ಕರೆ ಮಾಡಿ ಖದೀಮರಿಂದ ದೋಖಾ!

ಹುಬ್ಬಳ್ಳಿ: ನಿಮಗೆ ಲಾಟರಿಯಲ್ಲಿ ಬಹುಮಾನ ಬಂದಿದೆ. ಲಕ್ಕಿ ಡ್ರಾನಲ್ಲಿ ಸೆಲೆಕ್ಟ್ ಆಗಿದ್ದೀರಿ. ಇಲ್ಲ ಅಂದ್ರೆ ನಿಮ್ಮ ಅಕೌಂಟ್​ನಲ್ಲಿ ಏನೋ ಎಡವಟ್ಟಾಗಿದೆ ಅಂತಾ ಖದೀಮರು ಫೋನ್ ಮಾಡಿ ಬ್ಯಾಂಕ್ ಡೀಟೇಲ್ಸ್ ಪಡೆಯಬಹುದು. ನೀವು ಇಂತಹ ಬಣ್ಣ ಬಣ್ಣದ ಮಾತಿಗೆ ಮರುಳಾಗಿದ್ದೇ ಆದ್ರೆ, ಕಳ್ಳರು ನಿಮ್ಮ ಅಕೌಂಟ್​ಗೆ ಎಳ್ಳುನೀರು ಬಿಟ್ಟುಬಿಡ್ತಾರೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸೈಬರ್ ಕ್ರೈಂ ದೋಖಾ ಮೀತಿಮೀರಿದೆ. ಸಾರ್ವಜನಿಕರ ಮೊಬೈಲ್​ಗೆ ಬ್ಯಾಂಕ್ ಅಧಿಕಾರಿಗಳ ಸೋಗಲ್ಲಿ ಕರೆ ಮಾಡೋ ಖದೀಮರು ಬ್ಯಾಂಕ್ ಖಾತೆದಾರರ ಮಾಹಿತಿ ಕಲೆಹಾಕಿ ಟೋಪಿ ಹಾಕ್ತಿದ್ದಾರೆ. […]

ಅಕೌಂಟ್ ಅಪ್ಡೇಟ್ ನೆಪದಲ್ಲಿ ಕಸ್ಟಮರ್​ಗೆ ಕರೆ ಮಾಡಿ ಖದೀಮರಿಂದ ದೋಖಾ!
ಸಾಧು ಶ್ರೀನಾಥ್​
|

Updated on:Oct 20, 2019 | 2:26 PM

Share

ಹುಬ್ಬಳ್ಳಿ: ನಿಮಗೆ ಲಾಟರಿಯಲ್ಲಿ ಬಹುಮಾನ ಬಂದಿದೆ. ಲಕ್ಕಿ ಡ್ರಾನಲ್ಲಿ ಸೆಲೆಕ್ಟ್ ಆಗಿದ್ದೀರಿ. ಇಲ್ಲ ಅಂದ್ರೆ ನಿಮ್ಮ ಅಕೌಂಟ್​ನಲ್ಲಿ ಏನೋ ಎಡವಟ್ಟಾಗಿದೆ ಅಂತಾ ಖದೀಮರು ಫೋನ್ ಮಾಡಿ ಬ್ಯಾಂಕ್ ಡೀಟೇಲ್ಸ್ ಪಡೆಯಬಹುದು. ನೀವು ಇಂತಹ ಬಣ್ಣ ಬಣ್ಣದ ಮಾತಿಗೆ ಮರುಳಾಗಿದ್ದೇ ಆದ್ರೆ, ಕಳ್ಳರು ನಿಮ್ಮ ಅಕೌಂಟ್​ಗೆ ಎಳ್ಳುನೀರು ಬಿಟ್ಟುಬಿಡ್ತಾರೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸೈಬರ್ ಕ್ರೈಂ ದೋಖಾ ಮೀತಿಮೀರಿದೆ. ಸಾರ್ವಜನಿಕರ ಮೊಬೈಲ್​ಗೆ ಬ್ಯಾಂಕ್ ಅಧಿಕಾರಿಗಳ ಸೋಗಲ್ಲಿ ಕರೆ ಮಾಡೋ ಖದೀಮರು ಬ್ಯಾಂಕ್ ಖಾತೆದಾರರ ಮಾಹಿತಿ ಕಲೆಹಾಕಿ ಟೋಪಿ ಹಾಕ್ತಿದ್ದಾರೆ.

ಅಕೌಂಟ್ ಅಪ್​ಡೇಟ್ ನೆಪದಲ್ಲಿ ಕಸ್ಟಮರ್​ಗೆ ಕರೆ ಮಾಡಿ ದೋಖಾ..! ಹೀಗೆ ಮೋಸದ ಕರೆಗೆ ಮಾರುಹೋಗಿ ಸಂಕಷ್ಟಕ್ಕೆ ಸಿಲುಕಿರುವ ಹುಬ್ಬಳ್ಳಿ ನಿವಾಸಿಯಾದ ಮಂಜುಳಾ ಪುತ್ರಿ ನಿಖಿತಾಗೆ ಕರ್ನಾಟಕ ಬ್ಯಾಂಕ್ ಅಧಿಕಾರಿಗಳ ಹೆಸರಲ್ಲಿ ಕಾಲ್ ಬಂದಿತ್ತು. ಹೀಗೆ ಕಾಲ್ ಮಾಡಿದ್ದವರು ಅಕೌಂಟ್​ನ ಮಾಹಿತಿ ಪಡೆದಿದ್ದರು. ಬ್ಯಾಂಕ್ ಬ್ಯಾಲೆನ್ಸ್ ಮತ್ತು ಟ್ರಾನ್ಸಕ್ಷನ್ ಡೀಟೇಲ್ಸ್ ಅನ್ನ ಪಡೆದು, ಮೊಬೈಲ್​ಗೆ ಲಿಂಕ್ ಒಂದನ್ನ ಕಳಿಸಿದ್ದರು. ಅಷ್ಟೇ.. ಅದನ್ನ ಕ್ಲಿಕ್ ಮಾಡೋಕೆ ಹೇಳಿದ್ದ ಖದೀಮರು ನಿಮ್ಮ ಅಕೌಂಟ್ ಅಪ್​ಡೇಟ್ ಆಗುತ್ತೆ ಅಂತಾ ಓಳು ಬಿಟ್ಟಿದ್ದರು. ಇತ್ತ ಖದೀಮರ ಮಾತು ನಂಬಿದ್ದ ಇವರಿಗೆ ಕ್ಷಣಮಾತ್ರದಲ್ಲಿ ಮೋಸ ಆಗಿತ್ತು. ಖಾತೆಯಲ್ಲಿದ್ದ 95 ಸಾವಿರ ರುಪಾಯಿ ಮಂಗಮಾಯವಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ನಿಖಿತಾ ಹಾಗೂ ಮಂಜುಳಾ ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿಯನ್ನ ನೀಡಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಇಂಥ ಪ್ರಕರಣಗಳು ಒಂದೆರಡಲ್ಲ, ಅವಳಿ ನಗರದ ಬಹುತೇಕ ಜನ ಹೀಗೆ ಮೋಸ ಹೋಗಿದ್ದಾರಂತೆ. ಒಂದೇ ವಾರದಲ್ಲಿ 10ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ ಬಂದಿವೆ. ಇನ್ನು ಈ ಬಗ್ಗೆ ಜನರಲ್ಲಿ ಮನವಿ ಮಾಡಿರೋ ಪೊಲೀಸರು, ಅನಾಮಿಕ ಕರೆ ಬಂದ್ರೆ ಅಲರ್ಟ್ ಆಗಿರುವಂತೆ ಮನವಿ ಮಾಡಿದ್ದಾರೆ.

ಖದೀಮರ ಬಗ್ಗೆ ಇರಲಿ ಎಚ್ಚರಿಕೆ ಘಟನೆ ಬಗ್ಗೆ ಸೈಬರ್ ಕ್ರೈಂ ಪೊಲೀಸರು ದೂರು ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ಆದಷ್ಟು ಬೇಗ ಮೋಸಗಾರರ ಜಾಡು ಸಿಗುವ ವಿಶ್ವಾಸವಿದೆ. ಆದ್ರೆ ಅನಾಮಿಕ ಕರೆ ಬಂದಾಗ, ಸಾರ್ವಜನಿಕರು ಬ್ಯಾಂಕ್ ಮಾಹಿತಿ ನೀಡಬಾರದು. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕಿದೆ. ಅನುಮಾನ ಬಂದಲ್ಲಿ ಕೂಡಲೇ ಪೊಲೀಸರನ್ನ ಸಂಪರ್ಕಿಸಿ, ಈ ಕುರಿತು ಮಾಹಿತಿ ನೀಡಿದರೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

Published On - 10:05 am, Sun, 20 October 19