ಸೆನ್ಸೇಷನಲ್ ಕ್ರೈಮ್ ಕತೆಗಳು: ಮುಂದಿನ ಮರ್ಲಿನ್ ಮನ್ರೋ ಅನಿಸಿಕೊಂಡಿದ್ದ ಡೊರೊತಿಯನ್ನು ಕೊಂದ ಅವಳ ಮಾಜಿ ಪತಿ ಮೃತದೇಹದ ಮೇಲೆ ಅತ್ಯಾಚಾರ ನಡೆಸಿದ್ದ!
ತಾನು ಖರೀದಿಸಿದ್ದ 12-ಗಾಜ್ ಪಿಸ್ಟಲ್ ನಿಂದ ಸ್ನೈಡರ್ ಡೊರೊತಿ ಸ್ಟ್ರಾಟೆನ್ ಕಣ್ಣಿಗೆ ಅವನು ಗುಂಡು ಹಾರಿಸಿದ್ದ! ಡೊರೊತಿ ವಿಲ ವಿಲ ಒದ್ದಾಡಿ ಸತ್ತ ಮೇಲೆ ಅವಳ ಮೃತದೇಹದ ಮೇಲೆ ಅತ್ಯಾಚಾರ ನಡೆಸಿದ್ದ!

ಕೆನಡಾದ ಬ್ರಿಟಿಷ್ ಕೊಲಂಬಿಯ ಡೈರಿಯೊಂದರಲ್ಲಿ ಒಬ್ಬ ಸಾಮಾನ್ಯ ಉದ್ಯೋಗಿಯಾಗಿ ಗ್ರಾಹಕರಿಗೆ ಐಸ್ ಕ್ರೀಮ್ ಸರ್ವ್ ಮಾಡುತ್ತಿದ್ದ ಕೇವಲ 18ರ ತರುಣಿಯೊಬ್ಬಳು ಅಲ್ಲಿಂದ ಅಮೇರಿಕಾಗೆ ಹೋಗಿ ಪ್ಲೇ ಬಾಯ್ (Play Boy) ಪತ್ರಿಕೆಯ ಪ್ಲೇಮೇಟ್ ಆಗಿ ಹೆಸರು ಮಾಡಿ, ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡು ಹಾಲಿವುಡ್ ಗೂ ಲಗ್ಗೆಯಿಟ್ಟು ಮೊದಲ ಚಿತ್ರದಲ್ಲೇ ಚಿತ್ರರಸಿಕರ ಮನಸೂರೆಗೊಂಡು ಇವಳೇ ಮುಂದಿನ ಮರ್ಲಿನ್ ಮನ್ರೋ ಅನಿಸಿಕೊಂಡು ಕೇವಲ 20 ನೇ ವಯಸ್ಸಿನಲ್ಲಿ ತನ್ನ ಮಾಜಿ ಪತಿಯಿಂದ ಕೊಲೆಯಾದ ಡೊರೊತಿ ಸ್ಟ್ರಾಟನ್ ಹೆಸರಿನ ಮಹಿಳೆಯ ಕತೆಯಿದು. ಅಸಲಿಗೆ ಡೊರೊತಿಯನ್ನು ಕೆನಡಾದಿಂದ ಅಮೆರಿಕಾಗೆ ಕರೆದೊಯ್ದು ಅವಳನ್ನು ಸ್ಟಾರ್ ಮಾಡಿದ್ದೇ ಅವಳ ಮಾಜಿ ಪತಿ ಪೌಲ್ ಸ್ನೈಡರ್.
ಮೊದಲ ನೋಟದಲ್ಲೇ ಕ್ಲೀನ್ ಬೌಲ್ಡ್ ಆಗಿದ್ದ!
1978ರಲ್ಲಿ ವ್ಯಾಂಕ್ಯೂವರ್ ನಲ್ಲಿದ್ದ ಡೈರಿಯಲ್ಲಿ ಕೆಲಸ ಮಾಡುತ್ತಿದ್ದ ಡೊರೊತಿಯನ್ನು ನೋಡಿದಾಕ್ಷಣ ಸ್ನೈಡರ್ ಅವಳ ಸೌಂದರ್ಯಕ್ಕೆ ಮರುಳಾಗಿ ಬಿಟ್ಟಿದ್ದ. ಸಿಹಿಯಾದ ಮಾತುಗಳನ್ನಾಡಿ ಅವಳ ಸ್ನೇಹ ಸಂಪಾದಿಸಿದ ತನ್ನೊಂದಿಗೆ ಲಾಸ್ ಏಂಜೆಲಿಸ್ ಗೆ ಬಂದರೆ ಸೂಪರ್ ಸ್ಟಾರ್ ಮಾಡ್ತೀನಿ ಅಂತ ಪುಸಲಾಯಿಸಿದ. ಸ್ನೈಡರ್, ಸೈಕಲ್ ಮತ್ತು ಆಟೋಬೊಬೈಲ್ ಶೋಗಳ ಪ್ರಮೋಟರ್ ಆಗಿದ್ದ. ಅವನು ಪಿಂಪ್ ಕೂಡ ಆಗಿದ್ದ ಎಂದು ಅವನ ಆಪ್ತರು ಹೇಳಿದ್ದಾರೆ.
ಡೊರೊತಿಯನ್ನು ತನ್ನೊಂದಿಗೆ ಕರೆದುಕೊಂಡು ಬಂದ ನಂತರ ಅವನು ಆಗ 25 ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದ ಪ್ಲೇ ಬಾಯ್ ಪತ್ರಿಕೆಗೆ ಬೆತ್ತಲೆಯಾಗಿ ಪೋಸ್ ನೀಡಿದರೆ ಲಕ್ಷಾಂತರ ದುಡ್ಡು ಸಂಪಾದಿಸಬಹದೆಂದು ಹೇಳಿ ಅದಕ್ಕಾಗಿ ಅವಳನ್ನು ತಯಾರುಗೊಳಿಸಿದ.
ನಿಮಗೆ ಗೊತ್ತಿರಬಹುದು, ಈ ಪ್ಲೇಬಾಯ್ ಪತ್ರಿಕೆ, ಸುಂದರ ಮಾಡೆಲ್ ಮತ್ತು ಉದಯೋನ್ಮುಖ ಹಾಲಿವುಡ್ ನಟಿಯರ ಬೆತ್ತಲೆ ಚಿತ್ರಗಳನ್ನು ಸೆಂಟರ್ ಸ್ಪ್ರೆಡ್ ನಲ್ಲಿ ಪ್ರಕಟಿಸುತ್ತದೆ ಮತ್ತು ಪೋಸ್ ನೀಡಿದವರಿಗೆ ಹೇರಳವಾಗಿ ಹಣವನ್ನೂ ನೀಡುತ್ತದೆ. ನಮ್ಮಲ್ಲಿನ ಡೆಬೋನೇರ್ ಪತ್ರಿಕೆಯ ಹಾಗೆ. ಡೊರೊತಿಯನ್ನು ಬಳಸಿಕೊಂಡು ಹಣ ಮಾಡಬೇಕೆನ್ನುವ ಉದ್ದೇಶ ಸ್ನೈಡರ್ ನದ್ದಾಗಿತ್ತು.
ಇವಳೇ ಮುಂದಿನ ಮರ್ಲಿನ್ ಮನ್ರೋ!
ಪ್ಲೇಬಾಯ್ ಪತ್ರಿಕೆಯ ಪ್ರಕಾಶಕರಾಗಿದ್ದ ಹ್ಯೂ ಹೆಫ್ನರ್ ಡೊರೊತಿಯ ಸೌಂದರ್ಯ ಮತ್ತು ಪ್ರತಿಭೆಯನ್ನು ಕಂಡು ‘ಇವಳೇ ಮುಂದಿನ ಮರ್ಲಿನ ಮನ್ರೋ!’ ಅಂತ ಉದ್ಗರಿಸಿದ್ದರು. ಪ್ಲೇಬಾಯ್ ಪತ್ರಿಕೆಗೆ ಪೋಸ್ ನೀಡಿದ ಬಳಿಕ ಡೊರೊತಿಯ ಅದೃಷ್ಟದ ಬಾಗಿಲು ಖುಲಾಯಿಸಿತು. ಅವಳ ಮೊದಲ ಚಿತ್ರದ ಹೆಸರು ಸಹ ಪ್ಲೇ ಬಾಯ್ ಆಗಿತ್ತು. ಇದರಲ್ಲಿ ಆಕೆ ಮಿಸ್ ಆಗಸ್ಟ್ 1979 ಪಾತ್ರ ನಿರ್ವಹಿಸಿದ್ದಳು.

ಪ್ಲೇಬಾಯ್ ಪತ್ರಿಕೆಗೆ ನೀಡಿದ ವಿವಿಧ ಭಂಗಿಗಳಲ್ಲಿ ಡೊರೊತಿ
ಅದಾದ ಮೇಲೆ ಡೊರೊತಿ ಅಭಿನಯದ ಬಕ್ ರೋಜರ್ಸ್, ಫ್ಯಾಂಟಸಿ ಐಲ್ಯಾಂಡ್, ಗೆಲಾಕ್ಸಿನಾ ಮೊದಲಾದ ಚಿತ್ರಗಳು ಬಿಡುಗಡೆಯಾದವು. ಡೈರಿಯಲ್ಲಿ ಐಸ್ ಕ್ರೀಮ್ ಮಾರುತ್ತಿದ್ದ ಹದಿನೆಂಟರ ಯುವತಿ ಹಾಲಿವುಡ್ ನಲ್ಲಿ ಸ್ಟಾರ್ ಆಗಿಬಿಟ್ಟಿದ್ದಳು.
ಚಿನ್ನದ ಮೊಟ್ಟೆಯಿಡುವ ಕೋಳಿ!
ಡೊರೊತಿ ಚಿನ್ನದ ಮೊಟ್ಟೆಯಿಡುವ ಕೋಳಿ ಅನ್ನೋದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದ ಸ್ನೈಡರ್ ಅವಳನ್ನು ಮದುವೆಯಾಗಿಬಿಟ್ಟಿದ್ದ. ತನ್ನನ್ನು ಸ್ಟಾರ್ ಮಾಡಿದ ಅನುಭೂತಿ ಇದ್ದಿದ್ದರಿಂದ ಡೊರೊತಿಯೂ ಸಂತೋಷದಿಂದಲೇ ಅವನನ್ನು ಮದುವೆಯಾಗಿದ್ದಳು. ಏತನ್ಮಧ್ಯೆ, ಅವಳ ಕರೀಯರ್ ಗ್ರಾಫ್ ಮೇಲೇರುತ್ತ ಸಾಗಿತ್ತು. 80 ರ ದಶಕದ ಹಾಲಿವುಡ್ ದಿವಾ ಅಂತ ಮಾಧ್ಯಮಗಳನ್ನು ಅವಳನ್ನು ಬಣ್ಣಿಸತೊಡಗಿದ್ದವು.
ಆಗಿನ ಜಮಾನಾದ ಜನಪ್ರಿಯ ಹಾಲಿವುಡ್ ತಾರೆಯೆನಿಸಿಕೊಂಡಿದ್ದ ಅದ್ರೀ ಹೆಪ್ ಬರ್ನ್ ಜೊತೆ ‘ದೆ ಆಲ್ ಲಾಫ್ಡ್’ ನಟಿಸುವ ಅವಕಾಶ ಡೊರೊತಿಗೆ ಸಿಕ್ಕಿತ್ತು. ಆ ಚಿತ್ರದ ಶೂಟಿಂಗ್ ನ್ಯೂ ಯಾರ್ಕ್ ನಲ್ಲಿ ನಡೆಯುತ್ತಿದ್ದಾಗ ನಿರ್ದೇಶಕ ಪೀಟರ್ ಬೊಗ್ಡಾನೊವಿಚ್ ರನ್ನು ಡೊರೊತಿ ಪ್ರೀತಿಸಿಲಾರಂಭಿಸಿದ್ದಳು.
ಪಿಸ್ಟಲ್ ಖರೀದಿಸಿದ!
ಸ್ನೈಡರ್ ಗೆ ಅದರ ಸುಳಿವು ಹತ್ತುವುದು ತಡವಾಗಲಿಲ್ಲ. ಡೊರೊತಿ ಮೇಲೆ ನಿಗಾ ಇಡಲು ಅವನು ಖಾಸಗಿ ಪತ್ತೇದಾರನೊಬ್ಬನನ್ನು ಗೊತ್ತು ಮಾಡಿಕೊಂಡ. ಆದರೆ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಮನೆಗೆ ವಾಪಸ್ಸು ಬಂದ ಮೇಲೆ ಖುದ್ದು ಅವಳೇ ಪೀಟರ್ ಜೊತೆಗಿನ ಪ್ರಣಯವನ್ನು ತಿಳಿಸಿ ತನಗೆ ಡಿವೋರ್ಸ್ ಬೇಕಾಗಿದೆಯೆಂದು ಹೇಳಿದಳು.

ಕೊಲೆಗಡುಕ ಮಾಜಿ ಪತಿ ಸ್ನೈಡರ್ ಜೊತೆ ಡೊರೊತಿ
ಸ್ನೈಡರ್ ಅವಳ ಮುಂದೆ ಯಾವುದೇ ಭಾವನೆ ವ್ಯಕ್ತಪಡಿಸಲಿಲ್ಲ. ಆದರೆ, ಅವಳಿಗೆ ವಿಚ್ಛೇದನ ನೀಡಿದ ನಂತರ ಅವನಿಗೆ ಬಂದೂಕು ಮತ್ತು ಬೇಟೆಯಾಡುವುದರ ಮೇಲೆ ಇದ್ದಕ್ಕಿದ್ದಂತೆ ವ್ಯಾಮೋಹ ಹುಟ್ಟಿಕೊಂಡುಬಿಟ್ಟಿತ್ತು ಎಂದು ಅವನ ಸ್ನೇಹಿತರು ಹೇಳಿದ್ದರು. ಅವನು 12-ಗಾಜ್ ನ ಒಂದು ಪಿಸ್ಟಲ್ ಖರೀದಿಸಿ ಶೂಟ್ ಮಾಡುವ ತರಬೇತಿಯನ್ನು ಸಹ ಪಡೆದುಕೊಂಡಿದ್ದ. ನಂತರ ಅವನು ತನ್ನ ಆಪ್ತರ ಮುಂದೆ ಪ್ಲೇಬಾಯ್ ಪತ್ರಿಕೆಯು ಸತ್ತ ಮಹಿಳೆಯರ ಫೋಟೋಗಳನ್ನು ಪ್ರಕಟಿಸುವುದಿಲ್ಲ ಅಂತ ಹೇಳಲಾರಂಭಿಸಿದ್ದ.
ಸತ್ತವಳನ್ನು ರೇಪ್ ಮಾಡಿದ!
ಆಗಸ್ಟ್ 14, 1980 ರಂದು ಡೊರೊತಿಯು ಸ್ನೈಡರ್ ನಿಂದ ಡಿವೋರ್ಸ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಪ್ರಾಮಿಸ್ ಮಾಡಿದ ಹಾಗೆ ಅಸ್ತಿಯೊಂದರ ಇತ್ಯರ್ಥ ಮಾಡಿಕೊಳ್ಳಲು ಅವನ ಮನೆಗೆ ಹೋಗಿದ್ದಳು. ಅವಳ ಬರುವುದನ್ನೇ ಕಾಯುತ್ತಿದ್ದ ಸ್ನೈಡರ್ ಆ ಅವಕಾಶ ವ್ಯರ್ಥ ಹೋಗಬಾರದೆಂಬ ನಿರ್ಧಾರ ಮಾಡಿಕೊಂಡಿದ್ದ.
ತಾನು ಖರೀದಿಸಿದ್ದ 12-ಗಾಜ್ ಪಿಸ್ಟಲ್ ನಿಂದ ಸ್ನೈಡರ್ ಡೊರೊತಿ ಸ್ಟ್ರಾಟೆನ್ ಕಣ್ಣಿಗೆ ಅವನು ಗುಂಡು ಹಾರಿಸಿದ್ದ! ಡೊರೊತಿ ವಿಲ ವಿಲ ಒದ್ದಾಡಿ ಸತ್ತ ಮೇಲೆ ಅವಳ ಮೃತದೇಹದ ಮೇಲೆ ಅತ್ಯಾಚಾರ ನಡೆಸಿದ್ದ!
ಹಾಲಿವುಡ್ ನ ರಾಣಿಯಾಗಿ ಮೆರೆಯಬೇಕಿದ್ದ ಡೊರೊತಿ ಸ್ಟ್ರಾಟೆನ್ ಹಾಗೆ ದಾರುಣ ಸಾವನ್ನಪ್ಪಿದಳು. ಜನರ ಮನಸ್ಸಿನಲ್ಲಿ ಅವಳು ಒಬ್ಬ ನಟಿಯಾಗಿ, ಸೌಂದರ್ಯ ದೇವತೆಯಾಗಿ ಉಳಿದಿರದಿದ್ದರೂ ಭೀಕರವಾಗಿ ಕೊಲೆಗೈಯಲ್ಪಟ್ಟ ಮಹಿಳೆಯಾಗಿ ನೆನಪಿನಲ್ಲಿ ಉಳಿದಿದ್ದಾಳೆ.