AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ಸಾವಿನಲ್ಲೂ ಒಂದಾದ ದಂಪತಿ, ಪತ್ನಿ ಸತ್ತ ಮೂರು ಗಂಟೆಯಲ್ಲೇ ಹೃದಯಾಘಾತದಿಂದ ಮೃತಪಟ್ಟ ಪತಿ

ಅನಾರೋಗ್ಯದಿಂದ ಪತ್ನಿ ಹೊನ್ನಮ್ಮ ತಳವಾರ್(56) ಮೃತಪಟ್ಟಿದ್ದು ಪತ್ನಿ ಮೃತಪಟ್ಟ 3 ಗಂಟೆಯಲ್ಲೇ ಹೃದಯಾಘಾತದಿಂದ ಶಿವಪ್ಪ ತಳವಾರ್(65) ಸಾವನ್ನಪ್ಪಿದ್ದಾರೆ.

ಕೊಪ್ಪಳ: ಸಾವಿನಲ್ಲೂ ಒಂದಾದ ದಂಪತಿ, ಪತ್ನಿ ಸತ್ತ ಮೂರು ಗಂಟೆಯಲ್ಲೇ ಹೃದಯಾಘಾತದಿಂದ ಮೃತಪಟ್ಟ ಪತಿ
ಸಾವಿನಲ್ಲೂ ಒಂದಾದ ದಂಪತಿ
Follow us
TV9 Web
| Updated By: ಆಯೇಷಾ ಬಾನು

Updated on:Nov 03, 2022 | 3:26 PM

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಮದಲಗಟ್ಟಿ ಗ್ರಾಮದಲ್ಲಿ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಅನಾರೋಗ್ಯದಿಂದ ಪತ್ನಿ ಹೊನ್ನಮ್ಮ ತಳವಾರ್(56) ಮೃತಪಟ್ಟಿದ್ದು ಪತ್ನಿ ಮೃತಪಟ್ಟ 3 ಗಂಟೆಯಲ್ಲೇ ಹೃದಯಾಘಾತದಿಂದ ಶಿವಪ್ಪ ತಳವಾರ್(65) ಸಾವನ್ನಪ್ಪಿದ್ದಾರೆ. ಒಟ್ಟಿಗೆ ಶವಸಂಸ್ಕಾರ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ ಪತಿ ಕತ್ತು ಸೀಳಿದ ಪತ್ನಿ

ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಮಲ್ಲಟ ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಪತಿಯ ಕತ್ತು ಸೀಳಿ ಹತ್ಯೆಗೈದ ಪತ್ನಿ ಲಕ್ಷ್ಮೀಯನ್ನು ಸಿರವಾರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇದೇ ಅಕ್ಟೋಬರ್ 6 ರಂದು ಬಸವರಾಜ್(39) ನನ್ನು ಲಕ್ಷ್ಮೀ ಕೊಲೆ ಮಾಡಿದ್ದಾಳೆ. ಈ ಹಿಂದೆ ಬಸವರಾಜ್ ಹಾಗೂ ಲಕ್ಷ್ಮೀ ಬೆಂಗಳೂರಿನಲ್ಲಿ ಕೆಲಸಕ್ಕೆ ಬಂದಿದ್ದರು. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಜೊತೆ ಲಕ್ಷ್ಮೀ ಅನೈತಿಕ ಸಂಬಂಧ ಹೊಂದಿದ್ದರು. ನಂತರ ಹುಟ್ಟೂರು ಮಲ್ಲಟಕ್ಕೆ ಶಿಫ್ಟ್ ಆದ ಬಳಿಕವೂ ಅದು ಮುಂದುವರಿದಿತ್ತು. ನಿತ್ಯ ಗಂಟೆಗಟ್ಟಲೇ ಫೋನ್ ನಲ್ಲಿ ಮಾತನಾಡುತ್ತಿದ್ದ ಹಿನ್ನೆಲೆ ಪತಿ-ಪತ್ನಿ ನಡುವೆ ಪತಿ ನಿತ್ಯ ಗಲಾಟೆ ನಡೆಯುತ್ತಿತ್ತು. ಹೀಗಾಗಿ ಒಮ್ಮೆ ಪತ್ನಿಯ ಮೊಬೈಲ್ ಮಾರಿ, ಕಂಠಪೂರ್ತಿ ಕುಡಿದು ಬಂದಿದ್ದ. ಇದೇ ಕೋಪದಲ್ಲಿದ್ದ ಪತ್ನಿ ಅಕ್ಟೋಬರ್ 6 ರಂದು ರಾತ್ರಿ ದಸರಾ ಹಬ್ಬದಂದು, ಬನ್ನಿ ನೀಡಿ ಮನೆಗೆ ಬಂದಿದ್ದ ಪತಿಯ ಜೊತೆ ಜಗಳಕ್ಕೆ ಇಳಿದಿದ್ದಳು. ಈ ವೇಳೆ ಜಗಳ ತಾರಕ್ಕಕ್ಕೇರಿ ಅದೇ ದಿನ ರಾತ್ರಿ ಚಾಕುವಿನಿಂದ ಪತಿ ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ನಂತರ ರಾತ್ರಿ ಹೊರಗಡೆ ಬಂದು ಮಲಗಿ, ತನಗೆ ಗೊತ್ತಿಲ್ಲದ ರೀತಿ ಹೈಡ್ರಾಮಾ ಮಾಡಿದ್ದಾಳೆ. ತನಿಖೆ ಚುರಕುಗೊಳಿಸಿದಾಗ ಅಕ್ರಮ ಸಂಬಂಧ ಬಯಲಾಗಿದ್ದು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಹಲವೆಡೆ ಮಳೆ ಆರಂಭ: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನೂ 4 ದಿನ ಮಳೆ

ನಕಲಿ ಕೀ ಬಳಸಿ ಫೋಟೊ ಸ್ಟೋಡಿಯೋಗೆ ಕಳ್ಳರ ಕನ್ನ

ಕಲಬುರಗಿ ಜಿಲ್ಲೆ ಆಳಂದ ಪಟ್ಟಣದಲ್ಲಿರುವ ಬಿ.ಕೆ ಫೋಟೋ ಸ್ಟೋಡಿಯೋಗೆ ಕಳ್ಳರು ನುಗ್ಗಿ 3 ಡಿಜಿಟಲ್ ಕ್ಯಾಮೆರಾ, 1 ಲ್ಯಾಪ್‌ಟಾಪ್ ಕಳ್ಳತನ ಮಾಡಿದ್ದಾರೆ. ಸುಮಾರು 4.50 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳ ಕಳ್ಳತನವಾಗಿದೆ. ಜೀವನಕ್ಕೆ ಆಧಾರವಾಗಿದ್ದ ಕ್ಯಾಮೆರಾ ಕಳೆದುಕೊಂಡು ಮಾಲೀಕ ಸಂತೋಷ್ ಕಂಗಾಲಾಗಿದ್ದಾರೆ.

ATM ಮಷೀನ್ ನಲ್ಲಿ ಹಣ ಕಳ್ಳತನಕ್ಕೆ ಯತ್ನ, ಸಿಸಿ ಕ್ಯಾಮೆರಾದಲ್ಲಿ‌ ದೃಶ್ಯ ಸೆರೆ

ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ಕೌಲಪೇಟೆ ಏರಿಯಾದಲ್ಲಿರುವ ಎಟಿಎಂನಿಂದ ಹಣ ಕಳ್ಳತನಕ್ಕೆ ಯತ್ನಿಸಿದ್ದು ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಡಿಬಿಎಸ್ ಬ್ಯಾಂಕ್ ನ ಎಟಿಎಂ ನಲ್ಲಿನ ಹಣ ದೋಚಿ ಎಸ್ಕೇಪ್ ಆಗಲು ಮುಂದಾದ ಕಳ್ಳನನ್ನು ಬಂಧಿಸಲಾಗಿದೆ.

ಅಕ್ಟೋಬರ್ 31 ರಂದು ನಸುಕಿನ ಜಾವ ಎಟಿಎಂನಲ್ಲಿ ಹಣ ದೋಚಲು ಹೋಗಿದ್ದ ಹಸನ್ ಎಟಿಎಂನಲ್ಲಿನ ಹಣ ದೋಚಲು ಯತ್ನಿಸಿ ವಿಫಲನಾಗಿದ್ದಾನೆ. ಬಂಧಿತರ ಆರೋಪಿ ಮೇಲೆ 12 ಪ್ರಕರಣಗಳಿವೆ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 3:26 pm, Thu, 3 November 22

ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ