ರಾಯಚೂರಿನಲ್ಲಿ ನಿಂತಿದ್ದ ಲಾರಿಯಿಂದ ಹರಿದ ನೆತ್ತರು! ಪತ್ನಿಯನ್ನೇ ಕೊಲೆ ಮಾಡಿ ನಾಟಕವಾಡಿದ್ದ ಪತಿ ಬಂಧನ
ಪೊಲೀಸರ ಪರಿಶೀಲನೆ ವೇಳೆ ಲಾರಿಯಲ್ಲಿ ಕುರಿ, ಮೇಕೆ ಚರ್ಮಗಳು ಪತ್ತೆಯಾಗಿದೆ. ಪುಣೆಯಿಂದ ಸೋಲಾಪುರ, ಸೋಲಾಪುರದಿಂದ ರಾಯಚೂರು ಮಾರ್ಗವಾಗಿ ಲಾರಿ ಚೆನೈಗೆ ಹೊರಟಿತ್ತು. ಈ ವೇಳೆ ರಾಯಚೂರಿನ ಮಂತ್ರಾಲಯ ರಸ್ತೆಯಲ್ಲಿ ಬ್ರೇಕ್ ಫೆಲ್ಯೂರ್ ಆಗಿದೆ.
ರಾಯಚೂರು: ಅನುಮಾನಾಸ್ಪದವಾಗಿ ನಿಂತಿದ್ದ ಲಾರಿಯಿಂದ (Lorry) ನೆತ್ತರು ಹರಿದಿರುವ ಘಟನೆ ರಾಯಚೂರು ನಗರದ ನವೋದಯ ಮೆಡಿಕಲ್ ಕಾಲೇಜು ಎದುರು ನಡೆದಿದೆ. ತಮಿಳುನಾಡು (Tamil Nadu) ಮೂಲದ ಲಾರಿಯಿಂದ ರಕ್ತ ಸೋರುತ್ತಿತ್ತು. ರಕ್ತ ನೋಡಿದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಗಾಬರಿಯಿಂದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ನೇತಾಜಿ ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಲಾರಿ ಚಾಲಕ ವೇಲು ಎಂಬುವವನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ಪೊಲೀಸರ ಪರಿಶೀಲನೆ ವೇಳೆ ಲಾರಿಯಲ್ಲಿ ಕುರಿ, ಮೇಕೆ ಚರ್ಮಗಳು ಪತ್ತೆಯಾಗಿದೆ. ಪುಣೆಯಿಂದ ಸೋಲಾಪುರ, ಸೋಲಾಪುರದಿಂದ ರಾಯಚೂರು ಮಾರ್ಗವಾಗಿ ಲಾರಿ ಚೆನೈಗೆ ಹೊರಟಿತ್ತು. ಈ ವೇಳೆ ರಾಯಚೂರಿನ ಮಂತ್ರಾಲಯ ರಸ್ತೆಯಲ್ಲಿ ಬ್ರೇಕ್ ಫೆಲ್ಯೂರ್ ಆಗಿದೆ. ಆಗ ಚರ್ಮಗಳಿದ್ದ ಹಿನ್ನೆಲೆ ಲಾರಿಯಿಂದ ರಕ್ತ ಸೋರುತ್ತಿತ್ತು. ಚಾಲಕ ಕುರಿ ಚರ್ಮಗಳ ಸಾಗಾಟದ ದಾಖಲೆ ಹೊಂದಿದ್ದರಿಂದ ದಾಖಲೆಯನ್ನು ಪರಿಶೀಲಿಸಿ ಪೊಲೀಸರು ಲಾರಿ ಬಿಟ್ಟು ಕಳುಹಿಸಿದ್ದಾರೆ.
ಕೊಲೆ ಮಾಡಿ ನಾಟಕವಾಡಿದ್ದ ಪತಿ ಬಂಧನ: ಕಲಬುರಗಿ: ಪತ್ನಿಯನ್ನೇ ಕೊಲೆ ಮಾಡಿ ನಾಟಕವಾಡಿದ್ದ ಪತಿ ಅರೆಸ್ಟ್ ಆಗಿದ್ದಾನೆ. ಬಸವರಾಜ್ ಕಟ್ಟಿಮನಿ (40) ಬಂಧಿತ ವ್ಯಕ್ತಿ. ಬಂಧಿತ ಆರೋಪಿ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ. ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಅಂತ ತಾನೇ ಬಿಂಬಿಸಿದ್ದ. ತನಗೆ ನ್ಯಾಯಬೇಕು, ತನ್ನ ಪತ್ನಿ ಹಂತಕರನ್ನು ಪತ್ತೆ ಮಾಡಬೇಕು ಅಂತ ನಾಟಕವಾಡಿದ್ದ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.
ಗ್ರಾಮದ ಹೊರವಲಯದಲ್ಲಿರುವ ಕೃಷಿ ಜಮೀನಿನಲ್ಲಿ ಶಾಮಲಾಬಾಯಿ ಕೊಲೆಯಾಗಿತ್ತು. ಮಾರ್ಚ್ 3 ರಂದು ಕೊಲೆಯಾಗಿತ್ತು. ಈ ಬಗ್ಗೆ ಗಾಣಗಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದಾಗ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಮಾಹಿತಿ ಬಯಲಿಗೆ ಬಂದಿದೆ.
ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಪ್ರಯತ್ನ: ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಪ್ರಯತ್ನ ನಡೆದಿದೆ. ಈ ಘಟನೆ ಬೆಂಗಳೂರಿನ ಜೆ.ಬಿ.ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರ ವಿಚಾರಣೆ ವೇಳೆ ಕೊಲೆ ಮಾಡಿರುವುದು ಪತ್ತೆಯಾಗಿದೆ. ಕಲ್ಲು, ಇಟ್ಟಿಗೆಯಿಂದ ಹೊಡೆದು ದೂಪನಹಳ್ಳಿ ಮಂಜು ಎಂಬುವವನ್ನು ಕೊಲೆ ಮಾಡಿದ್ದಾರೆ.
ಇದನ್ನೂ ಓದಿ
Sandeep Nangal: ಸ್ಟಾರ್ ಕಬಡ್ಡಿ ಪ್ಲೇಯರ್ ಸಂದೀಪ್ ನಂಗಲ್ಗೆ ಗುಂಡಿಕ್ಕಿ ಬರ್ಬರ ಹತ್ಯೆಗೈದ ದುಷ್ಕರ್ಮಿಗಳು
‘ಜೇಮ್ಸ್’ ಬಿಡುಗಡೆಗೆ ಕೌಂಟ್ಡೌನ್: ವಿದೇಶದಲ್ಲೂ ಕಾರ್ ರ‍್ಯಾಲಿ ಮಾಡಿ, ಪಟಾಕಿ ಹೊಡೆಯಲಿರುವ ಫ್ಯಾನ್ಸ್
Published On - 9:18 am, Tue, 15 March 22