ಚರ್ಮದ ಸಮಸ್ಯೆ ನಿವಾರಣೆಗೆ ಈ ಪದಾರ್ಥಗಳಿಂದ ಫೇಸ್ ಪ್ಯಾಕ್ ತಯಾರಿಸಿ; ಇಲ್ಲಿದೆ ಸಂಪೂರ್ಣ ಮಾಹಿತಿ
ಅರಿಶಿಣ, ಹಾಲು ಮತ್ತು ಆಲೂಗಡ್ಡೆಯಿಂದ ತಯಾರಿಸಿದ ಫೇಸ್ ಪ್ಯಾಕ್ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ತಜ್ಞರ ಪ್ರಕಾರ, ಎಣ್ಣೆಯುಕ್ತ, ಶುಷ್ಕ ಮತ್ತು ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಇದು ಉತ್ತಮವಾಗಿದೆ. ಇದನ್ನು ತಯಾರಿಸುವುದು ಮತ್ತು ಮುಖಕ್ಕೆ ಹಚ್ಚುವುದು ತುಂಬಾ ಸುಲಭ.
ತ್ವಚೆಯ ಆರೈಕೆ ಮಾಡುವಾಗ ಹಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಚರ್ಮದ ಆರೈಕೆಯಲ್ಲಿ(skin care) ಹವಾಮಾನದ ಬಗ್ಗೆ ಗಮನಿಸುವುದು ಮುಖ್ಯವಾಗಿದೆ. ಆದರೆ ಯಾವ ಉತ್ಪನ್ನಗಳನ್ನು ಬಳಸಬೇಕು ಎಂಬ ಬಗ್ಗೆ ಮಾಹಿತಿ ಇರುವುದಿಲ್ಲ. ಇದರಿಂದ ಚರ್ಮದ (Skin)ಸಮಸ್ಯೆ ಹೆಚ್ಚಾಗುತ್ತದೆ. ಹೀಗಾಗಿ ಮನೆಮದ್ದುಗಳನ್ನು(Home remedies) ಬಳಸಿ. ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನಗಳಿಗಿಂತ ಇದು ಉತ್ತಮ. ಕಾರಣ ಇವುಗಳಲ್ಲಿ ಕೆಲವೊಮ್ಮೆ ರಾಸಾಯನಿಕಗಳನ್ನು ಬಳಸುತ್ತಾರೆ. ಆದರೆ ಮನೆಮದ್ದುಗಳಲ್ಲಿ ಈ ಸಮಸ್ಯೆ ಇರುವುದಿಲ್ಲ. ಹೀಗಾಗಿ ಮನೆಮದ್ದು ಚರ್ಮದ ಆರೈಕೆಗೆ ಉತ್ತಮ ಮಾರ್ಗವಾಗಿದೆ.
ಅರಿಶಿಣ, ಹಾಲು ಮತ್ತು ಆಲೂಗಡ್ಡೆಯಿಂದ ತಯಾರಿಸಿದ ಫೇಸ್ ಪ್ಯಾಕ್ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ತಜ್ಞರ ಪ್ರಕಾರ, ಎಣ್ಣೆಯುಕ್ತ, ಶುಷ್ಕ ಮತ್ತು ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಇದು ಉತ್ತಮವಾಗಿದೆ. ಇದನ್ನು ತಯಾರಿಸುವುದು ಮತ್ತು ಮುಖಕ್ಕೆ ಹಚ್ಚುವುದು ತುಂಬಾ ಸುಲಭ. ಯಾವ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ ಎಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ.
ಫೇಸ್ ಪ್ಯಾಕ್ ಮಾಡುವ ವಿಧಾನ
ಈ ಫೇಸ್ ಪ್ಯಾಕ್ ಮಾಡಲು ಆಲೂಗಡ್ಡೆ, ಒಂದು ಸಣ್ಣ ಚಮಚದಲ್ಲಿ ಅರಿಶಿಣ ಮತ್ತು ಮೂರರಿಂದ ನಾಲ್ಕು ಚಮಚ ಹಾಲು ಬೇಕಾಗುತ್ತದೆ. ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಆಲೂಗಡ್ಡೆ ರಸವನ್ನು ಹಾಕಿ. ಈಗ ಅದಕ್ಕೆ ಅರಿಶಿಣ ಮತ್ತು ಹಾಲು ಸೇರಿಸಿ. ಬಳಿಕ ಸಿದ್ಧಪಡಿಸಿದ ಪೇಸ್ಟ್ ಅನ್ನು ಚರ್ಮದ ಮೇಲೆ ಸುಮಾರು 30 ನಿಮಿಷಗಳ ಕಾಲ ಬಿಡಿ. ಈಗ ಕೈಗಳಿಂದ ಈ ಪೇಸ್ಟ್ ಅನ್ನು ಮುಖದ ಮೇಲೆ ಮಸಾಜ್ ಮಾಡಿ. 2 ರಿಂದ 3 ನಿಮಿಷಗಳ ಕಾಲ ಹೀಗೆ ಮಾಡಿದ ನಂತರ ಮುಖವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ತ್ವಚೆಯ ಮೇಲಿರುವ ಕೊಳೆ ನಿವಾರಣೆಯಾಗುತ್ತದೆ
ಚರ್ಮದ ಕಾಳಜಿ
ಈ ಮೂರು ಪದಾರ್ಥಗಳಿಂದ ಕೂಡಿರುವ ಈ ಪ್ಯಾಕ್ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಆಲೂಗಡ್ಡೆಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಚರ್ಮಕ್ಕೆ ತೇವಾಂಶವನ್ನು ಒಳಗಿನಿಂದ ಒದಗಿಸಿ ಜೀವಕೋಶಗಳನ್ನು ಆರೋಗ್ಯವಾಗಿರಿಸುತ್ತದೆ. ನಿಮ್ಮ ಚರ್ಮವು ಶುಷ್ಕವಾಗಿದ್ದರೆ, ಅದರಲ್ಲಿ ಬಳಸುವ ಹಾಲು ಅದಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಅಲ್ಲದೆ, ಹಾಲು ಚರ್ಮವನ್ನು ಆರ್ಧ್ರಕಗೊಳಿಸುವುದರ ಜೊತೆಗೆ ಚರ್ಮದ ಕಾಂತಿ ಹೆಚ್ಚಿಸುತ್ತದೆ.
ಚರ್ಮದ ಕಾಂತಿ ಹೆಚ್ಚಿಸುತ್ತದೆ
ತ್ವಚೆಯನ್ನು ಹೊಳೆಯುವಂತೆ ಮಾಡಲು ಹಸಿ ಹಾಲಿನ ಬಳಕೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಆದ್ದರಿಂದ ವಾರಕ್ಕೊಮ್ಮೆ ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. ಅದೇ ಸಮಯದಲ್ಲಿ, ಆಲೂಗಡ್ಡೆ ರಸವು ಚರ್ಮವನ್ನು ಹೊಳೆಯುವಂತೆ ಮಾಡಲು ಸಹ ಸಹಾಯ ಮಾಡುತ್ತದೆ. ಏಕೆಂದರೆ ಅದರಲ್ಲಿರುವ ಆಮ್ಲೀಯ ಗುಣಲಕ್ಷಣಗಳು ಚರ್ಮದ ಮೇಲೆ ನೈಸರ್ಗಿಕ ಬ್ಲೀಚ್ನಂತೆ ಕಾರ್ಯನಿರ್ವಹಿಸುತ್ತವೆ. ಈ ಪ್ಯಾಕ್ ಚರ್ಮದಿಂದ ಸತ್ತ ಜೀವಕೋಶಗಳನ್ನು ತೆಗೆದುಹಾಕಿ, ಅವುಗಳನ್ನು ಸರಿಪಡಿಸುವ ಕೆಲಸ ಮಾಡುತ್ತದೆ.
ಟ್ಯಾನ್ ದೂರವಾಗುತ್ತದೆ
ಈ ಮೂರು ಪದಾರ್ಥಗಳಿಂದ ತಯಾರಿಸಿದ ಫೇಸ್ ಪ್ಯಾಕ್ ತ್ವಚೆಯ ಕಲೆಗಳನ್ನು ಹೊರತುಪಡಿಸಿ ಸನ್ ಬರ್ನ್ಸ್ ಅನ್ನು ಸಹ ತೆಗೆದುಹಾಕುತ್ತದೆ ಅಥವಾ ಟ್ಯಾನ್ ದೂರವಾಗುತ್ತದೆ. ಆಲೂಗೆಡ್ಡೆ ರಸದಲ್ಲಿರುವ ಗುಣಲಕ್ಷಣಗಳಿಂದ ಚರ್ಮದ ಮೇಲೆ ಇರುವ ಟ್ಯಾನಿಂಗ್ ಅನ್ನು ತೆಗೆದುಹಾಕಬಹುದು. ಮತ್ತೊಂದೆಡೆ, ಅರಿಶಿಣದ ಔಷಧೀಯ ಗುಣಗಳು ಚರ್ಮದ ಮೇಲಿನ ಮೊಡವೆಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಇದಲ್ಲದೆ ಹಾಲು ಮುಖವನ್ನು ಸ್ವಚ್ಛಗೊಳಿಸುತ್ತದೆ ಮತ್ತು ಅದರ ಬಣ್ಣವನ್ನು ಸುಧಾರಿಸುತ್ತದೆ.
ಇದನ್ನು ಓದಿ:
Beauty Tips: ಬೇಸಿಗೆಯಲ್ಲಿ ಕಾಡುವ ಒಣ ತ್ವಚೆಯ ರಕ್ಷಣೆಗೆ ಹೀಗೆ ಮಾಡಿ
Coconut Oil : ಚರ್ಮದ ರಕ್ಷಣೆಗಾಗಿ, ತೆಂಗಿನ ಎಣ್ಣೆಯನ್ನು ರಾತ್ರಿ ಹೊತ್ತಿನಲ್ಲಿ ದೇಹಕ್ಕೆ ಬಳಸುವುದು ಉತ್ತಮ