ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪತ್ನಿಯಿಂದಲೇ ಕೊಲೆ ಯತ್ನ
ಹಾಸನ: ಪ್ರಿಯಕರನ ಜತೆ ಸೇರಿ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪತಿ ಹತ್ಯೆಗೆ ಪತ್ನಿ ಸಂಚು ಹಾಕಿದಂತಹ ಘಟನೆ ಅರಸೀಕೆರೆ ತಾಲ್ಲೂಕಿನ ಮಾರಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪತ್ನಿ ವಿರುದ್ಧ ಜಾವಗಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಿಯಕರನ ಜತೆ ಸೇರಿ ಪತ್ನಿ ರಮ್ಯಾ ಪತಿ ಆನಂದ್ನನ್ನು ಹತ್ಯೆ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಫೆಬ್ರವರಿ 10ರ ರಾತ್ರಿ, ತಡವಾಗಿ ಬಂದ ಪತಿ ಆನಂದ್‌ಗೆ ರಮ್ಯಾ ತನ್ನ ಕೈಯಾರೆ ನಿದ್ರೆ ಮಾತ್ರೆ ಬೆರೆಸಿದ ಊಟ ಬಡಿಸಿ ಪತಿ […]
ಹಾಸನ: ಪ್ರಿಯಕರನ ಜತೆ ಸೇರಿ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪತಿ ಹತ್ಯೆಗೆ ಪತ್ನಿ ಸಂಚು ಹಾಕಿದಂತಹ ಘಟನೆ ಅರಸೀಕೆರೆ ತಾಲ್ಲೂಕಿನ ಮಾರಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪತ್ನಿ ವಿರುದ್ಧ ಜಾವಗಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಿಯಕರನ ಜತೆ ಸೇರಿ ಪತ್ನಿ ರಮ್ಯಾ ಪತಿ ಆನಂದ್ನನ್ನು ಹತ್ಯೆ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಫೆಬ್ರವರಿ 10ರ ರಾತ್ರಿ, ತಡವಾಗಿ ಬಂದ ಪತಿ ಆನಂದ್‌ಗೆ ರಮ್ಯಾ ತನ್ನ ಕೈಯಾರೆ ನಿದ್ರೆ ಮಾತ್ರೆ ಬೆರೆಸಿದ ಊಟ ಬಡಿಸಿ ಪತಿ ಗಾಢ ನಿದ್ರೆಗೆ ಜಾರುತ್ತಿದ್ದಂತೆ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾಳೆ. ಈ ವೇಳೆ ಉಸಿರು ಕಟ್ಟಿ ಎಚ್ಚರಗೊಂಡ ಆನಂದ್ ಜೋರಾಗಿ ಕೂಗಿದ್ದಾನೆ. ಈ ಹಿನ್ನೆಲೆ ಕೂಡಲೇ ಎದ್ದುಬಂದ ಆನಂದ್ ತಾಯಿ ಕೂಗಿಕೊಂಡಿದ್ದಾರೆ. ಗಾಬರಿಗೊಂಡ ರಮ್ಯಾ ತಕ್ಷಣವೇ ಪ್ರಿಯಕರನ ಜೊತೆ ಬೈಕೆ ಏರಿ ಎಸ್ಕೇಪ್ ಆಗಿದ್ದಾಳೆ.
ಅಸ್ವಸ್ಥಗೊಂಡಿರೋ ಆನಂದ್‌ಗೆ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜಾವಗಲ್ ಪೊಲೀಸ್ ಠಾಣೆಯಲ್ಲಿ ಪತ್ನಿ ರಮ್ಯಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
Published On - 1:02 pm, Thu, 13 February 20