ಬೆಂಗಳೂರು ಗ್ರಾಮಾಂತರ: ಕಾಲೇಜಿಗೆ ಹೋಗುತ್ತಿದ್ದ ತಂದೆ ಮಗನ ಬೈಕ್ (Bike Accident) ಗೆ ಕ್ಯಾಂಟರ್ ಡಿಕ್ಕಿ ಹೊಡೆದು ಮಗ ಸ್ಥಳದಲ್ಲೇ ದರ್ಮರಣ ಹೊಂದಿರುವಂತಹ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಚುಂಚೇಗೌಡನ ಹೊಸಹಳ್ಳಿ ಬಳಿ ಘಟನೆ ಸಂಭವಿಸಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಅಂಬಲಗೆರೆ ನಿವಾಸಿ ವರುಣ್ ( 18 ) ಮೃತ ವಿದ್ಯಾರ್ಥಿ. ಇಂದು ಬೆಳಗ್ಗೆ ಗ್ರಾಮದಿಂದ ಕಾಲೇಜಿಗೆ ತಂದೆಯ ಜೊತೆ ಬೈಕ್ನಲ್ಲಿ ಬರ್ತಿದ್ದ ವಿದ್ಯಾರ್ಥಿ, ಈ ವೇಳೆ ಎದುರಿನಿಂದ ಅತಿವೇಗವಾಗಿ ಬಂದ ಕ್ಯಾಂಟರ್ ಬಸ್ಗೆ ಡಿಕ್ಕಿ ಹೊಡೆಯೋದನ್ನ ತಪ್ಪಿಸಲು ಹೋಗಿ ಬೈಕ್ಗೆ ಡಿಕ್ಕಿ ಹೊಡೆದಿದೆ. ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ಕ್ಯಾಂಟರ್ ಅಡ್ಡಾದಿಡ್ಡಿ ಬಂದು ಡಿಕ್ಕಿ ಹೊಡೆದಿದೆ. ಅಪಘಾತದ ರಬಸಕ್ಕೆ ವಿದ್ಯಾರ್ಥಿ ಮೇಲೆ ಕ್ಯಾಂಟರ್ ಹರಿದು ದುರ್ಮರಣ ಹೊಂದಿದ್ದಾನೆ. ವಿದ್ಯಾರ್ಥಿಯ ತಂದೆ ಅಪಾಯದಿಂದ ಪಾರಾಗಿದ್ದು, ಗಾಯಗೊಂಡಿದ್ದಾರೆ. ಅಪಘಾತದ ನಂತರ ಕ್ಯಾಂಟರ್ ಸಮೇತ ಚಾಲಕ ಎಸ್ಕೇಪ್ಗೆ ಯತ್ನಿಸಿದ್ದು, ಕ್ಯಾಂಟರ್ ಚೇಸ್ ಮಾಡಿ ಚಾಲಕನನ್ನ ದೊಡ್ಡಬೆಳವಂಗಲ ಪಿಎಸ್ಐ ಜ್ಞಾನಮೂರ್ತಿ ಬಂದಿಸಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರೆಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ:
ಮೈಸೂರು: ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ. ಬೋಟ್ ನಿಲುಗಡೆ ಸ್ಥಳದಲ್ಲಿ ತೇಲುತ್ತಿದ್ದ ಮೃತದೇಹ ಕಂಡುಬಂದಿದ್ದು, ಬೆಳಗ್ಗೆ ವಾಯು ವಿಹಾರಕ್ಕೆ ತೆರಳಿದ್ದವರಿಂದ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮೃತರ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಸರಸ್ವತಿಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ ಯುವತಿ ಸಾವು:
ಕಲಬುರಗಿ: ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ ಯುವತಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಶೀಲವಂತಿ ಸಾಲಿ (18) ಮೃತ ಯುವತಿ. ಶಿಲವಂತಿ, ದ್ವಿತೀಯ ಪಿಯು ವಿದ್ಯಾರ್ಥಿನಿಯಾಗಿದ್ದು, ನಿನ್ನೆ ಕಾಲೇಜಿಗೆ ರಜೆ ಹಿನ್ನೆಲೆಯಲ್ಲಿ ಪಾಲಕರ ಜೊತೆ ಜಮೀನಿಗೆ ಹೋಗಿದ್ದಳು. ಕೊರಳಲ್ಲಿದ್ದ ವೇಲ್ ಯಂತ್ರಕ್ಕೆ ಸಿಲುಕಿದ್ದು, ಇದರಿಂದ ಶಿಲವಂತಿ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲಾ. ಮಾದನಹಿಪ್ಪರಗಾ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:
ಚೀನಾದಲ್ಲಿ ಮತ್ತೆ ಕೊವಿಡ್: ದೊಡ್ಡ ನಗರಗಳಲ್ಲಿ ಮತ್ತೆ ಲಾಕ್ಡೌನ್ ಘೋಷಣೆ, ವಿಶ್ವದಲ್ಲಿ ಮರುಕಳಿಸಿದ ಆತಂಕ