ಗದಗದಲ್ಲಿ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ; ಆರೋಪಿ ಜೈಲಿನಿಂದ ಹೊರ ಬಂದರೆ ನಾವೇ ಕೊಚ್ಚಿ ಹಾಕುತ್ತೇವೆ ಎಂದ ಪ್ರಮೋದ್ ಮುತಾಲಿಕ್
ಹಲ್ಲೆಗೊಳಗಾದ ಅಪೂರ್ವ ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಕಿಮ್ಸ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಗದಗ: ಜಿಲ್ಲೆಯಲ್ಲಿ ಪತ್ನಿಗೆ ಸುಮಾರು 23 ಬಾರಿ ಮಚ್ಚಿನಿಂದ ಇರಿದು ಕೊಲೆಗೆ (Murder) ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ಚಿಕಿತ್ಸೆಯಿಂದ ಚೇತರಿಸಿಕೊಂಡು ಮಹಿಳಾ ಸಂಘಟನೆ ಮುಂದೆ ನೋವು ತೋಡಿಕೊಂಡ ಸಂತ್ರಸ್ತೆ, ನನಗೂ, ಅವನ ಹೆಂಡತಿಗೂ ಮೋಸ ಮಾಡಿದ್ದಾನೆ. ಅವನಿಗೆ ಮುಗಿಸಿಬಿಡ್ರಿ ಅಂತ ಆಕ್ರೋಶ ಹೊರಹಾಕಿದ್ದಾರೆ. ಅವನಿಗೆ ಮೊದಲೇ ಮದುವೆಯಾಗಿದ್ದು ನನಗೆ ಗೊತ್ತಿರಲಿಲ್ಲ. ನಮ್ಮ ತಾಯಿ ಕೂಡ ಅವನಿಗೆ ಮದುವೆ (Marriage) ಆಗಿದೆ ಅಂತ ಹೇಳಿದ್ದರು. ಜನ ಮಾತನಾಡ್ತ ಇದ್ದಾರೆ ಅಂತ ತಾಯಿ ಹೇಳಿದ್ದರು. ಈ ನಡುವೆ ಆತನ ಹೆಂಡತಿ ಬಂದು ನನಗೆ ಭೇಟಿ ಆಗಿದ್ದಳು ಅಂತ ಅಪೂರ್ವ ತಿಳಿಸಿದ್ದಾರೆ.
ಆದರೆ ಇವ ಆಕೆ ನನ್ನ ಹೆಂಡತಿ ಅಲ್ಲ ಅಂತ ಹೇಳಿದ್ದ. ಆಕೆ ಸುಳ್ಳು ಹೇಳುತ್ತಿದ್ದಾಳೆ ಅಂತ ನನ್ನ ನಂಬಿಸಿದ್ದ. ಸಣ್ಣ ಸಣ್ಣ ವಿಷಯಕ್ಕೂ ಹೊಡೆಯೋದು, ಬಡಿಯೋದು ಮಾಡುತ್ತಿದ್ದ. ಮಾನಸಿಕ ಕಿರುಕುಳ ನೀಡುತ್ತಿದ್ದ. ಕೆಟ್ಟ ಕೆಟ್ಟ ಪದಗಳಿಂದ ಬೈಯುತ್ತಿದ್ದ. ಈಕೆಗೆ ಯಾರೂ ಗತಿ ಇಲ್ಲ ಅಂತ ಕಿರುಕುಳ ನೀಡುತ್ತಿದ್ದ ಅಂತ ಮಹಿಳೆ ಕಣ್ಣೀರು ಹಾಕಿದ್ದಾರೆ.
ವಿವಾದಾತ್ಮಕ ಹೇಳಿಕೆ ನೀಡಿದ ಪ್ರಮೋದ್ ಮುತಾಲಿಕ್: ಈ ಪ್ರಕರಣ ದಿನ ಕಳೆದಂತೆ ರಾಜಕೀಯ ಸ್ವರೂಪ ಪಡೆಯಲಾರಂಭಿಸಿದೆ. ಪ್ರೀತಿ ಮಾಡಿ, ಮದುವೆಯಾಗಿ ಈ ರೀತಿ ಹಿಂಸೆ ಕೊಡುತ್ತಿರುವ ಹಿಂದೆ ಲವ್ ಜಿಹಾದ್ ಷಡ್ಯಂತ್ರವಿದೆ ಎಂದು ಆರೋಪಿಸಿರುವ ಪ್ರಮೋದ್ ಮುತಾಲಿಕ್, ಆರೋಪಿ ಒಂದು ವೇಳೆ ಜೈಲಿನಿಂದ ಹೊರ ಬಂದರೆ ನಾವೇ ಕೊಚ್ಚಿ ಹಾಕುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರೋಪಿಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹಿಸಲಾಗಿದೆ.
ಹಲ್ಲೆಗೊಳಗಾದ ಅಪೂರ್ವ ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಕಿಮ್ಸ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಪ್ರಮೋದ್ ಮುತಾಲಿಕ್ ಅಪೂರ್ವಳ ಆರೋಗ್ಯ ವಿಚಾರಿಸಿದರು. ಅಪೂರ್ವ ತಾಯಿಯೊಂದಿಗೆ ಮುತಾಲಿಕ್ ಚರ್ಚಿಸಿದರು. ಈ ವೇಳೆ ಮಾತನಾಡಿದ ಮುತಾಲಿಕ್, ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಲವ್ ಜಿಹಾದ್ಗೆ ಅಪೂರ್ವ ಘಟನೆ ತಾಜಾ ಉದಾಹರಣೆಯಾಗಿದೆ. ಹಿಂದೂ ಯುವತಿಯರನ್ನು ಮೋಸಮಾಡಿ ಮದುವೆಯಾಗುವುದು. ನಂತರ ಕಿರುಕುಳ ಕೊಡುವುದು ವ್ಯಾಪಕವಾಗಿದೆ. ಮತಾಂತರದ ಒಂದು ಭಾಗವಾಗಿ ಈ ರೀತಿಯ ಕೃತ್ಯಗಳನ್ನು ಮಾಡಲಾಗುತ್ತಿದೆ. ಆರೋಪಿ ಇಜಾಜ್ನನ್ನು ಬಂಧಿಸಿರುವುದು ಸ್ವಾಗತಾರ್ಹ. ಸಣ್ಣಪುಟ್ಟ ಸೆಕ್ಷನ್ಗಳನ್ನು ಹಾಕಿದರೆ ನಾವು ಸುಮ್ಮನಿರಲ್ಲ. ಅವನು ಏನಾದರೂ ಜೈಲಿನಿಂದ ಬಂದರೆ ನಾವೇ ಕೊಚ್ಚಿ ಹಾಕುತ್ತೇವೆ ಎಂದು ಮುತಾಲಿಕ್ ಹೇಳಿದ್ದಾರೆ.
ಇದನ್ನೂ ಓದಿ
ಬೆಂಗಳೂರಿನಲ್ಲಿ ಕೆಎಸ್ಆರ್ಟಿಸಿ ಬಸ್ನಲ್ಲಿ ಚಿಲ್ಲರೆ ಹಣ ತೋರಿಸಿ ಚಿನ್ನಾಭರಣ ಎಗರಿಸಿದ ಮಹಿಳೆಯರು
ಕೊರೊನಾದ ಹುಟ್ಟೂರಲ್ಲಿ ಮತ್ತೆ ವೈರಸ್ ಅಬ್ಬರ; ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ತುಂಬಿರುವ ಶವಾಗಾರಗಳು, ಜನರು ಕಂಗಾಲು
Published On - 11:24 am, Sun, 13 March 22