ಚೀನಾದಲ್ಲಿ ಮತ್ತೆ ಕೊವಿಡ್: ದೊಡ್ಡ ನಗರಗಳಲ್ಲಿ ಮತ್ತೆ ಲಾಕ್​ಡೌನ್ ಘೋಷಣೆ, ವಿಶ್ವದಲ್ಲಿ ಮರುಕಳಿಸಿದ ಆತಂಕ

ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಗಳಿರುವ ಈ ನಗರವು ಬಂದರು ನಗರಿಯೂ ಹೌದು. ಚೀನಾದಲ್ಲಿ ಇತ್ತೀಚೆಗೆ ಒಟ್ಟು 3,400 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಚೀನಾದಲ್ಲಿ ಮತ್ತೆ ಕೊವಿಡ್: ದೊಡ್ಡ ನಗರಗಳಲ್ಲಿ ಮತ್ತೆ ಲಾಕ್​ಡೌನ್ ಘೋಷಣೆ, ವಿಶ್ವದಲ್ಲಿ ಮರುಕಳಿಸಿದ ಆತಂಕ
ಚೀನಾದ ಶೆನ್​ಝೆನ್ ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 14, 2022 | 10:33 AM

ಬೀಚಿಂಗ್:  ಇಡೀ ಜಗತ್ತು ಕೊರೊನಾ ಪಿಡುಗಿನಿಂದ ಚೇತರಿಸಿಕೊಂಡು, ಲಾಕ್​ಡೌನ್ ಮತ್ತು ಇತರ ನಿರ್ಬಂಧಗಳನ್ನು ತೆರವುಗೊಳಿಸುವ ಹೊತ್ತಿನದಲ್ಲಿ ಚೀನಾದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಚೀನಾ ದೇಶವು ದಕ್ಷಿಣದಲ್ಲಿರುವ ಶೆನ್​ಝೆನ್ (Shenzhen) ನಗರದಲ್ಲಿ ಕಳೆದ ಒಂದು ವಾರದಿಂದ ಲಾಕ್​ಡೌನ್ ಘೋಷಿಸಿದೆ. ಸುಮಾರು 1.75 ಕೋಟಿ ಜನಸಂಖ್ಯೆಯಿರುವ ಈ ದೊಡ್ಡ ನಗರದಲ್ಲಿ ಕೊವಿಡ್ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿತ್ತು. ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಗಳಿರುವ ಈ ನಗರವು ಬಂದರು ನಗರಿಯೂ ಹೌದು. ಚೀನಾದಲ್ಲಿ ಇತ್ತೀಚೆಗೆ ಒಟ್ಟು 3,400 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸರ್ಕಾರವು ನಗರದ ಎಲ್ಲ ನಿವಾಸಿಗಳನ್ನು ಮೂರು ಬಾರಿ ತಪಾಸಣೆಗೆ ಒಳಪಡಿಸಿತ್ತು. ಮಾರ್ಚ್ 20ರವರೆಗೂ ನಿರ್ಬಂಧದ ಆದೇಶಗಳು ಮುಂದುವರಿಯಲಿವೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಎಲ್ಲ ಬಸ್ ಮತ್ತು ಸಬ್​ವೇ ವ್ಯವಸ್ಥೆಗಳನ್ನು ಮುಚ್ಚಲಾಗಿದೆ. ಅತ್ಯಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ವ್ಯಾಪಾರ ವಹಿವಾಟು ರದ್ದುಪಡಿಸಲಾಗಿದೆ. ಉದ್ಯೋಗಿಗಳಿಗೆ ವರ್ಕ್​ ಫ್ರಂ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಹುವಾವೆ ಟೆಕ್ನಾಲಜಿ, ಟೆನ್​ಸೆಂಟ್ ಹೋಲ್ಡಿಂಗ್ಸ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳ ಕೇಂದ್ರ ಕಚೇರಿ ಇರುವ ಶೆನ್​ಝೆನ್ ನಗರದಿಂದ ಹೊರಗೆ ಹೋಗಬಾರದೆಂದು ನಾಗರಿಕರನ್ನು ನಿರ್ಬಂಧಿಸಲಾಗಿದೆ. ಶೆನ್​ಝೆನ್ ಬಂದರು ಚೀನಾದ ಅತಿದೊಡ್ಡ ಮತ್ತು ಅತಿಹೆಚ್ಚು ಚಟುವಟಿಕೆ ಇರುವ ಬಂದರುಗಳಲ್ಲಿ ಒಂದಾಗಿದೆ.

ಪಕ್ಕದ ಹಾಂಗ್​ಕಾಂಗ್​ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ ಬೆನ್ನಿಗೇ ಶೆನ್​ಝೆನ್ ನಗರದಲ್ಲಿಯೂ ಸೋಂಕು ಹೆಚ್ಚಾಗಿದೆ. ಹಾಂಗ್​ಕಾಂಗ್​ನಲ್ಲಿ ಸುಮಾರು 3 ಲಕ್ಷ ಜನರು ಪ್ರಸ್ತುತ ಹೋಂ ಕ್ವಾರಂಟೈನ್​ ಅಥವಾ ಐಸೊಲೇಶನ್​ನಲ್ಲಿದ್ದಾರೆ. ಶಾಂಘೈ ನಗರದಲ್ಲಿ ಕೊವಿಡ್​ ತೀವ್ರಗೊಂಡಿದ್ದು, ಬಹುತೇಕ ಶಿಕ್ಷಣ ಸಂಸ್ಥೆಗಳು ಮತ್ತೆ ಆನ್​ಲೈನ್ ಶಿಕ್ಷಣದ ಮೊರೆ ಹೊಕ್ಕಿವೆ. ವಿಮಾನಗಳನ್ನು ನಿರ್ಬಂಧಿಸುವ ಸಾಧ್ಯತೆ ಕುರಿತು ಚೀನಾದ ವೈಮಾನಿಕ ನಿಯಂತ್ರಣ ಸಂಸ್ಥೆ ಮಾತುಕತೆ ನಡೆಸುತ್ತಿದೆ.

ಕೊವಿಡ್ ವಿಚಾರದಲ್ಲಿ ಆರಂಭದಿಂದಲೂ ಗೌಪ್ಯತೆ ಕಾಪಾಡಿಕೊಳ್ಳುತ್ತಿದ್ದ ಚೀನಾ ಇದೀ ಒಮಿಕ್ರಾನ್ ರೂಪಾಂತರಿಯ ಹಾವಳಿಗೆ ಬೆಚ್ಚಿಬಿದ್ದಿದೆ. ಚೀನಾದ ಅತ್ಯಂತ ದೊಡ್ಡ ಮತ್ತು ಆರ್ಥಿಕ ಶಕ್ತಿಗಳೆನಿಸಿಕೊಂಡ ನಗರಗಳಲ್ಲಿ ಏಕಾಏಕಿ ಕಾಣಿಸಿಕೊಂಡಿರುವ ಹಾವಳಿಯನ್ನು ಹೇಗೆ ನಿರ್ವಹಿಸುವುದು ಎಂಬುದು ಚೀನಾ ಸರ್ಕಾರಕ್ಕೆ ದೊಡ್ಡ ಸಮಸ್ಯೆಯಾಗಿದೆ. ಶೂನ್ಯ ಕೊವಿಡ್ ಕಾರ್ಯತಂತ್ರವನ್ನು ಪ್ರತಿಪಾದಿಸುತ್ತಿದ್ದ ಚೀನಾದ ಎಷ್ಟೋ ಹೇಳಿಕೆಗಳನ್ನು ಇದೀಗ ಕಾಣಿಸಿಕೊಂಡಿರುವ ಸೋಂಕು ದೂಳೀಪಟ ಮಾಡಿದೆ.

ಜಗತ್ತಿನ ಹಲವು ದೇಶಗಳು ತಮ್ಮಲ್ಲಿ ಕೊರೊನಾ ಕಾಣಿಸಿಕೊಂಡ ವಿಚಾರ ಒಪ್ಪಿಕೊಂಡು, ವೈರಸ್ ಜೊತೆಗಿನ ಬದುಕು ಅನಿವಾರ್ಯ ಎಂಬ ನಿಲುವಿಗೆ ಬಂದು ವಿದೇಶಗಳಿಂದ ವಿಮಾನಗಳು ಬಂದು ಹೋಗಲು ಅನುಮತಿ ನೀಡಿದಾಗಲೂ ಚೀನಾ ತನ್ನ ನಿಲುವು ಸಡಿಲಿಸಿರಲಿಲ್ಲ. ಬದಲಿಗೆ ಇಂಥ ದೇಶಗಳನ್ನು ದೂರವೇ ಇರಿಸುವ ನಿಲುವಿಗೆ ಬಂದಿತ್ತು. ಇಂದಿಗೂ ಚೀನಾದ ಅಧಿಕಾರಿಗಳು ನಿರ್ಬಂಧ ವಿಧಿಸುವುದರ ವಿರುದ್ಧವೇ ಇದ್ದಾರೆ. ನಿರ್ಬಂಧದಿಂದ ಆರ್ಥಿಕತೆಗೆ ಗಂಭೀರ ಹೊಡೆತ ಬೀಳುತ್ತದೆ ಎನ್ನುವುದು ಚೀನಾದ ಉನ್ನತ ವಲಯದ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ವಿಯೆಟ್ನಾಂನ ಡ್ರ್ಯಾಗನ್ ಹಣ್ಣಿನಲ್ಲೂ ಕೊರೊನಾ ವೈರಸ್ ಪತ್ತೆ; ಚೀನಾದಲ್ಲಿ ಸೂಪರ್ ಮಾರ್ಕೆಟ್​ಗಳು ಬಂದ್

ಇದನ್ನೂ ಓದಿ: Chaina Zero Corona Policy: ಕೊರೊನಾ ಸೋಂಕಿತರನ್ನ ಚೀನಾ ಹೇಗೆ ಟ್ರೀಟ್ ಮಾಡ್ತಿದೆ ಗೊತ್ತಾ ?

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್