ವಿಯೆಟ್ನಾಂನ ಡ್ರ್ಯಾಗನ್ ಹಣ್ಣಿನಲ್ಲೂ ಕೊರೊನಾ ವೈರಸ್ ಪತ್ತೆ; ಚೀನಾದಲ್ಲಿ ಸೂಪರ್ ಮಾರ್ಕೆಟ್ಗಳು ಬಂದ್
ಚೀನಾದ ಝೆಜಿಯಾಂಗ್ ಮತ್ತು ಜಿಯಾಂಗ್ಕ್ಸಿ ಪ್ರಾಂತ್ಯಗಳ ಕನಿಷ್ಠ 9 ನಗರಗಳಲ್ಲಿ ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಡ್ರ್ಯಾಗನ್ ಹಣ್ಣಿನಲ್ಲಿ ಕೊವಿಡ್ ವೈರಸ್ ಮಾದರಿಗಳು ಪತ್ತೆಯಾಗಿವೆ ಎನ್ನಲಾಗಿದೆ.
ವಿಯೆಟ್ನಾಂ: ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಹಣ್ಣುಗಳಲ್ಲಿ ಕೊರೊನಾವೈರಸ್ ಕುರುಹುಗಳು ಕಂಡುಬಂದ ಹಿನ್ನೆಲೆಯಲ್ಲಿ ಚೀನಾದ ಅಧಿಕಾರಿಗಳು ಹಲವಾರು ಸೂಪರ್ ಮಾರ್ಕೆಟ್ಗಳನ್ನು ಬಂದ್ ಮಾಡಿದ್ದಾರೆ. ಚೀನಾದ ಝೆಜಿಯಾಂಗ್ ಮತ್ತು ಜಿಯಾಂಗ್ಕ್ಸಿ ಪ್ರಾಂತ್ಯಗಳ ಕನಿಷ್ಠ 9 ನಗರಗಳಲ್ಲಿ ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಡ್ರ್ಯಾಗನ್ ಹಣ್ಣಿನಲ್ಲಿ ಕೊವಿಡ್ ವೈರಸ್ ಮಾದರಿಗಳು ಪತ್ತೆಯಾಗಿವೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಚೀನಾದ ಅಧಿಕಾರಿಗಳು ಆಮದು ಮಾಡಿಕೊಂಡ ಆಹಾರ ಉತ್ಪನ್ನಗಳ ತುರ್ತು ತಪಾಸಣೆಯನ್ನು ಪ್ರಾರಂಭಿಸಿದ್ದಾರೆ. ಹಣ್ಣು ಖರೀದಿದಾರರು ಎಚ್ಚರ ವಹಿಸಲು ಆದೇಶಿಸಿದ್ದಾರೆ. ಆದರೆ ಆಹಾರದಿಂದ ಕೊರೊನಾವೈರಸ್ ಹರಡಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹೀಗಿದ್ದರೂ ಚೀನಾದ ಆರೋಗ್ಯ ಅಧಿಕಾರಿಗಳು ಚೀನಾ ದೇಶವು ವೈರಸ್ ಅಲೆಯೊಂದಿಗೆ ಹೋರಾಡುತ್ತಿರುವುದರಿಂದ ಹೆಚ್ಚು ಎಚ್ಚರ ವಹಿಸಿದ್ದಾರೆ.
ಡಿಸೆಂಬರ್ ಕೊನೆಯ ವಾರದಲ್ಲಿ ಕೊವಿಡ್-19 ಕುರುಹುಗಳು ಪತ್ತೆಯಾಗಿದ್ದರಿಂದ ಚೀನಾ ಈ ಹಿಂದೆ ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳುವ ಡ್ರ್ಯಾಗನ್ ಹಣ್ಣಿನ ಮೇಲೆ ಜನವರಿ 26ರವರೆಗೆ ನಿಷೇಧ ಹೇರಿತ್ತು. ಚೀನಾಕ್ಕೆ ಡ್ರ್ಯಾಗನ್ ಫ್ರೂಟ್ ಕಳುಹಿಸುವ ಲ್ಯಾಂಗ್ ಸನ್ ಪ್ರಾಂತ್ಯದ ಹುಯು ಘಿ ಬಾರ್ಡರ್ ಗೇಟ್ ಮೇಲೆ ನಿಷೇಧ ಹೇರಲಾಗಿದೆ. ಕಂಟೈನರ್ ಟ್ರಕ್‌ಗಳನ್ನು ಹಿಂದಕ್ಕೆ ಕಳುಹಿಸಿದ್ದರಿಂದ ಅಧಿಕಾರಿಗಳು ಟಾನ್ ಥಾನ್ ಎಂಬ ಮತ್ತೊಂದು ಗಡಿ ಗೇಟ್‌ನಿಂದ ಡ್ರ್ಯಾಗನ್ ಹಣ್ಣಿನ ಆಮದನ್ನು ನಿಷೇಧಿಸಿದ್ದಾರೆ.
ಮುಂದಿನ ತಿಂಗಳು ಚಳಿಗಾಲದ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಚೀನಾ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಕೊರೊನಾವೈರಸ್ ಅನ್ನು ಎದುರಿಸಲು ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ. ಕೊವಿಡ್ ಪ್ರಕರಣಗಳ ಉಲ್ಬಣದ ಮಧ್ಯೆ ಚೀನಾದಲ್ಲಿ ಲಾಕ್‌ಡೌನ್ ಮಾಡಲಾಗಿದೆ.
ಇದನ್ನೂ ಓದಿ: ಕೊವಿಡ್ ಉಲ್ಬಣದ ನಡುವೆ ಚುನಾವಣೆ ನಡೆಯಲಿರುವ 5 ರಾಜ್ಯಗಳಲ್ಲಿನ ಪರಿಸ್ಥಿತಿಯ ಕುರಿತು ಚುನಾವಣಾ ಆಯೋಗಕ್ಕೆ ಕೇಂದ್ರ ವಿವರಣೆ
ಅಮೆರಿಕಾದ ಶ್ವೇತ ಭವನದಲ್ಲಿ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ; ಚೀನಾ, ಕೊವಿಡ್, ಹವಾಮಾನ, ರಕ್ಷಣಾ ವಿಚಾರಗಳ ಚರ್ಚೆ