ಒಮಿಕ್ರಾನ್ ಸೌಮ್ಯವಾಗಿದೆ ಎಂದು ಹೇಳುವುದು ಅಪಾಯಕಾರಿ: ವಿಶ್ವ ಆರೋಗ್ಯ ಸಂಸ್ಥೆ
ವಿಶ್ವ ಆರೋಗ್ಯಸಂಸ್ಥೆಯ ಕೊವಿಡ್ -19 ತಾಂತ್ರಿಕ ಮುಖ್ಯಸ್ಥರಾದ ಮಾರಿಯಾ ವ್ಯಾನ್ ಕೆರ್ಖೋವ್ ಪ್ರಕಾರ ಹೌದು, ಅತಿ ಸರಳೀಕೃತ ನಿರೂಪಣೆಗಳು ಅಪಾಯಕಾರಿ. ಡೆಲ್ಟಾಗೆ ಹೋಲಿಸಿದರೆ ಆಸ್ಪತ್ರೆಗೆ ದಾಖಲಾತಿ ಕಡಿಮೆ. ಆದರೆ ಒಮಿಕ್ರಾನ್ "ಕೇವಲ ಸೌಮ್ಯ" ಕಾಯಿಲೆ ಎಂದು ಸೂಚಿಸುವುದು ಅಪಾಯಕಾರಿ.
ಜಗತ್ತು ಬೃಹತ್ ಕೊವಿಡ್ (Covid-19) ಉಲ್ಬಣದಿಂದ ತತ್ತರಿಸುತ್ತಿರುವಾಗ, ವಿಶ್ವ ಆರೋಗ್ಯ ಸಂಸ್ಥೆ (WHO) ಒಮಿಕ್ರಾನ್ (Omicron) ‘ಕೇವಲ ಸೌಮ್ಯ’ ಕಾಯಿಲೆ ಎಂದು ಸೂಚಿಸುವುದು ಅಪಾಯಕಾರಿ ಎಂದು ಹೇಳಿದೆ. ಸಾಂಕ್ರಾಮಿಕ ರೋಗಗಳ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ವಿಶ್ವ ಆರೋಗ್ಯಸಂಸ್ಥೆಯ ಕೊವಿಡ್ -19 ತಾಂತ್ರಿಕ ಮುಖ್ಯಸ್ಥರಾದ ಮಾರಿಯಾ ವ್ಯಾನ್ ಕೆರ್ಖೋವ್ (Maria Van Kerkhove) ಪ್ರಕಾರ ಹೌದು, ಅತಿ ಸರಳೀಕೃತ ನಿರೂಪಣೆಗಳು ಅಪಾಯಕಾರಿ.ಡೆಲ್ಟಾಗೆ ಹೋಲಿಸಿದರೆ ಆಸ್ಪತ್ರೆಗೆ ದಾಖಲಾತಿ ಕಡಿಮೆ. ಆದರೆ ಒಮಿಕ್ರಾನ್ “ಕೇವಲ ಸೌಮ್ಯ” ಕಾಯಿಲೆ ಎಂದು ಸೂಚಿಸುವುದು ಅಪಾಯಕಾರಿ. ಜಾಗರೂಕರಾಗಿರಿ ಎಂದು ಅವರು ಹೇಳಿದ್ದಾರೆ. ಒಮಿಕ್ರಾನ್ ರೂಪಾಂತರದಿಂದ ಉಂಟಾದ ಕೊವಿಡ್ ಪ್ರಕರಣಗಳ ಹೊಸ ಉಲ್ಬಣದ ವಿರುದ್ಧ ಕ್ರಮಗಳನ್ನು ಹೆಚ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ ಹಲವಾರು ಸಂದರ್ಭಗಳಲ್ಲಿ ಸರ್ಕಾರಗಳಿಗೆ ಎಚ್ಚರಿಕೆ ನೀಡಿದೆ. ಇದು ಈ ಹಿಂದೆ ಕೊವಿಡ್ ಸುನಾಮಿಯ ಬಗ್ಗೆ ಎಚ್ಚರಿಕೆ ನೀಡಿತ್ತು ಮತ್ತು ಕಾರ್ಯಕ್ರಮಗಳು ಮತ್ತು ಕೂಟಗಳನ್ನು ರದ್ದುಗೊಳಿಸುವಂತೆ ಕೇಳಿತ್ತು.
Yes, oversimplified narratives can be dangerous. While we see lower risk of hospitalisation compared to Delta, to suggest that Omicron is “just a mild” disease is dangerous.
Case # are astounding… even with lower risk, we will see hospitals overwhelmed. Please be careful. https://t.co/sg29vv7j9G
— Maria Van Kerkhove (@mvankerkhove) January 5, 2022
ಭಾರತದಲ್ಲಿ ಒಮಿಕ್ರಾನ್ ಹೆಚ್ಚಳ ರಾಜಸ್ಥಾನದಲ್ಲಿ ಒಮಿಕ್ರಾನ್ ಕರೋನವೈರಸ್ ರೂಪಾಂತರಕ್ಕೆ ಸಂಬಂಧಿಸಿದ ಮೊದಲ ಸಾವು ಪತ್ತೆಯಾದ ಕೇವಲ ಒಂದು ದಿನದ ನಂತರ, ಭಾರತದಲ್ಲಿ ಗುರುವಾರ 2,630 ಒಮಿಕ್ರಾನ್ ರೂಪಾಂತರದ ಪ್ರಕರಣಗಳು ವರದಿಯಾಗಿದೆ. ಹೆಚ್ಚುವರಿಯಾಗಿ, ಭಾರತವು ಗುರುವಾರ 495 ಒಮಿಕ್ರಾನ್ ಪ್ರಕರಣಗಳ ಅತಿದೊಡ್ಡ ಏಕದಿನ ಜಿಗಿತವನ್ನು ಕಂಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಕೊರೊನಾವೈರಸ್ ನ ಹೊಸ ರೂಪಾಂತರದ ಸೋಂಕುಗಳು 2,630 ಕ್ಕೆ ತಲುಪಿವೆ. ಒಟ್ಟು ಪ್ರಕರಣಗಳಲ್ಲಿ, ಮಹಾರಾಷ್ಟ್ರದಲ್ಲಿ ಗರಿಷ್ಠ 797, ನಂತರ ದೆಹಲಿ 465, ರಾಜಸ್ಥಾನ (236), ಕೇರಳ (234), ಕರ್ನಾಟಕ (226) , ಗುಜರಾತ್ (204) ಮತ್ತು ತಮಿಳುನಾಡು (121) ಪ್ರಕರಣ ವರದಿ ಆಗಿದೆ. ದೇಶವು 90,928 ಹೊಸ ಕೊರೊನಾವೈರಸ್ ಸೋಂಕುಗಳನ್ನು ವರದಿ ಮಾಡಿದೆ, ಇದು 200 ದಿನಗಳಲ್ಲಿ ಅತಿ ಹೆಚ್ಚು. ದೇಶದಲ್ಲೀಗ 3,51,09,286 ಕೊವಿಡ್ ಪ್ರಕರಣ ವರದಿಯಾಗಿದೆ.
ಇದನ್ನೂ ಓದಿ: ಷೇರುಪೇಟೆಯಲ್ಲಿ ಒಮಿಕ್ರಾನ್ ಭೀತಿ; 800ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿದ ಸೆನ್ಸೆಕ್ಸ್, ನಿಫ್ಟಿ 230 ಪಾಯಿಂಟ್ಸ್ ಇಳಿಕೆ