Video: ಮಹಿಳಾ ಮನುಷ್ಯಾಕೃತಿಗಳ ತಲೆ ಕತ್ತರಿಸಲು ತಾಲಿಬಾನಿಗಳ ಆದೇಶ; ಅಂಗಡಿ ಮಾಲೀಕರಿಗೆ ಈಗ ಅದೇ ಕೆಲಸ !
2021ರ ಆಗಸ್ಟ್ನಲ್ಲಿ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಆಡಳಿತ ಹಿಡಿದಾಗಿನಿಂದಲೂ ಅಲ್ಲಿನ ಜನರ ಒಂದೊಂದೇ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಿದ್ದಾರೆ. ಅದರಲ್ಲೂ ಮಹಿಳೆ ಮತ್ತು ಹುಡುಗಿಯರ ಸ್ವಾತಂತ್ರ್ಯಕ್ಕೆ ಚ್ಯುತಿ ತರುತ್ತಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಬರುಬರುತ್ತ ಒಂದೊಂದೇ ಕಠಿಣ ಸಂಪ್ರದಾಯದ ಕಾನೂನು ಹೇರುತ್ತಿದ್ದಾರೆ. ಇಷ್ಟುದಿನ ಜೀವಂತ ಮಹಿಳೆಯರ ಮೇಲೆ ಬೀಳುತ್ತಿದ್ದ ಅವರ ಕಣ್ಣು ಈಗ ಸ್ತ್ರೀ ರೂಪದ ಗೊಂಬೆಗಳ ಮೇಲೆ ಕೂಡ ಬಿದ್ದಿದೆ. ಬಟ್ಟೆ ಅಂಗಡಿಗಳಲ್ಲೆಲ್ಲ ಪ್ಲಾಸ್ಟಿಕ್ ಗೊಂಬೆಗಳನ್ನು ಇಟ್ಟು, ಅವುಗಳಿಗೆ ಸೀರೆ ಉಡಿಸಿಡುವುದು ಅಥವಾ ಚೂಡಿದಾರ್, ಮತ್ತಿತರ ಡ್ರೆಸ್ ಹಾಕಿ ಇಡುವುದು ಸರ್ವೇಸಾಮಾನ್ಯ. ಅದು ಗ್ರಾಹಕರನ್ನು ಆಕರ್ಷಿಸುವ ಒಂದು ಮಾರ್ಗ. ಆದರೆ ಅಫ್ಘಾನ್ನಲ್ಲಿ ತಾಲಿಬಾನಿಗಳು ಇದಕ್ಕೂ ಕಲ್ಲು ಹಾಕುತ್ತಿದ್ದಾರೆ. ಮಾನವ ಆಕೃತಿಗಳು ಅದರಲ್ಲೂ ಮಹಿಳೆಯರ ಮಾನವ ಆಕೃತಿಗಳು ಇಸ್ಲಾಂನಲ್ಲಿ ನಿಷೇಧಿಸಲ್ಪಟ್ಟಿವೆ. ಹಾಗಾಗಿ ನೀವಿಟ್ಟ ಸ್ತ್ರೀರೂಪದ ಗೊಂಬೆಗಳ ತಲೆ ಕತ್ತರಿಸಿ ಹಾಕಿ ಎಂದು ಬಟ್ಟೆ ಅಂಗಡಿ ಮಾಲೀಕರಿಗೆ ಆದೇಶ ನೀಡಿದ್ದಾರೆ. ಅದರಂತೆ ಅಫ್ಘಾನ್ನ ಪಶ್ಚಿಮ ಭಾಗದಲ್ಲಿರುವ ಕೆಲವು ಅಂಗಡಿ ಮಾಲೀಕರು ಪ್ಲಾಸ್ಟಿಕ್ ಗೊಂಬೆಗಳ ತಲೆಯನ್ನು ಕತ್ತರಿಸಿ ಬೀಸಾಡುತ್ತಿದ್ದಾರೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ.
2021ರ ಆಗಸ್ಟ್ನಲ್ಲಿ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಆಡಳಿತ ಹಿಡಿದಾಗಿನಿಂದಲೂ ಅಲ್ಲಿನ ಜನರ ಒಂದೊಂದೇ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಿದ್ದಾರೆ. ಅದರಲ್ಲೂ ಮಹಿಳೆ ಮತ್ತು ಹುಡುಗಿಯರ ಸ್ವಾತಂತ್ರ್ಯಕ್ಕೆ ಚ್ಯುತಿ ತರುತ್ತಿದ್ದಾರೆ. ಅವರಿಗೆ ಶಾಲೆ-ಕಾಲೇಜುಗಳಿಗೆ ಹೋಗುವುದನ್ನು ನಿರ್ಬಂಧಿಸಿದ್ದಾರೆ. ದೂರದ ಊರುಗಳಿಗೆ ಒಬ್ಬರೇ ಪ್ರಯಾಣ ಮಾಡುವುದಕ್ಕೆ ನಿರ್ಬಂಧ ವಿಧಿಸಿದ್ದಾರೆ. ಹಾಗೇ, ಗೊಂಬೆಗಳ ತಲೆ ಕತ್ತರಿಸಿ ಎಂದು ಆದೇಶ ನೀಡಿರುವ ಬಗ್ಗೆ ಹೆರಾತ್ ನಗರದಲ್ಲಿ ಸದ್ಗುಣ ಪ್ರಚಾರ ಇಲಾಖೆ ಮುಖ್ಯಸ್ಥ ಆಝಿಜ್ ರೆಹ್ಮಾನ್ ತಿಳಿಸಿದ್ದಾರೆ. ಹೀಗೆ ಮನುಷ್ಯಾಕೃತಿಯ ಗೊಂಬೆಗಳನ್ನು ಇಟ್ಟುಕೊಳ್ಳುವುದು ಶರಿಯಾ ಕಾನೂನಿಗೆ ವಿರುದ್ಧ. ಅಂಥ ಅಂಗಡಿ, ಅಂಗಡಿ ಮಾಲೀಕರ ಮೇಲೆ ಅಲ್ಲಾನ ಕೃಪೆ ಬೀಳುವುದಿಲ್ಲ. ಹಾಗಂತ ಅವರು ಮನುಷ್ಯಾಕೃತಿಯ ತಲೆ, ದೇಹವನ್ನು ಮುಚ್ಚಿಟ್ಟಾಕ್ಷಣ ಅಲ್ಲಾನ ಧೂತನು ಅವರ ಅಂಗಡಿಗೆ ಪ್ರವೇಶಿಸಿ ಆಶೀರ್ವದಿಸುವುದಿಲ್ಲ ಹಾಗಾಗಿ ಗೊಂಬೆಯ ತಲೆಯನ್ನೇ ಕತ್ತರಿಸಬೇಕು ಎಂದು ಹೇಳಿದ್ದಾರೆ. ಹೀಗೆ ಇತ್ತೀಚೆಗೆ ತಾಲಿಬಾನಿಗಳ ಒಂದೊಂದೇ ಕೃತ್ಯ, ಕಾನೂನುಗಳು ಬೆಳಕಿಗೆ ಬರುತ್ತಿವೆ.
The level of backwardness & barberism of #TalibanTerrorists is astonishing. If massacring of our people for past 25 years was not enough, Taliban 2.0 are now also beheading mannequins because they “offend #Islam.” #DoNotRecogniseTalibanpic.twitter.com/4y2nCy5T6D@natiqmalikzada
— ??Afghanistan Fact Checks? (@AfgFactChecks) January 3, 2022
ಇದನ್ನೂ ಓದಿ: ಎಷ್ಟೆಲ್ಲ ಒಳ್ಳೆಯದಾಗುತ್ತಿದೆ ಎನ್ನುತ್ತ ಬರೋಬ್ಬರಿ 11 ಡೋಸ್ ಕೊರೊನಾ ಲಸಿಕೆ ಪಡೆದ 84ರ ವೃದ್ಧ !-ತನಿಖೆಗೆ ಆದೇಶ