ಆಲ್ಬರ್ಟ್ ಐನ್ಸ್ಟೈನ್ ಬಗ್ಗೆ ನಿಮಗೆಷ್ಟು ಗೊತ್ತು? ಅವರ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ
Albert Einstein Birth Anniversary: ಕ್ವಾಂಟಮ್ ಮೆಕ್ಯಾನಿಕ್ಸ್, ಸ್ಟ್ಯಾಟಿಸ್ಟಿಕಲ್ ಮೆಕ್ಯಾನಿಕ್ಸ್ ಮತ್ತು ವಿಶ್ವಶಾಸ್ತ್ರಕ್ಕೆ ಇವರ ಕೊಡುಗೆ ಅಪಾರ. 1921ರಲ್ಲಿ ಇವರ ಸಾಧನೆಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸಾರ್ವಕಾಲಿಕ ಶ್ರೇಷ್ಠ ಭೌತಶಾಸ್ತ್ರಜ್ಞರಲ್ಲಿ ಒಬ್ಬರಾದ ಆಲ್ಬರ್ಟ್ ಐನ್‍ಸ್ಟೈನ್ (Albert Einstein) ಮಾರ್ಚ್ 14, 1879 ರಂದು ಜರ್ಮನಿಯಲ್ಲಿ ಜನಿಸಿದರು. ಅವರು ಸಾಪೇಕ್ಷತಾ ಸಿದ್ಧಾಂತವನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದರು. ಕ್ವಾಂಟಮ್ ಮೆಕ್ಯಾನಿಕ್ಸ್, ಸ್ಟ್ಯಾಟಿಸ್ಟಿಕಲ್ ಮೆಕ್ಯಾನಿಕ್ಸ್ ಮತ್ತು ವಿಶ್ವಶಾಸ್ತ್ರಕ್ಕೆ ಇವರ ಕೊಡುಗೆ ಅಪಾರ. 1921ರಲ್ಲಿ ಇವರ ಸಾಧನೆಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇಸಾಕ್ ನ್ಯೂಟನ್ನ ಸಿದ್ಧಾಂತವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಭೌತಶಾಸ್ತ್ರ (Physics) ಸಂಶೋಧನೆಯಲ್ಲಿ ಮಹತ್ವದ ಮೈಲುಗಲ್ಲುಗಳನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಲ್ಬರ್ಟ್ ಐನ್‍ಸ್ಟೈನ್ ಅವರ ಆಸಕ್ತಿದಾಯಕ ಸಂಗತಿಗಳು:
- ಜರ್ಮನಿಯ ವುಟೆನ್ ಬರ್ಗ್ನ ಉಲ್ಮ್ ಎಂಬ ಹಳ್ಳಿಯಲ್ಲಿ ಐನ್‍ಸ್ಟೈನ್ ಜನಿಸಿದರು. ಇವರ ತಂದೆ ಹೆಸರು ಹರ್ಮನ್ ಐನ್‍ಸ್ಟೈನ್. ತಾಯಿ ಹೆಸರು ಪೌಲಿನ್ ಐನ್‍ಸ್ಟೈನ್.
- ಆಲ್ಬರ್ಟ್ ಐನ್‍ಸ್ಟೈನ್ ಅವರ ಆಸಕ್ತಿದಾಯಕ ಸಂಗತಿಗಳು:
- 1903ರಲ್ಲಿ ಜರ್ಮನ್ ಹುಡುಗಿ ಮಿಲೆವಾ ಮ್ಯಾರಿಕ್ ಜೊತೆ ಐನ್‍ಸ್ಟೈನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಹಾನ್ಸ್ ಮತ್ತು ಎಡ್ವರ್ಡ್ ಎಂಬ ಎರಡು ಮಕ್ಕಳು ಜನಿಸಿದರು. ಮೊದಲ ಪತ್ನಿಗೆ ವಿಚ್ಛೇದನ ನೀಡಿ ನಂತರ 1919ರಲ್ಲಿ ಎಲ್ಯಾ ಲೊವೆಂಥಾಲ್ ಎಂಬ ಮಹಿಳೆಯ ಜೊತೆ ಮರು ಮದುವೆಯಾದರು.
- ಆಲ್ಬರ್ಟ್ ಐನ್‍ಸ್ಟೈನ್ ಜರ್ಮನಿಯಲ್ಲಿ ಜನಿಸಿದರೂ, ಅವರು ಈ ದೇಶದಲ್ಲಿ ಹೆಚ್ಚು ಸಮಯ ವಾಸಿಸಲಿಲ್ಲ. ಇಟಲಿ, ಸ್ವಿಜರ್ಲ್ಯಾಂಡ್ ಮತ್ತು ಜೆಕಿಯಾದಲ್ಲಿ ಉಳಿದುಕೊಂಡರು. ಯುನೈಟೆಡ್ ಸ್ಟೇಟ್ಗೆ ತೆರಳಿದ ನಂತರ, ಆಲ್ಬರ್ಟ್ ಐನ್‍ಸ್ಟೈನ್ ಮತ್ತೆ ಜರ್ಮನಿಯತ್ತ ಮುಖ ಮಾಡಲಿಲ್ಲ.
- ಆಲ್ಬರ್ಟ್ ಐನ್‌ಸ್ಟೈನ್ ತನ್ನ ಮೊದಲ ಪತ್ರಿಕೆಯನ್ನು 16 ನೇ ವಯಸ್ಸಿನಲ್ಲಿ ಬರೆದರು.
- ಆಲ್ಬರ್ಟ್ ಐನ್‌ಸ್ಟೈನ್ ಅವರು 15ನೇ ವಯಸ್ಸಿನಲ್ಲಿ ಶಾಲೆಯನ್ನು ತೊರೆದರು. ಶಾಲೆಗೆ ಹೆಚ್ಚು ಕಾಲ ಹೋಗದೇ ಇದ್ದರೂ ಅವರು ಗಣಿತ, ಭೌತಶಾಸ್ತ್ರ, ತತ್ವಶಾಸ್ತ್ರದಲ್ಲಿ ಗಮನಾರ್ಹವಾದ ಸಾಧನೆ ಮಾಡಿದ್ದಾರೆ.
- ಮೊದಲಿಗೆ ಆಲ್ಬರ್ಟ್ ಐನ್‌ಸ್ಟೈನ್ ವಿದ್ಯಾರ್ಥಿಗಳಿಗೆ ಗಣಿತ ಮತ್ತು ಭೌತಶಾಸ್ತ್ರ ಹೇಳಿಕೊಡುತ್ತಿದ್ದರು. ತಮ್ಮ ಕೈಯಲ್ಲಿ ಕೆಲಸ ಇಲ್ಲದಿದ್ದಾಗ ಪಿಎಚ್ಡಿ ಮುಂದುವರಿಸುತ್ತಾರೆ.
- ಉಪಾಧ್ಯರ ವೃತ್ತಿಗೆ ಅರ್ಜಿಹಾಕಿ 2 ವರ್ಷ ಅಲೆಯುತ್ತಾರೆ. ನೌಕರಿ ಸಿಗುವುದು ಕಠಿಣವಾಗಿತ್ತು. ಕೊನೆಗೆ ಬರ್ನ್ ನಗರದ ಪೇಟೆಂಟ್ ಆಫೀಸ್ನಲ್ಲಿ ಕೆಲಸ ಸಿಕ್ಕಿತು.
ಇದನ್ನೂ ಓದಿ
ಬೆಂಕಿಯಿಂದ ಪಾರಾಗಲು ಮೂರು ವರ್ಷದ ಮಗುವನ್ನು ಕಟ್ಟಡದಿಂದ ಕೆಳಗೆ ಎಸೆದ ತಂದೆ; ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ
Virat Kohli: ಪಂದ್ಯದ ನಡುವೆ 3 ಕಡೆಗಳಿಂದ ಕೊಹ್ಲಿ ಬಳಿ ಏಕಾಏಕಿ ಮೈದಾನಕ್ಕೆ ನುಗ್ಗಿದ ಗುಂಪು: ವಿಡಿಯೋ
Published On - 11:24 am, Mon, 14 March 22