ಬೆಂಗಳೂರು, (ನವೆಂಬರ್ 22): ತಬಸುಂ ಬೇಗಂ, ಅಜೀಂ ಉದ್ದೀನ್ , ಅಭಿಷೇಕ್ ಇವರು ನಾಲ್ಕು ವರ್ಷಗಳ ಸ್ನೇಹಿತರು. ಬಳಿಕ ವ್ಯವಹಾರಿಕ ಸಂಬಂಧವನ್ನು ಹನಿಟ್ರಾಪ್ ಆಗಿ ಬದಲಾವಣೆ ಮಾಡಿಕೊಂಡು ಬ್ಲಾಕ್ ಮೇಲ್ ಮಾಡಿ ಒರ್ವ ಪ್ರೊಫೆಸರ್ ನಿಂದ ಬರೋಬ್ಬರಿ ಎರಡು ಕೋಟಿ ಇಪತ್ತೈದು ಲಕ್ಷ ಕ್ಕು ಹೆಚ್ಚಿನ ಹಣವನ್ನು ಸುಲಿಗೆ ಮಾಡಿದ್ದಾರೆ. ಹೌದು….42 ವಯಸ್ಸಿನ ಓರ್ವ ಪ್ರೊಫೆಸರ್‌ಗೆ ಖಾಸಗಿ ಫೋಟೋಗಳನ್ನು ಹಾಕಿ ಬರೋಬ್ಬರಿ ಎರಡು ಕೋಟಿ ಪೀಕಿದ್ದಾರೆ. ಇಷ್ಟಕ್ಕೆ ಹಣದ ದಾಹ ತೀರದಿದ್ದಾಗ ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಈ ಆರೋಪಿತೆ ಮಹಿಳೆ ತಬಸುಂ ಆರ್ ಟಿ ನಗರದ ಒಂದು ಜಿಮ್ ನಲ್ಲಿ ರೆಸೆಪ್ಶನಿಸ್ಟ್ ಆಗಿ ಕೆಲಸ ಮಾಡ್ತಿದ್ದಳಂತೆ. ಅದೇ ಜಿಮ್ ಗೆ 2021 ರಲ್ಲಿ 42 ವಯಸ್ಸಿನ ಒರ್ವ ಪ್ರೊಫೆಸರ್ ಜಾಯಿನ್ ಆಗಿದ್ದಾರೆ. ಆತ ಜಿಮ್ ಗೆ ಸೇರಿದ ಕೆಲ ದಿನಗಳಲ್ಲಿ ತಬಸುಂ ಜೊತೆಗೆ ಪರಿಚಯ ಆಗಿ ಸ್ನೇಹ ಸಂಬಂಧ ಬೆಳದಿದೆ. ಈ ಸ್ನೇಹ ಇಬ್ಬರ ನಡುವೆ ಪ್ರೀತಿ ಯಾಗಿ ಬದಲಾಗಿದೆ . ನಂತರ ಆಕೆಗೆ ಮದುವೆಯಾಗಿ ಮಗು ಇದ್ದು ಗಂಡನ ಬಿಟ್ಟಿದ್ದಾಳೆ ಎನ್ನುವ ವಿಚಾರ ಪ್ರೊಫೆಸರ್ ಗೆ ಗೊತ್ತಾಗಿ ಆತ ಗಲಾಟೆ ಮಾಡಿದ್ದನಂತೆ.
ಇದನ್ನೂ ಓದಿ: ಬಾಗಲಕೋಟೆ ಹೇರ್ ಡ್ರೈಯರ್ ಸ್ಫೋಟಕ್ಕೆ ಬಿಗ್ ಟ್ವಿಸ್ಟ್: ಪ್ರಕರಣದ ಹಿಂದಿದೆ ಪ್ರೇಮ ಪುರಾಣ
ಈ ನಡುವೆ ವ್ಯವಹಾರ ನಡೆಸಲು ಮತ್ತು ಒಂದಷ್ಟು ಬಿಜಿನೆಸ್ ಮಾಡಬೇಕು ಎಂದು ಹಂತ ಹಂತವಾಗಿ ಸುಮಾರು ಎರಡು ಕೋಟಿ ಇಪತ್ತೈದು ಲಕ್ಷಕ್ಕು ಹೆಚ್ಚಿನ ಹಣವನ್ನು ಈಕೆ ಪಡೆದಿದ್ದಾಳೆ. ಇಬ್ಬರ ನಡುವೆ ಗಲಾಟೆ ಆದ ಬಳಿಕ ಪ್ರೊಫೆಸರ್ ಹಣ ಕೊಡಲ್ಲಾ ಎಂದಿದ್ದಾನೆ. ಈ ವೇಳೆ ಪ್ರೊಫೆಸರ್ ಗೆ ವಾಟ್ಸ್ ಆಪ್ ಮೂಲಕ ಕೆಲ ಖಾಸಗಿ ಫೋಟೊಗಳನ್ನು ಕಳಿಸಿದ್ದ ತಬಸುಂ ಬೇಗಂ ತನಗೆ ಇನ್ನಷ್ಟು ಹಣ ಕೊಡಬೇಕು. ಇಲ್ಲವಾದ್ರೆ ಈ ಫೋಟೊ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ನಂತರ ಆಕೆಯ ಸಹೋದರ ಎಂದು ಹೆಳಿಕೊಂಡು ಅಜೀಂ ಉದ್ದಿನ್ ಮತ್ತು ಆಕೆಯ ವಕೀಲ ಮತ್ತು ಪೋಲಿಸ್ ಎಂದು ಹೇಳಿ ಅಭಿಷೇಕ್ ಎಲ್ಲರು ಬೆದರಿಗೆ ಹಣ ವಸೂಲಿ ಮಾಡಿದ್ದಾರೆ.
ಯಾವಾಗ ಇವರುಗಳ ಕಾಟ ಹೆಚ್ಚಾಗಿತ್ತು ಆಗ ತನ್ನ ಪಿಎಫ್ ನಲ್ಲಿ ಇದ್ದ ಹಣವನ್ನು ಸಹ ಪ್ರೊಫೆಸರ್ ನೀಡಿದ್ದ. ಅಷ್ಟು ಸಾಲುದು ಎಂದು ಆರೋಪಿಗಳು ಹೇಳಿದಾಗ ಕೊನೆಗೆ ಪ್ರೊಫೆಸರ್, ಸಿಸಿಬಿ ಮೆಟ್ಟಿಲೇರಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ಕಾರ್ಚರಣೆಗಿಳಿದ ಸಿಸಿಬಿ, ಆರೋಪಿಗಳನ್ನು ಅರೆಸ್ಟ್ ಮಾಡಿ ತನಿಖೆ ನಡೆಸುತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.