ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ವಿದೇಶಿ ಪ್ರಜೆ ಸೇರಿ ನಾಲ್ವರು ಅರೆಸ್ಟ್, 6 ಕೋಟಿ ಮೌಲ್ಯದ ಮಾದಕವಸ್ತು ವಶ
ಸಿಸಿಬಿ ಪೊಲೀಸರು ಹೆಣ್ಣೂರು, ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಪ್ರಜೆ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. 15 ಕೆಜಿ ಹಶೀಶ್ ಎಣ್ಣೆ, 10 ಕೆಜಿ ಗಾಂಜಾ, ಎಕ್ಸ್ಟಸಿ ಮಾತ್ರೆ ಜಪ್ತಿ ಮಾಡಲಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 6 ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಪೊಲೀಸರು ಹೆಣ್ಣೂರು, ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಪ್ರಜೆ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. 15 ಕೆಜಿ ಹಶೀಶ್ ಎಣ್ಣೆ, 10 ಕೆಜಿ ಗಾಂಜಾ, ಎಕ್ಸ್ಟಸಿ ಮಾತ್ರೆ ಜಪ್ತಿ ಮಾಡಲಾಗಿದೆ.
ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಚಿನ್ನ ಕಳ್ಳತನ ಇನ್ನು ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕೆಲಸಗಾರ ಶಿವರಾಮ್ನನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ಪಟ್ಟಣ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದು 25 ಲಕ್ಷ ರೂ. ಮೌಲ್ಯದ 503 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಆರೋಪಿ ಶಿವರಾಮ್, ಜೆ.ಎಲ್.ಬಿ.ರಸ್ತೆಯ ಪಾರಸ್ ಪೃಥ್ವಿ ಜುವೆಲ್ಲರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ತಾನು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಕಳ್ಳತನ ಮಾಡಿ ನಾಪತ್ತೆಯಾಗಿದ್ದ. ಈ ಸಂಬಂಧ ಶಿವರಾಮ್ ಮೇಲೆ ಅನುಮಾನ ವ್ಯಕ್ತಪಡಿಸಿ ಅಂಗಡಿ ಮಾಲೀಕ ದೂರು ದಾಖಲಿಸಿದ್ದರು. ಈ ವೇಳೆ ಶಿವರಾಮ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು: ಮದುವೆ ಆಗೊದಾಗಿ ನಂಬಿಸಿ ವಿಧವೆ ಹತ್ಯೆ; ಆರೋಪಿ ಬಂಧನ ಮದುವೆಯಾಗುವುದಾಗಿ ನಂಬಿಸಿ ವಿಧವೆಯನ್ನು ಕೊಲೆ ಮಾಡಿದ ಘಟನೆ ಗೋರೆಬಾಳ ಗ್ರಾಮದ ಬಳಿ ನಡೆದಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ರೇಣುಕಮ್ಮಳನ್ನು (35) ಹತ್ಯೆ ಮಾಡಲಾಗಿದೆ. ಗೋರೆಬಾಳ ಗ್ರಾಮದಲ್ಲಿ ವಾಸವಾಗಿದ್ದ ರೇಣುಕಮ್ಮ ನಿಂಗಪ್ಪ ಎಂಬುವನೊಂದಿಗೆ ಅನೈತಿಕ ಸಂಬಂಧವಿರಿಸಿ ಕೊಂಡಿದ್ದಳು. ಈಕೆಯ ಜತೆ ಮದುವೆ ಆಗೊದಾಗಿ ಜೂನ್ 8 ಕ್ಕೆ ಕರೆಸಿದ್ದ ನಿಂಗಪ್ಪ ಕೊಲೆ ಮಾಡಿದ್ದಾನೆ.
ಮನೆಗೆ ಮರಳಿ ಮಗಳು ಬಾರದೆ ಇರುವುದರಿಂದ ರೇಣುಕಮ್ಮ ತಾಯಿ, ಸಿಂಧನೂರ ಗ್ರಾಮೀಣ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಈಕೆಯ ಅನೈತಿಕ ಸಂಬಂಧದ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ನಿನ್ನೆ ಮಧ್ಯಾಹ್ನ ಈಕೆಯ ಪ್ರಿಯಕರ ನಿಂಗಪ್ಪನನ್ನ ಪೊಲೀಸರು ಬಂಧಿಸಿದ್ದು, ನಿಂಗಪ್ಪನನ್ನ ವಿಚಾರಣೆ ಮಾಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಸಿಂಧನೂರ ಗ್ರಾಮೀಣ ಠಾಣೆಯಲ್ಲಿ ಸದ್ಯ ಪ್ರಕರಣ ದಾಖಲಾಗಿದೆ.
ಮೈಸೂರು: ಪೊಲೀಸ್ ಬಡಾವಣೆ ಬಳಿ ನಾಲೆಯಲ್ಲಿ ಶವ ಪತ್ತೆ ಎಎಸ್ಐ ಮಹದೇವಸ್ವಾಮಿ ಪುತ್ರ ಮನೋಜ್(17) ಶವವಾಗಿ ಪತ್ತೆಯಾಗಿದ್ದಾರೆ. ಮೈಸೂರಿನ ಪೊಲೀಸ್ ಬಡಾವಣೆಯ 3ನೇ ಹಂತದಲ್ಲಿ ASI ನಿವಾಸ ಇದ್ದು, ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಮನೋಜ್ ನಾಪತ್ತೆಯಾಗಿದ್ದಾನೆ. ಬಳಿಕ ನಾಲೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ಕಾಲುಜಾರಿ ಕಾಲುವೆಗೆ ಬಿದ್ದು ಮನೋಜ್ ಸಾವಿಗೀಡಾಗಿರುವುದಾಗಿ ಶಂಕಿಸಲಾಗಿದೆ. ಸದ್ಯ ಈ ಸಂಬಂಧ ಮೈಸೂರು ಗ್ರಾ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ದೇವರು ಯಾವ ರೂಪದಲ್ಲಿ ಬೇಕಾದರೂ ಬರಬಹುದು ಎನ್ನುವುದಕ್ಕೆ ಸಾಕ್ಷಿ ಇದು: ವಿಡಿಯೋ ನೋಡಿ
Published On - 9:21 am, Fri, 6 August 21