ಡ್ರಗ್ಸ್, ಗಾಂಜಾ ಸೇವನೆ ಅನುಮಾನ ಹಿನ್ನೆಲೆ ಒಟೋಸ್ ಪಬ್ ಮೇಲೆ ಸಿಸಿಬಿ ದಾಳಿ: 200ಕ್ಕೂ ಅಧಿಕ ಜನ ಭಾಗಿ
ಜಿಲ್ಲೆಯ ರಟ್ಟೀಹಳ್ಳಿ ಪೊಲೀಸರ ಕಾರ್ಯಾಚರಣೆಯಿಂದಾಗಿ ಕೃಷ್ಣಮೃಗಗಳನ್ನು ಭೇಟೆಯಾಡುತ್ತಿದ್ದ ಐವರ ಬಂಧನ ಮಾಡಲಾಗಿದೆ. ಎರಡು ಹೆಣ್ಣು ಕೃಷ್ಣಮೃಗಗಳನ್ನು ಭೇಟೆಯಾಡಿ ಅವುಗಳ ಮೃತದೇಹ ತೆಗೆದುಕೊಂಡು ಹೋಗುತ್ತಿದ್ದ ವೇಳೆ ರಟ್ಟೀಹಳ್ಳಿ ಪಟ್ಟಣದ ಭಗತ್ ಸಿಂಗ್ ವೃತ್ತದಲ್ಲಿ ಪೊಲೀಸರ ಬಲೆಗೆ ಆರೋಪಿಗಳು ಬಿದಿದ್ದಾರೆ.
ಬೆಂಗಳೂರು: ತಡರಾತ್ರಿ ರೇವ್ ಪಾರ್ಟಿ (Rave Party) ಶಂಕೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಸಿಸಿಬಿ ಹಾಗೂ ಜೀವನ್ ಭೀಮ ನಗರ ಪೊಲೀಸರ ಜಂಟಿ ಕಾರ್ಯಚಾರಣೆ ನಡೆಸಿದ್ದು, ಒಟೋಸ್ (Otto’s) ಪಬ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಪಾರ್ಟಿಯಲ್ಲಿ ಡ್ರಗ್ಸ್, ಗಾಂಜಾ ಸೇವನೆ ಅನುಮಾನ ಹಿನ್ನೆಲೆ ದಾಳಿ ಮಾಡಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಪಾರ್ಟಿಯಲ್ಲಿ 200ಕ್ಕೂ ಅಧಿಕ ಜನರು ಭಾಗಿಯಾಗಿದ್ದಾರೆ. ಸದ್ಯ ಒಟೋಸ್ ಪಬ್ ಮೇಲಿನ ಜೆ.ಬಿ ನಗರ ಪೊಲೀಸರ ದಾಳಿ ಅಂತ್ಯವಾಗಿದೆ. ಪಾರ್ಟಿಯಲ್ಲಿ ಗಾಂಜಾ, ಡ್ರಗ್ಸ್ ಸೇವನೆ ಮಾಡ್ತಿರೋ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು. ಸತತ ನಾಲ್ಕು ಗಂಟೆಗೂ ಅಧಿಕ ಸಮಯ ಪರಿಶೀಲನೆ ಮಾಡಿದ್ದು, ಪರಿಶೀಲನೆ ವೇಳೆ ಕೆಲವರು ಗಾಂಜಾ, ಡ್ರಗ್ಸ್ ಸೇವಿಸಿರೋದು ಪತ್ತೆಯಾಗಿದೆ. 40ಕ್ಕೂ ಹೆಚ್ಚು ಜನರನ್ನ ಮೆಡಿಕಲ್ ಟೆಸ್ಟ್ಗೆ ಕರೆದೊಯ್ದಿದ್ದ ಪೊಲೀಸರು, ಕೆಲವರ ಬಳಿ ಗಾಂಜಾ, ಡ್ರಗ್ಸ್ ಮಾತ್ರೆಗಳು ಪತ್ತೆಯಾಗಿವೆ. ಮಾದಕ ವಸ್ತು ಜಪ್ತಿ ಮಾಡಿ ನಾಲ್ವರನ್ನ ಬಂಧಿಸಿ ಜೆ.ಬಿ.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಿಶೀಲನೆ ವೇಳೆ ಕೆಲವರು ಗಾಂಜಾ, ಡ್ರಗ್ಸ್ ಸೇವಿಸಿರೋದು ಪತ್ತೆ ಹಿನ್ನೆಲೆ 40ಕ್ಕೂ ಹೆಚ್ಚು ಜನರನ್ನ ಪೊಲೀಸರು ಮೆಡಿಕಲ್ ಟೆಸ್ಟ್ ಮಾಡಿದ್ದಾರೆ. ಕೆಲವರ ಬಳಿ ಗಾಂಜಾ, ಡ್ರಗ್ಸ್ ಮಾತ್ರೆಗಳು ಪತ್ತೆಯಾಗಿದ್ದು, 40 ಜನರ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಕೃಷ್ಣಮೃಗಗಳನ್ನು ಭೇಟೆಯಾಡುತ್ತಿದ್ದ ಐವರ ಬಂಧನ
ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ಪೊಲೀಸರ ಕಾರ್ಯಾಚರಣೆಯಿಂದಾಗಿ ಕೃಷ್ಣಮೃಗಗಳನ್ನು ಭೇಟೆಯಾಡುತ್ತಿದ್ದ ಐವರ ಬಂಧನ ಮಾಡಲಾಗಿದೆ. ಎರಡು ಹೆಣ್ಣು ಕೃಷ್ಣಮೃಗಗಳನ್ನು ಭೇಟೆಯಾಡಿ ಅವುಗಳ ಮೃತದೇಹ ತೆಗೆದುಕೊಂಡು ಹೋಗುತ್ತಿದ್ದ ವೇಳೆ ರಟ್ಟೀಹಳ್ಳಿ ಪಟ್ಟಣದ ಭಗತ್ ಸಿಂಗ್ ವೃತ್ತದಲ್ಲಿ ಪೊಲೀಸರ ಬಲೆಗೆ ಆರೋಪಿಗಳು ಬಿದಿದ್ದಾರೆ. ಬಂಧಿತರಿಂದ ಕೃಷ್ಣಮೃಗಗಳ ಭೇಟೆಯಾಡಲು ಬಳಸಿದ್ದ ಒಂದು ಸಿಂಗಲ್ ಬ್ಯಾರಲ್ ಬಂದೂಕು, ಆರು ಕೋಕಾಗಳು, ಎರಡು ಚಾಕು ಮತ್ತು ಒಂದು ಬೊಲೆರೋ ವಾಹನ ಸೇರಿದಂತೆ ವಿವಿಧ ವಸ್ತುಗಳು ಜಪ್ತಿ ಮಾಡಲಾಗಿದೆ. ಸಾದೀಕ ನವೀದ್ 45 ವರ್ಷ, ಮಹ್ಮದ ಅಲಿ 32 ವರ್ಷ, ಸಯ್ಯದ ಮುಕೀಬ್ 21 ವರ್ಷ, ಸಯ್ಯದ ನಸರುಲ್ಲಾ 52 ವರ್ಷ ಮತ್ತು ಸುಹೇಲ್ ಖಾನ್ 21 ವರ್ಷ ಬಂಧಿತರು. ಬಂಧಿತರೆಲ್ಲರೂ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಗ್ರಾಮದವರು. ಅರಣ್ಯ ಪ್ರದೇಶಗಳಲ್ಲಿ ಬಂದೂಕಿನಿಂದ ಗುಂಡು ಹೊಡೆದು ಕೃಷ್ಣಮೃಗಗಳನ್ನು ಭೇಟೆಯಾಡಿ ಕೃಷ್ಣಮೃಗಗಳ ಮಾಂಸ ಮತ್ತು ಚರ್ಮವನ್ನು ಆರೋಪಿಗಳು ಮಾರಾಟ ಮಾಡುತ್ತಿದ್ದರು. ಕೃಷ್ಣಮೃಗಗಳನ್ನು ಭೇಟೆಯಾಡುವುದಲ್ಲದೆ ಬಂದೂಕು, ಚಾಕು ಇಟ್ಟುಕೊಂಡು ದರೋಡೆ ಮಾಡುತ್ತಿದ್ದ ಗ್ಯಾಂಗ್. ರಟ್ಟೀಹಳ್ಳಿ ಪಿಎಸ್ಐ ಕೃಷ್ಣಪ್ಪ ತೋಪಿನ ಹಾಗೂ ತಂಡದಿಂದ ಆರೋಪಿಗಳ ಬಂಧನವಾಗಿದ್ದು, ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವಿಲ್ಹಿಂಗ್ ಆಸೆಗೆ ಬಿದ್ದು ಬೈಕ್ ಕಳ್ಳತನ
ತುಮಕೂರು: ನಗರದ ಜಯನಗರ ಹಾಗೂ ತಿಲಕ್ ಪಾರ್ಕ್ ಪೊಲೀಸರ ಕಾರ್ಯಚರಣೆಯಿಂದ ವಿಲ್ಹಿಂಗ್ ಆಸೆಗೆ ಬಿದ್ದು ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ಕು ಜನ ಅಸಾಮಿಗಳ ಬಂಧನ ಮಾಡಲಾಗಿದೆ. ಬಂಧಿತರಿಂದ 16 ದ್ವಿಚಕ್ರ ವಾಹನಗಳು ವಶ ಪಡಿಸಿಕೊಂಡಿದ್ದು, ಅನೈತಿಕ ಚಟುವಟಿಕೆ ಹಾಗೂ ವಿಲ್ಹಿಂಗ್ಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದರು. ಕಳೆದ ಕೆಲ ದಿನಗಳಿಂದ ತುಮಕೂರು ನಗರದಲ್ಲಿ ಬೈಕ್ ಕಳ್ಳತನ ಹೆಚ್ಚಾಗಿದ್ದು, ಈ ಸಂಬಂಧ ವಿಶೇಷ ತಂಡ ರಚಿಸಿ ಆರೋಪಿಗಳಿಗೆ ಪೊಲೀಸರು ಬಲೆಬಿಸಿದ್ದರು. ಆರೋಪಿಗಳ ಬಂಧನದಿಂದ ನಗರದ ತಿಲಕ್ ಪಾರ್ಕ್, ಜಯನಗರ, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವುವಾಗಿದ್ದ 16 ದ್ವಿಚಕ್ರ ವಾಹನಗಳು ಪತ್ತೆಯಾಗಿವೆ. ಸದ್ಯ ಆರೋಪಿಗಳನ್ನ ಬಂಧಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.