ಪಾಲಾರ್ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ, ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ನಿಧನ

1993 ರಲ್ಲಿ ನಡೆದಿದ್ದ ಪಾಲಾರ್ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ, ವೀರಪ್ಪನ್ ಸಹಚರ ಜ್ಞಾನಪ್ರಕಾಶ್ (69) ನಿಧನರಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಮಾರ್ಟಳ್ಳಿ ಸಮೀಪ ಸಂದನಪಾಳ್ಯದಲ್ಲಿ ವಾಸವಿದ್ದರು. ಮೃತ ಜ್ಞಾನಪ್ರಕಾಶ್​ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ಪಾಲಾರ್ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ, ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ನಿಧನ
ಮೃತ ಜ್ಞಾನಪ್ರಕಾಶ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Dec 15, 2023 | 10:30 PM

ಚಾಮರಾಜನಗರ, ಡಿಸೆಂಬರ್​​ 15: 1993 ರಲ್ಲಿ ನಡೆದಿದ್ದ ಪಾಲಾರ್ ಬಾಂಬ್ ಸ್ಫೋಟ (Palar bomb blast) ದ ಪ್ರಮುಖ ಅಪರಾಧಿ, ವೀರಪ್ಪನ್ ಸಹಚರ ಜ್ಞಾನಪ್ರಕಾಶ್ (69) ನಿಧನರಾಗಿದ್ದಾರೆ. ಜಾಮೀನಿನ ಮೇಲೆ ಮೈಸೂರು ಜೈಲಿನಿಂದ 2022ರ ಡಿಸೆಂಬರ್20 ರಂದು ಬಿಡುಗಡೆಯಾಗಿದ್ದರು. 29 ವರ್ಷಗಳ ಕಾಲ ಬೆಳಗಾವಿ ಹಾಗೂ ಮೈಸೂರು ಜೈಲಿನಲ್ಲಿದ್ದರು. ಮೃತ ಜ್ಞಾನಪ್ರಕಾಶ್​ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಮಾನವೀಯತೆ ಆಧಾರದ ಮೇಲೆ ಸುಪ್ರೀಂಕೋರ್ಟ್​ನಿಂದ ಜಾಮೀನು ಮಂಜೂರು ಮಾಡಲಾಗಿತ್ತು.

ಜಿಲ್ಲೆಯ ಹನೂರು ತಾಲೂಕು ಮಾರ್ಟಳ್ಳಿ ಸಮೀಪ ಸಂದನಪಾಳ್ಯದಲ್ಲಿ ವಾಸವಿದ್ದರು. 1997 ರಲ್ಲಿ ಟಾಡಾ ನ್ಯಾಯಾಲಯದಿಂದ ಗಲ್ಲುಶಿಕ್ಷೆಗೆ ಗುರಿಯಾಗಿದ್ದು, 2014 ರಲ್ಲಿ ಗಲ್ಲುಶಿಕ್ಷೆ ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿತ್ತು.

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಬೈಕ್ ಸವಾರ ಸಾವು

ಕಲಬುರಗಿ: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಾಡಬೂಳ ಕ್ರಾಸ್ ಹತ್ತಿರ ನಡೆದಿದೆ. ದಂಡೋತಿ ಗ್ರಾಮದ ಪ್ರಕಾಶ್ (24 ) ಮೃತಪಟ್ಟ ದುರ್ದೈವಿ. ದಂಡೋತಿ ಗ್ರಾಮದಿಂದ ಚಿತ್ತಾಪುರಕ್ಕೆ ಬರುವಾಗ ಅವಘಡ ಸಂಭವಿಸಿದೆ. ಸ್ಥಳಕ್ಕೆ ಚಿತ್ತಾಪುರ ಪೊಲೀಸರು ಭೇಟಿ ನೀಡಿ ಪರೀಶಿಲನೆ ಮಾಡಿದ್ದು, ಪ್ರಕರಣ ದಾಖಲಾಗಿದೆ.

ಮಾನಸಿಕ ಖಿನ್ನತೆಗೆ ಒಳಗಾಗಿ ಯುವಕ ನೇಣಿಗೆ ಶರಣು

ಆನೇಕಲ್: ಮಾನಸಿಕ ಖಿನ್ನತೆಗೆ ಒಳಗಾಗಿ ಯುವಕ ನೇಣಿಗೆ ಶರಣಾಗಿರುವಂತಹ ಘಟನೆ ಆನೇಕಲ್ ಪಟ್ಟಣದ ಭೋವಿ ಕಾಲೋನಿಯಲ್ಲಿ ನಡೆದಿದೆ. ಯೋಗೇಶ್(29) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದೊಂದು ವರ್ಷದ ಹಿಂದೆ ಮದುವೆಯಾಗಿದ್ದ ಯೋಗೇಶ್, ಪತ್ನಿ ಎಂಟು ತಿಂಗಳ ಗರ್ಭಯಾಗಿದ್ದಳು.

ಇದನ್ನೂ ಓದಿ: ಆನೇಕಲ್: ಹಾಡಹಗಲೇ ಖತರ್ನಾಕ್ ಕಳ್ಳರ ಕೈಚಳಕ: ಗಮನ ಬೇರೆಡೆಗೆ ಸೆಳೆದು 10 ಲಕ್ಷ ರೂ. ಕಳ್ಳತನ

ಕಳೆದ ಮೂರು ವರ್ಷದ ಹಿಂದೆ ಯೋಗೇಶ್ ಸಹೋದರ ಶಿವಕುಮಾರ್ ಸಹ ಸಾವನ್ನಪ್ಪಿದ್ದ. ಇಡೀ ಕುಟುಂಬದ ಜವಾಬ್ದಾರಿ ಯೋಗೇಶ್ ಮೇಲಿತ್ತು. ಆದರೆ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದ. ಹಣಕಾಸಿನ ಸಮಸ್ಯೆಯಿಂದಾಗಿ ಇತ್ತೀಚಿಗೆ ಮನನೊಂದಿದ್ದ. ಬೆಳಿಗ್ಗೆ ಮನೆಯ ರೂಮ್​ನಲ್ಲಿನ ಫ್ಯಾನ್ಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಸ್ಥಳಕ್ಕೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:25 pm, Fri, 15 December 23

ತಾಜಾ ಸುದ್ದಿ
‘ನಾನು ದರ್ಶನ್ ಪರ ನಿಲ್ಲುತ್ತೇನೆ, ದುಃಖದಲ್ಲೂ ಭಾಗಿ ಆಗಬೇಕು’; ಭಾವನಾ
‘ನಾನು ದರ್ಶನ್ ಪರ ನಿಲ್ಲುತ್ತೇನೆ, ದುಃಖದಲ್ಲೂ ಭಾಗಿ ಆಗಬೇಕು’; ಭಾವನಾ
ಒಪ್ಪೋ ಲೇಟೆಸ್ಟ್ ಸ್ಮಾರ್ಟ್​​​ಫೋನ್ A3 Pro ಮಾರುಕಟ್ಟೆಗೆ ಲಗ್ಗೆ
ಒಪ್ಪೋ ಲೇಟೆಸ್ಟ್ ಸ್ಮಾರ್ಟ್​​​ಫೋನ್ A3 Pro ಮಾರುಕಟ್ಟೆಗೆ ಲಗ್ಗೆ
Daily Devotional: ಮನೆ, ಆಸ್ತಿ ಖರೀದಿಸುವ ಮುನ್ನ ಈ ವಿಡಿಯೋ ನೋಡಿ
Daily Devotional: ಮನೆ, ಆಸ್ತಿ ಖರೀದಿಸುವ ಮುನ್ನ ಈ ವಿಡಿಯೋ ನೋಡಿ
ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ
ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್