ಸ್ಪೀಕರ್ ಕಡೆಯಿಂದ ಸರ್ಕಾರಿ ಕೆಲಸ ಕೊಡಿಸೋದಾಗಿ ನಂಬಿಸಿ.. ವಂಚನೆ ಮಾಡಿದ್ದ ಆಸಾಮಿ ಅಂದರ್​

ಸ್ಪೀಕರ್ ಕಡೆಯಿಂದ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆ ಬಳಿ 18 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಆರೋಪಿಯ ಬಂಧನವಾಗಿದೆ. ಚಂದ್ರಾ ಲೇಔಟ್ ಠಾಣೆ ಪೊಲೀಸರಿಂದ ಆರೋಪಿಯ ಬಂಧನವಾಗಿದೆ.

ಸ್ಪೀಕರ್ ಕಡೆಯಿಂದ ಸರ್ಕಾರಿ ಕೆಲಸ ಕೊಡಿಸೋದಾಗಿ ನಂಬಿಸಿ.. ವಂಚನೆ ಮಾಡಿದ್ದ ಆಸಾಮಿ ಅಂದರ್​
ಆರೋಪಿ ರಾಘವೇಂದ್ರ
KUSHAL V

|

Jan 26, 2021 | 9:23 PM

ಬೆಂಗಳೂರು: ಸ್ಪೀಕರ್ ಕಡೆಯಿಂದ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆ ಬಳಿ 18 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಆರೋಪಿಯ ಬಂಧನವಾಗಿದೆ. ಚಂದ್ರಾ ಲೇಔಟ್ ಠಾಣೆ ಪೊಲೀಸರಿಂದ ಆರೋಪಿಯ ಬಂಧನವಾಗಿದೆ.

ಮಂಡ್ಯ ಮೂಲದ ರಾಘವೇಂದ್ರ ಬಂಧಿತ ಆರೋಪಿ. ಪ್ರಮೀಳಾ ಎಂಬುವವರಿಂದ ರಾಘವೇಂದ್ರ ಹಂತ ಹಂತವಾಗಿ ಹಣ ಪಡೆದಿದ್ದನು ಎಂದು ಹೇಳಲಾಗಿದೆ.

ಏನಿದು ಪ್ರಕರಣ? 2017ರಲ್ಲಿ ಚಂದ್ರಾ ಲೇಔಟ್‌ನಲ್ಲಿ ವಾಸವಿದ್ದ ದೂರುದಾರೆ ಪ್ರಮೀಳಾಗೆ ಪರಿಚಯವಾಗಿದ್ದ ವಂಚಕ ರಾಘವೇಂದ್ರ ಹಾಗೂ ಆತನ ಪತ್ನಿ, ಸಂತ್ರಸ್ತೆಯ ಮಕ್ಕಳಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿದ್ರು. ಹಾಗಾಗಿ, ಪ್ರಮೀಳಾ ಸರ್ಕಾರಿ ಕೆಲಸದ ಆಸೆಗೆ ತಮ್ಮ ಮಕ್ಕಳ‌ ಶೈಕ್ಷಣಿಕ ದಾಖಲಾತಿ ಸಹ ನೀಡಿದ್ದರು ಎಂದು ಹೇಳಲಾಗಿದೆ.

ಈ ನಡುವೆ, ರಾಘವೇಂದ್ರ ನಕಲಿ ಅರ್ಜಿ ಭರ್ತಿ ಮಾಡಿಸಿ ಪ್ರಮೀಳಾ ಬಳಿ 18 ಲಕ್ಷಕ್ಕೂ ಹೆಚ್ಚು ಹಣವನ್ನು ಹಂತ ಹಂತವಾಗಿ ಪಡೆದಿದ್ದ ಎಂದು ತಿಳಿದುಬಂದಿದೆ. ಇದಲ್ಲದೆ, ಸ್ಪೀಕರ್ ಕಚೇರಿ ಸಿಬ್ಬಂದಿ ಹೆಸರಿನಲ್ಲೂ 30 ಸಾವಿರ ರೂ. ಪಡೆದಿದ್ದನಂತೆ.

ಆದರೆ, ಯಾವುದೇ ಕೆಲಸ ಕೊಡಿಸದಿದ್ದಾಗ ಪ್ರಮೀಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದೀಗ, ಪ್ರಮೀಳಾ ಕೊಟ್ಟ ದೂರಿನ ಮೇರೆಗೆ ಚಂದ್ರಾಲೇಔಟ್‌ ಪೊಲೀಸರಿಂದ ಆರೋಪಿ ರಾಘವೇಂದ್ರನ ಬಂಧನವಾಗಿದೆ.

ಹಾವೇರಿ: ಅನ್ನದಾತರ ‘ಗಣ’ ಕಹಳೆ ದಿನದಂದೇ.. ನೇಣುಬಿಗಿದುಕೊಂಡು ರೈತ ಆತ್ಮಹತ್ಯೆ, ಯಾಕೆ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada