Shocking News: ಕೋಳಿ ಮೊದಲಾ? ಮೊಟ್ಟೆ ಮೊದಲಾ?; ತಪ್ಪು ಉತ್ತರ ನೀಡಿದ ಗೆಳೆಯನನ್ನು ಕೊಂದ ಕುಡುಕ!

ನಾವು ಸಣ್ಣವರಾಗಿದ್ದಾಗಿನಿಂದಲೂ ಕೋಳಿ ಮೊದಲಾ? ಮೊಟ್ಟೆ ಮೊದಲಾ? ಎಂಬ ಪ್ರಶ್ನೆಗೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ. ಒಬ್ಬೊಬ್ಬರ ಅಭಿಪ್ರಾಯದ ಪ್ರಕಾರ ಎರಡೂ ಉತ್ತರಗಳು ಸರಿ. ಆದರೆ, ಈ ಪ್ರಶ್ನೆ ಒಬ್ಬ ವ್ಯಕ್ತಿಯ ಜೀವವನ್ನೇ ಬಲಿ ಪಡೆದಿದೆ ಎಂದರೆ ನಂಬಲು ಸಾಧ್ಯವೇ? ಅಷ್ಟಕ್ಕೂ ಏನಿದು ಘಟನೆ ಎಂಬ ಕುರಿತು ಮಾಹಿತಿ ಇಲ್ಲಿದೆ.

Shocking News: ಕೋಳಿ ಮೊದಲಾ? ಮೊಟ್ಟೆ ಮೊದಲಾ?; ತಪ್ಪು ಉತ್ತರ ನೀಡಿದ ಗೆಳೆಯನನ್ನು ಕೊಂದ ಕುಡುಕ!
ಕೋಳಿ - ಮೊಟ್ಟೆImage Credit source: istock
Follow us
ಸುಷ್ಮಾ ಚಕ್ರೆ
|

Updated on: Aug 01, 2024 | 8:57 PM

ಕೋಳಿ ಮೊದಲು ಬಂದಿದ್ದಾ? ಮೊಟ್ಟೆ ಮೊದಲು ಬಂದಿದ್ದಾ? ನೀವು ಖಂಡಿತವಾಗಿಯೂ ಈ ಒಗಟನ್ನು ಕೇಳಿರುತ್ತೀರಿ. ತಲೆಗೆ ಹುಳ ಬಿಡುವ ಈ ಪ್ರಶ್ನೆಗೆ ಯಾವುದು ಸರಿಯಾದ ಉತ್ತರ ಎಂಬ ಗೊಂದಲ ನಿಮ್ಮನ್ನೂ ಕಾಡಿರಬಹುದು. ಆದರೆ, ಈ ಪ್ರಶ್ನೆಯಿಂದ ಒಂದು ಕೊಲೆಯೇ ನಡೆದುಹೋಗಿದೆ. ಚರ್ಚಾಸ್ಪದ ವಿಷಯವಾಗಿರುವ ಈ ಪ್ರಶ್ನೆ ಕೇಳಿದ ಕುಡುಕನೊಬ್ಬ ತನ್ನ ಗೆಳೆಯ ಈ ಪ್ರಶ್ನೆಗೆ ಸರಿಯಾದ ಉತ್ತರ ನೀಡಲಿಲ್ಲ ಎಂದು ಆತನನ್ನು ಕೊಲೆ ಮಾಡಿರುವ ವಿಚಿತ್ರ ಮತ್ತು ಭಯಾನಕ ಘಟನೆ ನಡೆದಿದೆ.

ಇಂಡೋನೇಷ್ಯಾದ ಆಗ್ನೇಯ ಸುಲವೆಸಿ ಪ್ರಾಂತ್ಯದ ಮುನಾ ರೀಜೆನ್ಸಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. “ಕೋಳಿ ಅಥವಾ ಮೊಟ್ಟೆ ಈ ಎರಡರಲ್ಲಿ ಯಾವುದು ಮೊದಲು ಬಂದದ್ದು?” ಎಂಬ ಕ್ಲಾಸಿಕ್ ಒಗಟಿನ ಮೇಲೆ ಕುಡುಕರಿಬ್ಬರ ನಡುವೆ ವಾದ ಶುರುವಾಗಿದೆ. ಕುಡಿದ ಮತ್ತಿನಲ್ಲಿದ್ದ ಇಬ್ಬರೂ ತಾನು ಹೇಳಿದ ಉತ್ತರವೇ ಸರಿಯೆಂದು ಜಗಳವಾಡಿದ್ದಾರೆ. ಅದೇ ಕೋಪದಲ್ಲಿ ಒಬ್ಬ ಕುಡುಕ ತನ್ನ ಸ್ನೇಹಿತನನ್ನು ಇರಿದು ಕೊಂದಿದ್ದಾನೆ.

ಇದನ್ನೂ ಓದಿ: Viral Video: ವ್ಯಕ್ತಿಯ ಕುತ್ತಿಗೆಗೆ ಸುತ್ತಿಕೊಂಡು ನುಂಗಲೆತ್ನಿಸಿದ 15 ಅಡಿ ಉದ್ದದ ಹೆಬ್ಬಾವು; ಶಾಕಿಂಗ್ ವಿಡಿಯೋ ವೈರಲ್

ಕೊಲೆಯ ಆರೋಪದ ಮೇಲೆ ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ಜುಲೈ 24ರಂದು ಈ ದುರಂತ ಘಟನೆ ನಡೆದಿದೆ. ತನ್ನ ಗೆಳೆಯನನ್ನು ಕುಡಿಯಲು ಆಹ್ವಾನಿಸಿದ ಡಿಆರ್ ಎಂಬ ವ್ಯಕ್ತಿ ಹಲವಾರು ಸುತ್ತಿನ ಡ್ರಿಂಕ್ ಮುಗಿಸಿದ್ದರು. ಆಗ ಕೋಳಿ, ಮೊಟ್ಟೆಯ ವಿಷಯ ಚರ್ಚೆಗೆ ಬಂದಿತು. ಈ ಬಿಸಿ ಬಿಸಿ ಚರ್ಚೆ ವಿಪರೀತಕ್ಕೆ ಹೋಗಿ, ಜಗಳಕ್ಕೆ ತಿರುಗಿತು. ಹೊಡೆಯಲು ಬಂದ ಡಿಆರ್​ನಿಂದ ಆ ಸ್ನೇಹಿತ ತಪ್ಪಿಸಿಕೊಳ್ಳಲು ಓಡಿದ್ದಾನೆ. ಆಗ ಅವನ ಹಿಂದೆ ಓಡಿದ ಡಿಆರ್​ ಅಂಗಳದಲ್ಲಿ ಬಿದ್ದಿದ್ದ ಮಣ್ಣ ಅಗೆಯುವ ಚೂಪಾದ ಆಯುಧದಿಂದ ಆತನಿಗೆ ಹೊಡೆದು ಕೊಲೆ ಮಾಡಿದ್ದಾನೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ