CISF ಅಧಿಕಾರಿಗಳ ಕಾರ್ಯಾಚರಣೆ: ವಿದೇಶಕ್ಕೆ ಸ್ಮಗಲ್ ಮಾಡಲು ಯತ್ನಿಸುತ್ತಿದ್ದ ವಜ್ರ ವಶ

ಅಕ್ರಮವಾಗಿ ವಜ್ರದ ಹರಳುಗಳನ್ನು ವಿದೇಶಕ್ಕೆ ಸಾಗಿಸಲು ಯತ್ನಿಸಿದ್ದ ವ್ಯಕ್ತಿಯನ್ನು ಸಿಐಎಸ್​​ಎಫ್​ (CISF) ಅಧಿಕಾರಿಗಳು ಬಂಧಿಸಿದ್ದಾರೆ.

CISF ಅಧಿಕಾರಿಗಳ ಕಾರ್ಯಾಚರಣೆ: ವಿದೇಶಕ್ಕೆ ಸ್ಮಗಲ್ ಮಾಡಲು ಯತ್ನಿಸುತ್ತಿದ್ದ ವಜ್ರ ವಶ
ವಶಪಡಿಸಿಕೊಳ್ಳಲಾದ ವಜ್ರದ ಹರಳುಗಳು
Follow us
ವಿವೇಕ ಬಿರಾದಾರ
|

Updated on:May 28, 2023 | 3:34 PM

ಮಂಗಳೂರು: ಅಕ್ರಮವಾಗಿ ವಜ್ರದ ಹರಳುಗಳನ್ನು (Diamond crystal) ವಿದೇಶಕ್ಕೆ ಸಾಗಿಸಲು ಯತ್ನಿಸಿದ್ದ ವ್ಯಕ್ತಿಯನ್ನು ಸಿಐಎಸ್​​ಎಫ್​ (CISF) ಅಧಿಕಾರಿಗಳು ಬಂಧಿಸಿದ್ದಾರೆ. ಕೇರಳದ (Kerala) ಕಾಸರಗೋಡು (Kasaragod) ನಿವಾಸಿಯಾಗಿರುವ ವ್ಯಕ್ತಿ ದುಬೈಗೆ ತೆರಳಲು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Mangaluru International Airport) ಆಗಮಿಸಿದ್ದನು. ಈ ವೇಳೆ ಪ್ರಯಾಣಿಕನ ಅನುಮನಾಸ್ಪದ ವರ್ತನೆ ಕಂಡು CISF ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ ಪ್ರಯಾಣಿಕನ ಒಳ ಉಡುಪಿನಲ್ಲಿ ಅಡಗಿಸಿಟ್ಟಿದ್ದ ವಜ್ರದ ಹರಳುಗಳು ಪತ್ತೆಯಾಗಿವೆ.

ಪ್ರಯಾಣಿಕನಲ್ಲಿ 13 ಪೌಚ್​ಗಳಲ್ಲಿ ಒಟ್ಟು 1.69 ಕೋಟಿ ಮೌಲ್ಯದ ವಜ್ರದ ಹರಳುಗಳು ಪತ್ತೆಯಾಗಿವೆ. ಕೂಡಲೆ ಸಿಐಎಸ್​ಫ್​​ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದು, ಕಸ್ಟಮ್ಸ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಪಿಎಸ್‌ಐ ಮನೆಗೆಯೇ ಬೆಂಕಿ ಹಚ್ಚಿದ ದುಷ್ಕರ್ಮಿಗಳು, ಲಕ್ಷಾಂತರ ಮೌಲ್ಯದ ವಸ್ತುಗಳು ಆಹುತಿ

ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಸೇತುವೆ ಮೇಲಿಂದ ಹಾರಿ ವ್ಯಕ್ತಿ ಸಾವು

ದಾವಣಗೆರೆ: ಪೊಲೀಸರಿಂದ‌ ತಪ್ಪಿಸಿಕೊಳ್ಳಲು ಹೋಗಿ ಸೇತುವೆ ಮೇಲಿಂದ ಹಾರಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ತೋಳಹುಣಸೆ ಸೇತುವೆ ಬಳಿ ನಡೆದಿದೆ. ಹರೀಶ್ ಹಳ್ಳಿ (40) ಮೃತ ದುರ್ದೈವಿ. ಪ್ರಕರಣವೊಂದರಲ್ಲಿ ಬೇಕಾಗಿದ್ದ ಹರೀಶ್ ಹಳ್ಳಿ ಅವರನ್ನು ಪೊಲೀಸರು ವಶಕ್ಕೆ ಪಡೆದು ಕರೆತರುವ ವೇಳೆ  ತೋಳಹುಣಸೆ ಸೇತುವೆ ಬಳಿ ಪೊಲೀಸ್ ಜೀಪ್​ನಿಂದ ಜಿಗಿದು ತಪ್ಪಿಸಿಕೊಳ್ಳಲು ಹೋಗಿ ಸೇತುವೆ ಮೇಲಿಂದ ಹಾರಿದ್ದಾರೆ. ಇದರಿಂದ ತೀವ್ರಗಾಯಗೊಂಡ ಹರೀಶ್​ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಮಾಹಿತಿ ಹಕ್ಕು ಹೋರಾಟಗಾರನಾಗಿದ್ದ ಹರೀಶ್ ಹಳ್ಳಿ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದ ನಿವಾಸಿಯಾದ ಹರೀಶ್ ಹಳ್ಳಿಯೊಬ್ಬ ಮಾಹಿತಿ ಹಕ್ಕು ಹೋರಾಟಗಾರರಾಗಿದ್ದರು. ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಸೈಟ್ ಅನ್ನು ತನ್ನ ಹೆಸರಿಗೆ ಮಾಡಿಕೊಂಡ ಆರೋಪ ಎದುರಿಸುತ್ತಿದ್ದ ಹರೀಶ್ ಹಳ್ಳಿ ಅವರನ್ನು ಚನ್ನಗಿರಿ ಕಾಕನೂರ ಗ್ರಾಮದಿಂದ ಪೊಲೀಸರು ಕರೆ ತಂದಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ಇನ್ನು ಹರೀಶ್​ ಕುಟುಂಬಸ್ಥರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆ ಎದುರು ಧರಣಿ ನಡೆಸಿದರು.

ಎಸ್​ಐ ಹಾಗೂ ಇಬ್ಬರು ಪಿಸಿಗಳ ವಿರುದ್ದ ದೂರು

ಪೊಲೀಸರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತ ಸುರೇಶ್​ ಪತ್ನಿ ಎಸ್​ಐ ಹಾಗೂ ಇಬ್ಬರು ಪಿಸಿಗಳ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣದ ವಿಚಾರವಾಗಿ ತನ್ನ ಪತಿಯನ್ನ ಕರೆದುಕೊಂಡು ಹೋಗಿ ಗಾಂಧಿನಗರ ಪೊಲೀಸ್ ಠಾಣೆಯ ಎಸ್​ಐ ಕೃಷ್ಣಪ್ಪ ಹಾಗೂ ಇಬ್ಬರು ಪಿಸಿಗಳು ಸೇರಿ ಕೊಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ದಾವಣಗೆರೆ ಎಸ್ಪಿ ಡಾ.ಕೆ.ಅರುಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:32 pm, Sun, 28 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ