Devanahalli News: ಈಜಲು ಹೋಗಿ ನಾಲ್ವರು ಯುವಕರು ನೀರುಪಾಲು
ಮೋಜು ಮಸ್ತಿ ಮಾಡಲು ಬಂದಿದ್ದ ನಾಲ್ವರು ಯುವಕರು ನೀರುಪಾಲಾದಂತಹ ಘಟನೆ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರಾಮನಾಥಪುರದ ಕೆರೆಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ: ಮೋಜು ಮಸ್ತಿ ಮಾಡಲು ಬಂದಿದ್ದ ನಾಲ್ವರು ಯುವಕರು ನೀರುಪಾಲಾದಂತಹ (drown) ಘಟನೆ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರಾಮನಾಥಪುರದ ಕೆರೆಯಲ್ಲಿ ನಡೆದಿದೆ. ಆರ್.ಟಿ.ನಗರದ ಶೇಖ್, ತೋಹಿದ್, ಶಾಹಿದ್, ಫೈಜಲ್ ಮೃತರು. ನಂದಿಬೆಟ್ಟಕ್ಕೆ ತೆರಳಿದ್ದ ಯುವಕರು ಕೆರೆಯಲ್ಲಿ ಈಜಲು ಇಳಿದಿದ್ದರು. ನೀರಿನಲ್ಲಿ ಮುಳುಗುತ್ತಿದ್ದವರನ್ನ ರಕ್ಷಿಸಲು ಹೋಗಿ ನಾಲ್ವರೂ ಮೃತಪಟ್ಟಿದ್ದಾರೆ. ಕೆರೆ ಬಳಿ ಬಟ್ಟೆ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಬ್ಬರ ಮೃತದೇಹವನ್ನು ಅಗ್ನಿಶಾಮಕ ದಳ ಹೊರತೆಗೆದಿದ್ದು, ಮತ್ತಿಬ್ಬರ ಮೃತದೇಹಕ್ಕಾಗಿ ಹುಡುಕಾಟ ಮುಂದುವರೆಸಿದ್ದಾರೆ. ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಮುದ್ರದ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಇಬ್ಬರ ರಕ್ಷಣೆ
ಕಾರವಾರ: ಸಮುದ್ರದ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಇಬ್ಬರು ಬಾಲಕರನ್ನು ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಇಂದು ಮಧ್ಯಾಹ್ನ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಅಯಾನ್ ಖಾನ್ (13), ಸುಭಾನ್ ಖಾನ್ (12) ರಕ್ಷಣೆಗೊಳಗಾದ ಬಾಲಕರು.
ಇದನ್ನೂ ಓದಿ: Koppal News: ಲಾರಿಗೆ ಕಾರು ಡಿಕ್ಕಿ: ಸ್ಥಳದಲ್ಲಿಯೇ 6 ಜನ ದುರ್ಮರಣ
ಕುಟುಂಬ ಸಮೇತರಾಗಿ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. ಸಮುದ್ರದಲ್ಲಿ ಈಜಾಡಲು ತೆರಳಿದಾಗ ಇಬ್ಬರು ಬಾಲಕರು ಸುಳಿಗೆ ಸಿಲುಕಿದ್ದರು. ಈ ವೇಳೆ ಲೈಫ್ ಗಾರ್ಡ್ ಸಿಬ್ಬಂದಿ ಮೋಹನ್ ಅಂಬಿಗ, ಶಿವಪ್ರಸಾದ ಅಂಬಿಗ, ಲೋಕೇಶ್ ಹರಿಕಂತ್ರ, ಬೀಚ್ ಸೂಪರ್‌ವೈಸರ್ ರವಿ ನಾಯ್ಕ್ ಮತ್ತು ಪ್ರವಾಸಿ ಮಿತ್ರ ರಾಜೇಶ್ ಅಂಬಿಗ ಹಾಗೂ ಛಾಯಾಗ್ರಾಹಕ ಸಿಬ್ಬಂದಿ ಮಂಜುನಾಥ್ ಪಟಗಾರ, ಮಂಜುನಾಥ್ ಗೌಡ, ಮಹೇಶ್ ಪಟಗಾರ ಸಹಾಯದಿಂದ ರಕ್ಷಣೆ ಮಾಡಲಾಗಿದೆ.
ಕುಡಿದ ಮತ್ತಿನಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋಗಿ ವ್ಯಕ್ತಿ ಸಾವು
ಕೋಲಾರ: ಕುಡಿದ ಮತ್ತಿನಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋಗಿ ವ್ಯಕ್ತಿ ಮೃತಪಟ್ಟಿದ್ದಾನೆ. ಖಾಸಗಿ ಸುದ್ದಿ ವಾಹಿನಿ ವಾಹನ ಚಾಲಕ ಶಿವಕುಮಾರ್ (35) ಮೃತ ವ್ಯಕ್ತಿ. ಕೋಲಾರ ತಾಲ್ಲೂಕಿನ ಮೈಲಾಂಡಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಕಳೆದ ರಾತ್ರಿ ಮೂವರು ಗೆಳೆಯರ ಜೊತೆ ಎಣ್ಣೆ ಪಾರ್ಟಿ ಮಾಡಿ, ಬೆಳಗಿನ ಜಾವ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದಾಗ ಘಟನೆ ಸಂಭವಿಸಿದೆ. ಮೃತ ಶಿವಕುಮಾರ್ ಪೋಷಕರಿಂದ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ವೇಮಗಲ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:55 pm, Sun, 28 May 23