ಮುಂಬೈ: ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ ಕ್ವಾರ್ಟರ್ಸ್‌ನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಮುಂಬೈನ ಚೆಂಬೂರ್​ ಪೋಸ್ಟಲ್​ ಕಾಲೊನಿಯಲ್ಲಿರುವ ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ ಕ್ವಾರ್ಟರ್ಸ್‌ನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಇಬ್ಬರು ಆರೋಪಿಗಳನ್ನು ಬಂಧಿಸಿ ಸೋಮವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಘಟನೆಯು ನವೆಂಬರ್ 15-16 ರ ಮಧ್ಯರಾತ್ರಿ 10 ರಿಂದ 12.30 ರ ನಡುವೆ ಸಂಭವಿಸಿದೆ ಎಂದು ವರದಿಯಾಗಿದೆ.

ಮುಂಬೈ: ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ ಕ್ವಾರ್ಟರ್ಸ್‌ನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ
ಅಪರಾಧImage Credit source: Mint
Follow us
|

Updated on: Nov 19, 2023 | 2:41 PM

ಮುಂಬೈನ ಚೆಂಬೂರ್​ ಪೋಸ್ಟಲ್​ ಕಾಲೊನಿಯಲ್ಲಿರುವ ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ ಕ್ವಾರ್ಟರ್ಸ್‌ನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಇಬ್ಬರು ಆರೋಪಿಗಳನ್ನು ಬಂಧಿಸಿ ಸೋಮವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಘಟನೆಯು ನವೆಂಬರ್ 15-16 ರ ಮಧ್ಯರಾತ್ರಿ 10 ರಿಂದ 12.30 ರ ನಡುವೆ ಸಂಭವಿಸಿದೆ ಎಂದು ವರದಿಯಾಗಿದೆ.

ವಿದ್ಯಾರ್ಥಿನಿ ವಾಣಿಜ್ಯ ವಿದ್ಯಾರ್ಥಿಯಾಗಿದ್ದು, ಪಾಲ್ಘರ್ ಜಿಲ್ಲೆಯಲ್ಲಿ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದಾರೆ. BARCನಲ್ಲಿ ಕೆಲಸ ಮಾಡುವ ತನ್ನ ತಂದೆಯನ್ನು ಭೇಟಿ ಮಾಡಲು ಆಕೆ ಮುಂಬೈಗೆ ಬಂದಿದ್ದಳು ಮತ್ತು ಮುನ್ಸಿಪಲ್ ಆಸ್ಪತ್ರೆಯ ಎದುರು ಇರುವ ಸಂಕೀರ್ಣದ ಕಟ್ಟಡವೊಂದರಲ್ಲಿ ಅವರಿಗೆ ಫ್ಲಾಟ್ ನೀಡಲಾಗಿತ್ತು.

ಮೊದಲ ಆರೋಪಿಯನ್ನು 26 ವರ್ಷದ ಅಜಿತ್ ಕುಮಾರ್ ಯಾದವ್ ಎಂದು ಗುರುತಿಸಲಾಗಿದ್ದು, ಇನ್ನೊಬ್ಬ BARC ಸಿಬ್ಬಂದಿಯ ಮಗನಾಗಿದ್ದು, ಸಂತ್ರಸ್ತೆಯ ತಂದೆಯ ಮನೆಯ ಸಮೀಪವಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದನು.

ಮತ್ತಷ್ಟು ಓದಿ: ಮುಂಬೈ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಶಾಲೆಯ ಕಾವಲುಗಾರನ ಬಂಧನ

ಘಟನೆ ನಡೆದ ದಿನ ರಾತ್ರಿ ಅಜಿತ್ ಪೋಷಕರು ಹೊರಗೆ ಹೋಗಿದ್ದು, ಸ್ನೇಹಿತ ಗೋವಂಡಿ ನಿವಾಸಿ ಪ್ರಭಾಕರ ಯಾದವ್ (30) ಅವರನ್ನು ಮನೆಗೆ ಕರೆಸಿಕೊಂಡಿದ್ದ. ವಿದ್ಯಾರ್ಥಿನಿ ಅಡುಗೆಗಾಗಿ ಕೆಲವು ಪದಾರ್ಥಗಳನ್ನು ಪಡೆಯಲು ಅಜಿತ್ ಅವರ ಮನೆಗೆ ಹೋಗಿದ್ದಳು, ಅಲ್ಲಿ ಇಬ್ಬರೂ ತಂಪು ಪಾನೀಯದ ಬಾಟಲಿಯನ್ನು ನೀಡಿದರು. ಕೆಲವು ಗುಡುಕು ಪಾನೀಯವನ್ನು ಸೇವಿಸಿದ ಬಳಿಕ ವಿದ್ಯಾರ್ಥಿನಿ, ಪ್ರಜ್ಞೆ ಕಳೆದುಕೊಂಡಳು, ನಂತರ ಇಬ್ಬರೂ ಅವಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

12.30 ರ ಸುಮಾರಿಗೆ ಹುಡುಗಿಗೆ ಪ್ರಜ್ಞೆ ಬಂದ ನಂತರ, ತನಗೆ ಏನಾಯಿತು ಎಂದು ಅರಿತು ತನ್ನ ಫ್ಲಾಟ್‌ಗೆ ಓಡಿಹೋದಳು. ನಂತರ ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದ ತನ್ನ ಕೆಲವು ಆತ್ಮೀಯ ಸ್ನೇಹಿತರಿಗೆ ಘಟನೆಯ ಬಗ್ಗೆ ತಿಳಿಸಿದಳು. ಬಳಿಕ ನವೆಂಬರ್ 16ರಂದು ದೂರು ದಾಖಲಿಸಲಾಗಿದೆ. ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನವೆಂಬರ್ 20 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ