AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರಿಯರ್ ನೆಪದಲ್ಲಿ ವೈದ್ಯ, ಇಬ್ಬರು ಇಂಜಿನಿಯರ್​ಗಳಿಗೆ 63 ಲಕ್ಷ ವಂಚಿಸಿದ ಸೈಬರ್ ಅಪರಾಧಿಗಳು

ಬೆಂಗಳೂರು ಮೂಲದ ವೈದ್ಯ ಮತ್ತು ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನು ವಂಚಿಸಿದ ಸೈಬರ್ ಅಪರಾಧಿಗಳು ಬ್ಯಾಂಕ್ ಖಾತೆಗಳಿಂದ ಒಟ್ಟು 63 ಲಕ್ಷ ರೂಪಾಯಿಗಳನ್ನು ದೋಚಿದ್ದಾರೆ. ಕೊರಿಯರ್​ನಲ್ಲಿ ನಿಷೇಧಿತ ವಸ್ತುಗಳು ಬಂದಿವೆ ಎಂದು ಹೇಳಿ ಬ್ಯಾಂಕ್ ಖಾತೆ ಡಿಡೈಲ್ಸ್ ಪಡೆದು ಹಣ ದೋಚಲಾಗಿದೆ.

ಕೊರಿಯರ್ ನೆಪದಲ್ಲಿ ವೈದ್ಯ, ಇಬ್ಬರು ಇಂಜಿನಿಯರ್​ಗಳಿಗೆ 63 ಲಕ್ಷ ವಂಚಿಸಿದ ಸೈಬರ್ ಅಪರಾಧಿಗಳು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Nov 19, 2023 | 5:16 PM

Share

ಬೆಂಗಳೂರು, ನ.19: ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ವೈದ್ಯ ಮತ್ತು ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್​ಗಳಿಗೆ ಸೈಬರ್ ಅಪರಾಧಿಗಳು 63 ಲಕ್ಷ ರೂಪಾಯಿಗಳನ್ನು ವಂಚಿಸಿದ (Cheating) ಪ್ರಕರಣಗಳು ಬೆಳಕಿಗೆ ಬಂದಿವೆ. ತಮ್ಮ ಹೆಸರಿನಲ್ಲಿ ನಿಷೇಧಿತ ವಸ್ತುಗಳು ಕೊರಿಯರ್​ ಬಂದಿರುವುದಾಗಿ ಬೆದರಿಸಿ ಬ್ಯಾಂಕ್ ಖಾತೆ ಡಿಟೈಲ್ಸ್ ಪಡೆದು ಹಣ ವರ್ಗಾಯಿಸಿ ವಂಚಿಸಲಾಗಿದೆ.

ಕೋರಮಂಗಲದ ನಿವಾಸಿಯಾಗಿರುವ ವೈದ್ಯೆ ಗುರುವಾರ ಆಗ್ನೇಯ ಸೈಬರ್ ಕ್ರೈಂ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಕೊರಿಯರ್ ಕಂಪನಿಯೊಂದರ ಕಾರ್ಯನಿರ್ವಾಹಕ ಎಂದು ಹೇಳಿಕೊಂಡು ಅಪರಿಚಿತ ವ್ಯಕ್ತಿಯಿಂದ ತನಗೆ ಕರೆ ಬಂದಿದ್ದು, ತನ್ನ ಹೆಸರಿನಲ್ಲಿ ನಿಷೇಧಿತ ವಸ್ತುಗಳ ಪಾರ್ಸೆಲ್ ಇದೆ ಎಂದು ತಿಳಿಸಿದ್ದಾರೆ.

ಬಳಿಕ ಅಪ್ಲಿಕೇಶನ್​ವೊಂದನ್ನು ಡೌನ್‌ಲೋಡ್ ಮಾಡಲು ಹೇಳಿದರು. ಆಘಾತಕ್ಕೊಳಗಾದ ಅವರು, ಕರೆ ಮಾಡಿದ ಆರೋಪವನ್ನು ನಿರಾಕರಿಸಲು ಪ್ರಯತ್ನಿಸಿದರು. ಈ ವೇಳೆ ಸೈಬರ್ ವಂಚಕರು ಆಕೆಯ ಬ್ಯಾಂಕ್ ಖಾತೆಗಳನ್ನು ಕ್ರಾಸ್ ಚೆಕ್ ಮಾಡುವ ನೆಪದಲ್ಲಿ ವಿವರಗಳನ್ನು ಪಡೆದುಕೊಂಡು 7.6 ಲಕ್ಷ ವರ್ಗಾಯಿಸಿದ್ದಾರೆ.

ತನ್ನ ಖಾತೆಯಿಂದ ಹಣ ಕಡಿತಗೊಂಡ ಬಗ್ಗೆ ಮೆಸೇಜ್ ಬಂದಾಕ್ಷಣವೇ ಅಪರಿಚಿತ ವ್ಯಕ್ತಿಯನ್ನು ಸಂಪರ್ಕಿಸಲು ಯತ್ನಿಸಿದಾಗ ಸಾಧ್ಯವಾಗಲಿಲ್ಲ. ಈ ವೇಳೆ ತಾನು ವಂಚಕರ ವಂಚನೆಯ ಬಲೆಗೆ ಬಿದ್ದಿರುವುದು ಅವರಿಗೆ ತಿಳಿದುಬಂದಿದೆ.

ಇದನ್ನೂ ಓದಿ: ವೈದ್ಯಕೀಯ ಸೀಟು ಕೊಡಿಸುವುದಾಗಿ ಭರವಸೆ: ಗೃಹ ಸಚಿವರ ಆಪ್ತನೆಂದು ಹೇಳಿ ಲಕ್ಷಾಂತರ ರೂ ವಂಚನೆ

ಅದೇ ರೀತಿ, ಬೇಗೂರಿನ 48 ವರ್ಷದ ವ್ಯಕ್ತಿಯೊಬ್ಬರು ನವೆಂಬರ್ 17 ರ ಶುಕ್ರವಾರದಂದು ಆಗ್ನೇಯ ಪೊಲೀಸರಿಗೆ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಕೊರಿಯರ್ ಕಂಪನಿಯ ಎಕ್ಸಿಕ್ಯೂಟಿವ್ ಎಂದು ಹೇಳಿಕೊಂಡು ತನ್ನ ಖಾತೆಯ ಡಿಟೈಲ್ಸ್ ಪಡೆದು 29.6 ಲಕ್ಷ ರೂ. ವಂಚಿಸಿದ್ದಾಗಿ ದೂರು ನೀಡಿದ್ದಾರೆ.

ನಿಮ್ಮ ಹೆಸರಿನಲ್ಲಿ ಮುಂಬೈನಿಂದ ತೈವಾನ್‌ಗೆ ಪಾರ್ಸೆಲ್ ಇದ್ದು ಅದರಲ್ಲಿ ನಿಷೇಧಿತ ವಸ್ತುಗಳು ಇರುವುದಾಗಿ ಕರೆ ಮಾಡಿದ ವ್ಯಕ್ತಿ ತಿಳಿಸುತ್ತಾನೆ. ಅಲ್ಲದೆ, ತನ್ನ ಆಧಾರ್ ವಿವರಗಳನ್ನು ಶಂಕಿತರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಮತ್ತು ಪರಿಶೀಲನೆಗಾಗಿ ಬ್ಯಾಂಕ್ ಖಾತೆಯ ವಿವರಗಳನ್ನು ಕೇಳಿದ್ದು, ಈ ವ್ಯಕ್ತಿ ವಿವರಗಳನ್ನು ನೀಡಿದ್ದಾರೆ.

ಬ್ಯಾಂಕ್ ಖಾತೆ ಡಿಟೈಲ್ಸ್ ಸಿಕ್ಕ ಕೂಡಲೇ ಬ್ಯಾಂಕ್ ಖಾತೆಯಲ್ಲಿದ್ದ ಉಳಿತಾದಯ ಹಣವೆಲ್ಲಾ ಖಾಲೆಯಾಗಿ ವಂಚಕರ ಖಾತೆ ತುಂಬಿದೆ. ಈ ಹಿಂದೆ ದೇವರಬೀಸನಹಳ್ಳಿಯ ಸಾಫ್ಟ್‌ವೇರ್ ಇಂಜಿನಿಯರ್ ಕೂಡ ಇದೇ ಮಾದರಿಯಲ್ಲಿ ವಂಚನೆಗೊಳಗಾಗಿದ್ದರು.

ಕರೆ ಮಾಡಿದವರು ಆರಂಭದಲ್ಲಿ ಕೊರಿಯರ್ ಕಂಪನಿಯ ಕಾರ್ಯನಿರ್ವಾಹಕ ಎಂದು ಪರಿಚಯಿಸಿಕೊಂಡರು. ನಂತರ, ಅವರ ಸಹಚರರು ಮುಂಬೈ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ತನಗೆ ಕರೆ ಮಾಡಿ ಪಾರ್ಸೆಲ್​ನಲ್ಲಿ ನಿಷೇಧಿತ ವಸ್ತುಗಳನ್ನು ಇರುವುದಾಗಿ ಹಾಗೂ ಮನಿಲ್ಯಾಂಡರಿಂಗ್ ಆರೋಪಿಸಿ ಪರಿಶೀಲನೆಯ ನೆಪದಲ್ಲಿ ತನ್ನ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದು 26.2 ಲಕ್ಷವನ್ನು ವರ್ಗಾವಣೆ ಮಾಡಿದ್ದಾನೆ ಎಂದು ವೈಟ್‌ಫೀಲ್ಡ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಮತ್ತು ಅಕ್ರಮ ಪಾರ್ಸೆಲ್ ಆರೋಪದಂತಹ ಕರೆಗಳು ಬಂದಾಗ ಯಾವುದೇ ವ್ಯಕ್ತಿ ಗಾಬರಿಯಾಗುವುದು ಸಹಜ. ಆದರೆ, ಇಂತಹ ಕರೆಗಳನ್ನು ಸ್ವೀಕರಿಸಿದಾಗ ಜನರು ಹಲವು ಬಾರಿ ಯೋಚಿಸಬೇಕು. ಯಾವುದೇ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬಾರದು. ಬ್ಯಾಂಕ್ ಅಥವಾ ಪೊಲೀಸರು ವೈಯಕ್ತಿಕ ವಿವರಗಳನ್ನು ಪಡೆಯಲು ಅಧಿಕಾರವಿಲ್ಲ, ಅದೂ ಫೋನ್ ಮೂಲಕ ಎಂದು ತನಿಖೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಗರದಲ್ಲಿ ಸೈಬರ್ ವಂಚಕರ ಹಾವಳಿ ಮಿತಿ ಮೀರಿದ್ದು, ಪ್ರತಿ ವರ್ಷ ಹತ್ತು ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಸೈಬರ್​​ ವಂಚಕರ ಬಲೆಗೆ ಬಿದ್ದು ಜನರು ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಇಂತಹ ಅಪರಾಧಗಳನ್ನು ಮಟ್ಟಹಾಕಲು ಬೆಂಗಳೂರು ನಗರ ಪೊಲೀಸ್ ಇಲಾಖೆ ಮುಂದಾಗಿದೆ.

ನಗರ ಪೊಲೀಸ್ ಆಯುಕ್ತ ಬಿ.‌ದಯಾನಂದ್ ಅವರು, ಸೈಬರ್​ ಕ್ರೈಂ ತಡೆಯಲು ಮತ್ತು ಆರೋಪಿಗಳನ್ನು ಪತ್ತೆ ಹಚ್ಚಲು ನಾಲ್ವರು ಡಿಸಿಪಿಗಳನ್ನು ನೇಮಿಸಿದ್ದಾರೆ. ಸೈಬರ್ ಕ್ರೈಂ ವಂಚನೆಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ ಒಂದೊಂದು ವಿಭಾಗಕ್ಕೆ ಒಬ್ಬೊಬ್ಬ ಡಿಸಿಪಿಯನ್ನು ನೇಮಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು