ಡ್ರೋನ್ ಪ್ರತಾಪ್ ಹೆಸರಲ್ಲಿ ನಡೆಯುತ್ತಿದೆ ವಂಚನೆ; ಎಲ್ಲವನ್ನೂ ಬಿಚ್ಚಿಟ್ಟ ಸ್ಪರ್ಧಿ

ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಆರಂಭದಲ್ಲಿ ಓಪನ್​ಅಪ್ ಆಗೋಕೆ ಅವರು ಕೆಲವು ಸಮಯ ತೆಗೆದುಕೊಂಡರು. ಈಗ ಅವರು ಎಲ್ಲರ ಜೊತೆಯೂ ಮಾತನಾಡುತ್ತಿದ್ದಾರೆ.

ಡ್ರೋನ್ ಪ್ರತಾಪ್ ಹೆಸರಲ್ಲಿ ನಡೆಯುತ್ತಿದೆ ವಂಚನೆ; ಎಲ್ಲವನ್ನೂ ಬಿಚ್ಚಿಟ್ಟ ಸ್ಪರ್ಧಿ
ಡ್ರೋನ್ ಪ್ರತಾಪ್
Follow us
ರಾಜೇಶ್ ದುಗ್ಗುಮನೆ
|

Updated on:Nov 09, 2023 | 2:33 PM

ಬಿಗ್ ಬಾಸ್ ಮನೆ ಒಳಗೆ ಎಲ್ಲರೂ ಬೇರೆಯದೇ ಡ್ರೋನ್ ಪ್ರತಾಪ್ (Drone Prathap) ಅವರನ್ನು ನೋಡುತ್ತಿದ್ದಾರೆ. ಅವರ ನೋವುಗಳ ಬಗ್ಗೆ ಅವರು ಕೆಲವು ಬಾರಿ ಹೇಳಿಕೊಂಡಿದ್ದಾರೆ. ಮನೆಯವರ ಜೊತೆ ಮಾತು ಬಿಟ್ಟು ಅವರು ತುಂಬಾನೇ ವರ್ಷಗಳಾಗಿವೆ. ಇದರ ಜೊತೆ ಅವರು ಆಡುತ್ತಿರುವ ರೀತಿಯೂ ಎಲ್ಲರಿಗೂ ಇಷ್ಟವಾಗುತ್ತಿದೆ. ಈಗ ಡ್ರೋನ್ ಪ್ರತಾಪ್ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೊಸ ಪೋಸ್ಟ್ ಒಂದನ್ನು ಮಾಡಲಾಗಿದೆ. ಅವರ ಹೆಸರಲ್ಲಿ ನಡೆಯುತ್ತಿರುವ ವಂಚನೆ ಬಗ್ಗೆ ಮಾಹಿತಿ ನೀಡಲಾಗಿದೆ.

ಬಿಗ್ ಬಾಸ್​ ಒಳಗೆ ಇರುವ ಸ್ಪರ್ಧಿಗಳ ಸೋಶಿಯಲ್ ಮೀಡಿಯಾ ಖಾತೆಯನ್ನು ಅವರ ಆಪ್ತರು ಅಥವಾ ಕುಟುಂಬದವರು ಬಳಕೆ ಮಾಡುತ್ತಾರೆ. ಅವರ ಖಾತೆಯಿಂದ ವೋಟ್ ಮಾಡುವಂತೆ ಕೋರಿಕೊಳ್ಳಲಾಗುತ್ತದೆ. ಪ್ರತಾಪ್ ಇನ್​ಸ್ಟಾಗ್ರಾಮ್ ಖಾತೆಯನ್ನು ಅವರ ಗೆಳೆಯರು ಬಳಕೆ ಮಾಡುತ್ತಿದ್ದಾರೆ. ಅವರ ಗಮನಕ್ಕೆ ಬಂದ ವಿಚಾರವನ್ನು ಪೋಸ್ಟ್ ಮಾಡಲಾಗಿದೆ.

‘ಸ್ನೇಹಿತರೇ ನಾವು ನಮ್ಮ ಖಾತೆಯಿಂದಾಗಲಿ ಹಾಗೂ ಅಧಿಕೃತ ಫ್ಯಾನ್​ ಪೇಜ್​ನಿಂದಾಲೀ ಯಾವುದೇ ರೀತಿಯ ಪೇಯ್ಡ್ ಪ್ರಮೋಷನ್ ಅಥವಾ ಪೇಯ್ಡ್ ಕೊಲಾಬರೇಷನ್ ಮಾಡುತ್ತಿಲ್ಲ. ಕೆಲವು ಫ್ಯಾನ್ ಪೇಜ್​ಗಳಲ್ಲಿ ಈ ರೀತಿಯ ನಡವಳಿಕೆ ಕಂಡು ಬಂದಿದೆ. ಕೆಲವರು ನಮಗೆ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಿಂದ ನೀವುಗಳು ಮೋಸ ಹೋಗಬೇಡಿ. ಅದಕ್ಕೆ ನಾವು ಹೊಣೆಯಾಗಿರುವುದಿಲ್ಲ. ಅಂಥ ಖಾತೆಗಳನ್ನು ನೀವುಗಳು ರಿಪೋರ್ಟ್ ಮಾಡಬಹುದು’ ಎಂದು ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ: ಡ್ರೋನ್ ಪ್ರತಾಪ್ ಕೆಟ್ಟ ದೃಷ್ಠಿಯಿಂದ ನೋಡುತ್ತಾರೆಯೇ? ಬಿಗ್​ಬಾಸ್ ಮನೆ ಮಹಿಳೆಯರು ಹೇಳಿದ್ದೇನು?

View this post on Instagram

A post shared by Prathap N M (@droneprathap)

ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಆರಂಭದಲ್ಲಿ ಓಪನ್​ಅಪ್ ಆಗೋಕೆ ಅವರು ಕೆಲವು ಸಮಯ ತೆಗೆದುಕೊಂಡರು. ಈಗ ಅವರು ಎಲ್ಲರ ಜೊತೆಯೂ ಮಾತನಾಡುತ್ತಿದ್ದಾರೆ. ಈ ವಾರ ಒಂದು ತಂಡದ ನಾಯಕನಾಗಿ ನಾಲ್ಕಕ್ಕೆ ನಾಲ್ಕು ಮ್ಯಾಚ್ ಗೆದ್ದಿದ್ದಾರೆ. ಬಿಗ್ ಬಾಸ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಣೆಗೆ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:12 pm, Thu, 9 November 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ