ಜ್ಞಾನೋದಯವೋ ಅಥವಾ ನಾಟಕವೋ? ಸಂಗೀತಾನ ಹಾಡಿ ಹೊಗಳಿದ ತುಕಾಲಿ ಸಂತೋಷ್

ಸಂತೋಷ್ ಅವರ ಬಗ್ಗೆ ಪಾಸಿಟಿವ್ ಹಾಗೂ ನೆಗೆಟಿವ್ ಟಾಕ್ ಎರಡೂ ಇದೆ. ಅವರನ್ನು ಅನೇಕರು ಶಕುನಿ ಎಂದು ಕರೆದಿದ್ದಾರೆ. ಅವರಿಗೆ ಈಗ ಜ್ಞಾನೋದಯ ಆದಂತೆ ಕಾಣುತ್ತಿದೆ. ಕೆಲವರು ಇದನ್ನು ನಾಟಕ ಎಂದಿದ್ದಾರೆ.

ಜ್ಞಾನೋದಯವೋ ಅಥವಾ ನಾಟಕವೋ? ಸಂಗೀತಾನ ಹಾಡಿ ಹೊಗಳಿದ ತುಕಾಲಿ ಸಂತೋಷ್
ಸಂಗೀತಾ-ಸಂತೋಷ್
Follow us
ರಾಜೇಶ್ ದುಗ್ಗುಮನೆ
|

Updated on: Nov 09, 2023 | 10:47 AM

ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 10ರ ರಂಗು ದಿನ ಕಳೆದಂತೆ ಹೆಚ್ಚುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಹಲವು ಮನಸ್ಥಿತಿಯುಳ್ಳ ಸ್ಪರ್ಧಿಗಳು ದೊಡ್ಮನೆಗೆ ಬಂದಿದ್ದಾರೆ. ಈ ಪೈಕಿ ತುಕಾಲಿ ಸಂತೋಷ್ ಅವರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಅವರ ಬಗ್ಗೆ ಪಾಸಿಟಿವ್ ಹಾಗೂ ನೆಗೆಟಿವ್ ಟಾಕ್ ಎರಡೂ ಇದೆ. ಅವರನ್ನು ಅನೇಕರು ಶಕುನಿ ಎಂದು ಕರೆದಿದ್ದಾರೆ. ಅವರಿಗೆ ಈಗ ಜ್ಞಾನೋದಯ ಆದಂತೆ ಕಾಣುತ್ತಿದೆ. ಕೆಲವರು ಇದನ್ನು ನಾಟಕ ಎಂದಿದ್ದಾರೆ.

ಹುಲಿ ಉಗುರು ಪ್ರಕರಣದಲ್ಲಿ ವರ್ತೂರು ಸಂತೋಷ್ ಅವರು ದೊಡ್ಮನೆಯಿಂದ ಹೊರಗೆ ಬಂದರು. ಒಂದು ವಾರ ಬಿಟ್ಟು ಅವರು ಮತ್ತೆ ಬಿಗ್ ಬಾಸ್ ಮನೆ ಒಳಗೆ ಹೋಗಿದ್ದಾರೆ. ಸ್ಪರ್ಧಿಗಳ ಬಗ್ಗೆ ಹೊರ ಜಗತ್ತಿನಲ್ಲಿ ಯಾವ ರೀತಿಯ ಅಭಿಪ್ರಾಯ ಇದೆ ಎಂಬುದು ಅವರಿಗೆ ಅರ್ಥವಾದಂತೆ ಇದೆ. ಈ ಕಾರಣದಿಂದಲೇ ಅವರು ಪ್ರತಾಪ್ ಜೊತೆ ಫ್ರೆಂಡ್​ಶಿಪ್ ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ ತುಕಾಲಿ ಸಂತೋಷ್​ಗೆ ಇದನ್ನು ತಿಳಿ ಹೇಳಲು ಪ್ರಯತ್ನಿಸಿದ್ದಾರೆ.

‘ನಿಮ್ಮ ಗುಂಪು ಸರಿ ಇಲ್ಲ. ಅಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲ. ಟಾಸ್ಕ್ ಮುಗಿದ ಬಳಿಕವೂ ಆ ಬಗ್ಗೆ ಚರ್ಚೆ ಮಾಡುತ್ತಾರೆ. ನಮ್ಮ ಟೀಂನಲ್ಲಿ ಹಾಗಿಲ್ಲ. ಟಾಸ್ಕ್ ಮುಗಿದ ಬಳಿಕ ನಾವು ಆ ಬಗ್ಗೆ ಮಾತೇ ಆಡಲ್ಲ’ ಎಂದು ತುಕಾಲಿ ಸಂತೋಷ್ ಬಳಿ ವರ್ತೂರು ಸಂತೋಷ್ ಹೇಳಿದರು. ಇದು ತುಕಾಲಿ ಸಂತೋಷ್​ಗೆ ಹೌದೆನ್ನಿಸಿದೆ.

‘ಹೌದು ಅಣ್ಣಾ. ನನಗೆ ಈಗ ಎಲ್ಲವೂ ಗೊತ್ತಾಗ್ತಾ ಇದೆ. ನಮ್ಮ ಟೀಂನ ಕಚ್ಚಾಡ್ಕೊಂಡು ಇರ್ತಾರೆ. ಸಂಗೀತಾ ಕೆಟ್ಟವರು ಎಂದುಕೊಂಡಿದ್ದೆ. ಅವರು ನಿಜಕ್ಕೂ ಒಳ್ಳೆಯವರು’ ಎಂದರು ತುಕಾಲಿ ಸಂತೋಷ್. ಅವರ ಈ ಮಾತು ಅನೇಕರಿಗೆ ಅಚ್ಚರಿ ಮೂಡಿಸಿದೆ. ಇದು ಜ್ಞಾನೋದಯವೋ ಅಥವಾ ನಾಟಕವೋ ಎನ್ನುವ ಪ್ರಶ್ನೆ ಕಾಡಿದೆ.

ಇದನ್ನೂ ಓದಿ: ‘ಕಾರ್ತಿಕ್​ನ ಸಂಗೀತಾ ಟಿಶ್ಯೂ ರೀತಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ’; ಬಿಗ್ ಬಾಸ್​ನಲ್ಲಿ ಕೇಳಿತು ಹೊಸ ಆರೋಪ

ಬಿಗ್ ಬಾಸ್ ಮನೆಯಲ್ಲಿ ತಂಡದ ನಾಯಕನಾಗಿ ಡ್ರೋನ್ ಪ್ರತಾಪ್ ಅವರು ಒಳ್ಳೆಯ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಹೀಗಾಗಿ ಸಾಲು ಸಾಲು ಮ್ಯಾಚ್​ಗಳನ್ನು ಅವರು ಗೆಲ್ಲುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ