ನಗಿಸಿ, ಅಳಿಸಿ, ಆಕ್ರೋಶ ಗೊಳಿಸುವ ಆಟದಲ್ಲಿ ಗೆದ್ದವರ್ಯಾರು? ಸೋತವರ್ಯಾರು?

Bigg Boss 10: ಬಿಗ್​ಬಾಸ್​ನ ಬುಧವಾರದ ಎಪಿಸೋಡ್​ನಲ್ಲಿ ಸ್ಪರ್ಧಿಗಳು ಪರಸ್ಪರರ ಮೇಲೆ ಮನದ ವಿಷ ಕಾರಿಕೊಂಡರು. ನಗಿಸಿ, ಅಳಿಸಿ, ಆಕ್ರೋಶ ಉಕ್ಕಿಸಬೇಕಾದ ಟಾಸ್ಕ್​ ಅನ್ನು ಸ್ಪರ್ಧಿಗಳು ಪರಸ್ಪರರ ಮೇಲೆ ನಿಂದನೆಗೆ ಬಳಸಿಕೊಂಡರು.

ನಗಿಸಿ, ಅಳಿಸಿ, ಆಕ್ರೋಶ ಗೊಳಿಸುವ ಆಟದಲ್ಲಿ ಗೆದ್ದವರ್ಯಾರು? ಸೋತವರ್ಯಾರು?
Follow us
ಮಂಜುನಾಥ ಸಿ.
|

Updated on: Nov 08, 2023 | 11:44 PM

ಬಿಗ್​ಬಾಸ್ (Bigg Boss) ಮನೆಯ ಸದಸ್ಯರಿಗೆ ‘ಬೊಂಬೆಯಾಟವಯ್ಯ’ ಹೆಸರಿನ ಟಾಸ್ಕ್​ ಅನ್ನು ನೀಡಿದ್ದರು. ಟಾಸ್ಕ್​ನ ಅನ್ವಯ ಒಂದು ತಂಡ ಇನ್ನೊಂದು ತಂಡದ ಸದಸ್ಯರನ್ನು ನಿಗದಿತ ಸಮಯದೊಳಗೆ ಒಮ್ಮೆ ನಗಿಸಬೇಕಿತ್ತು, ಒಮ್ಮೆ ಅಳಿಸಬೇಕಿತ್ತು ಒಮ್ಮೆ ಕೋಪ ಉಕ್ಕುವಂತೆ ಮಾಡಬೇಕಿತ್ತು. ಒಂದು ತಂಡ ಭಾವನೆಗಳನ್ನು ಹೊಮ್ಮಿಸುವಲ್ಲಿ ನಿರತರಾಗಿದ್ದಾಗ ಮತ್ತೊಂದು ತಂಡ ಅಲುಗಾಡದೆ ಕಲ್ಲಿನಂತೆ ಕೂರಬೇಕು, ಅಲುಗಾಡಿದರೆ ಎದುರಾಳಿ ತಂಡಕ್ಕೆ ಅಂಕ.

ಭಾವನೆ ಉಕ್ಕಿಸುವ ಟಾಸ್ಕ್​ನಲ್ಲಿ ಮನೆಯ ಎಲ್ಲ ಸ್ಪರ್ಧಿಗಳು ಬಹಳ ಚೆನ್ನಾಗಿ ಪ್ರದರ್ಶನ ನೀಡಿದ್ದೆಂದರೆ ಅದು ಕೋಪ ಉಕ್ಕಿಸುವ ಟಾಸ್ಕ್​ನಲ್ಲಿ. ಒಬ್ಬೊಬ್ಬ ಸ್ಪರ್ಧಿಯು ಎದುರಾಳಿ ತಂಡದವರ ಮೇಲೆ ನಿಂದನೆಯ ಮಳೆಯನ್ನೇ ಸುರಿಸಿದರು. ಒಬ್ಬರಿಗಿಂತಲೂ ಒಬ್ಬರು ಬಲ ಎಂಬಂತೆ ಎದುರಾಳಿಯ ಮೇಲೆ ಮನಸ್ಸಿನ ವಿಷ ಕಕ್ಕಿದರು. ಅದರಲ್ಲೂ ‘ಅತ್ಯುತ್ತಮವಾಗಿ ಆಡಿದ್ದೆಂದರೆ’ ನಾಗಿಣಿ ನಮ್ರತಾ ಮತ್ತು ಸ್ನೇಹಿತ್. ಟಾಸ್ಕ್​ನ ಅತ್ಯುತ್ತಮ ಫರ್ಮಾರ್​ಗಳವರು, ಅವರು ಆಡಿದ ಮಾತುಗಳು ಅಷ್ಟು ಹರಿತವಾಗಿತ್ತು, ನಿಂದಿಸುವುದರಲ್ಲಿ ತಾವು ಟಾಪ್ ಎಂದು ಇಬ್ಬರೂ ತೋರಿಸಿಕೊಂಡರು.

ಇದನ್ನೂ ಓದಿ:ಬಿಗ್​ಬಾಸ್ ಕನ್ನಡ ಸೀಸನ್ 10 ಗೆಲ್ತಾರಾ ನಮ್ರತಾ: ಆರ್ಯವರ್ಧನ್ ಹೇಳಿದ್ದೇನು?

ಸ್ನೇಹಿತ್ ಅಂತೂ ಕಾರ್ತಿಕ್​ರ ಖಾಸಗಿ ವಿಷಯಗಳ ಬಗ್ಗೆ ಮಾತನಾಡಿದರು. ಬಿಗ್​ಬಾಸ್ ಮನೆಯ ಹೊರಗಿನ ವಿಷಯಗಳು, ಸ್ಪರ್ಧಿಗಳ ಕುಟುಂಬದ ಬಗೆಗಿನ ವಿಷಗಳನ್ನು ಸಹ ಎತ್ತಿತಂದು ತುಚ್ಛವಾಗಿ ಕೆಲ ಸ್ಪರ್ಧಿಗಳು ಮಾತನಾಡಿದರು. ಇನ್ನು ವಿನಯ್, ತಾವು ಕಾರ್ತಿಕ್ ಅನ್ನು ಸ್ನೇಹಕ್ಕೆ ಬೆಲೆ ನೀಡದವನು ಎಂದೆಲ್ಲ ಹೇಳಿ, ನಮ್ಮಿಬ್ಬರ ಸ್ನೇಹ ಇಲ್ಲಿಗೆ ಮುಗಿಯತು ಎಂದರು. ತನಿಷಾ ಮನೆಯ ಬಗ್ಗೆ ಅವರನ್ನು ಬೆಳೆಸಿದ ರೀತಿ ಬಗ್ಗೆ, ವಿದ್ಯಾಭ್ಯಾಸದ ಬಗ್ಗೆಯೂ ಸ್ನೇಹಿತ್, ನಮ್ರತಾ ಮಾತನಾಡಿದರು. ಆ ಸಮಯದಲ್ಲಿ ಕಲ್ಲಂತಿದ್ದ ತನಿಷಾ ಆ ನಂತರ ಭಾವನೆಗಳನ್ನು ಹತ್ತಿಕ್ಕಿಕೊಳ್ಳಲಾಗದೆ ತನಿಷಾ ಅತ್ತು ಬಿಟ್ಟರು ಆದರೆ ಅತ್ತಾಗ ಅವರು ಅಳಿಸಬೇಕಾದ ತಂಡದಲ್ಲಿದ್ದರು. ಎದುರಾಳಿಯನ್ನು ಅಳಿಸಲು ಹೋಗಿ ಸ್ವತಃ ತಾವೇ ಅತ್ತುಬಿಟ್ಟರು.

ಟಾಸ್ಕ್​ನ ನಡುವೆ ಡ್ರೋನ್ ಪ್ರತಾಪ್ ಮೇಲೆ ಅವರದ್ದೇ ತಂಡದ ಸದಸ್ಯರು ಮುಗಿಬಿದ್ದು ಪ್ರಶ್ನೆಗಳನ್ನು ಕೇಳಿದರು. ಇದರಿಂದ ಸಿಟ್ಟಾದ ಪ್ರತಾಪ್, ಕಿರುಚಾಡಿದ ಘಟನೆಯೂ ನಡೆಯಿತು. ಬಳಿಕ ಬಂದು ಕ್ಷಮೆ ಕೇಳಿದ ಪ್ರತಾಪ್, ಮತ್ತೆ ತಂಡವನ್ನು ಒಟ್ಟಾಗಿ ಮುಂದೆ ತೆಗೆದುಕೊಂಡು ಹೋದರು. ಈ ನಡುವೆ ಸಿರಿ ತಂಡದವರು ಟಾಸ್ಕ್​ ಅನ್ನು ಮೈಖಲ್ ಮೂಲಕ ಫಿಕ್ಸ್​ ಮಾಡುವ ಆಲೋಚನೆಯನ್ನೂ ಮಾಡಿದರಾದರೂ ವಿನಯ್ ಬೇಡ ಎಂದಿದ್ದಕ್ಕೆ ಸುಮ್ಮನಾದರು.

ಯಾರು ಎಷ್ಟು ಬಾರಿ ಕದಲಿದರು ಎಂಬ ಲೆಕ್ಕಾಚಾರದಲ್ಲಿ ಅಂತಿಮವಾಗಿ ಡ್ರೋನ್ ಪ್ರತಾಪ್​ರ ತಂಡವೇ ಗೆದ್ದಿತು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್​ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಗೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ