ಓರ್ವ ವ್ಯಕ್ತಿಯನ್ನು ಕೊಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮೂವರು ಆರೋಪಿಗಳು ಪೆರೋಲ್ ಮೇಲೆ ಹೊರ ಬಂದು ಆತನ ಮಗನನ್ನೂ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅನುಜ್ ಅಖೋಲಾ ಗ್ರಾಮದ ನಿವಾಸಿಯಾಗಿದ್ದಾರೆ, ಇವರ ಮೇಲೆ ರಮೇಶ್ ಮತ್ತು ಆತನ ಇಬ್ಬರು ಮಕ್ಕಳಾದ ಶಿವಲೇಶ್ ಮತ್ತು ಕುಶಲೇಶ್ ಅವರ ಗುಂಡು ಹಾರಿಸಿದ್ದಾರೆ ಎಂದು ಪಿಲಿಭಿಟ್ ಪೊಲೀಸ್ ವರಿಷ್ಠಾಧಿಕಾರಿ ಅತುಲ್ ಶರ್ಮಾ ಹೇಳಿದ್ದಾರೆ. ಅನುಜ್ ಬೆಳಗ್ಗೆ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಘಟನೆಯ ನಂತರ ಮೂವರು ತಲೆಮರೆಸಿಕೊಂಡಿದ್ದಾರೆ ಮತ್ತು ಅವರನ್ನು ಬಂಧಿಸಲು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.
ಘಟನೆಯ ನಂತರ ಅನುಜ್ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ನಂತರ ತನಿಖೆ ಆರಮಭಿಸಿದ್ದಾರೆ.
ಪೊಲೀಸರ ಪ್ರಕಾರ, 2009 ರಲ್ಲಿ ಅನುಜ್ ಅವರ ತಂದೆ ಬಘವಾನ್ ಶಂಕರ್ ಮತ್ತು ಚಿಕ್ಕಪ್ಪ ಹರಿಶಂಕರ್ ಅವರನ್ನು ಕೊಂದ ಆರೋಪದಲ್ಲಿ ರಮೇಶ್, ಶಿವಲೇಶ್ ಮತ್ತು ಕುಶಲೇಶ್ ಅಪರಾಧಿಗಳಾಗಿದ್ದು, ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಮತ್ತಷ್ಟು ಓದಿ: ಕಲಬುರಗಿ: ಖಾಕಿ ವಶದಲ್ಲಿದ್ದಾಗಲೇ ಆರೋಪಿ ಸಾವು, ಪೊಲೀಸರ ಮೇಲೆ ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು
ಮೂವರನ್ನು ಪಿಲಿಭಿಟ್ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ. ಅವರು ಕೆಲವು ದಿನಗಳ ಹಿಂದೆ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:55 am, Fri, 18 August 23