Crime News: ದೆಹಲಿಯ ಬುರಾರಿ ರೀತಿಯಲ್ಲೇ ಪುಣೆಯಲ್ಲಿ ನಿಗೂಢ ಸಾವು; ಮನೆಯೊಳಗೆ ನಾಲ್ವರು ಶವವಾಗಿ ಪತ್ತೆ

| Updated By: ಸುಷ್ಮಾ ಚಕ್ರೆ

Updated on: Jan 14, 2023 | 11:37 AM

ಈ ಪ್ರಕರಣವು ದೆಹಲಿಯ ಬುರಾರಿ ಸಾವಿನ ಪ್ರಕರಣಕ್ಕೆ ಹೋಲುತ್ತದೆ. 2018ರಲ್ಲಿ ಒಂದೇ ಮನೆಯ 11 ಜನ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದರು.

Crime News: ದೆಹಲಿಯ ಬುರಾರಿ ರೀತಿಯಲ್ಲೇ ಪುಣೆಯಲ್ಲಿ ನಿಗೂಢ ಸಾವು; ಮನೆಯೊಳಗೆ ನಾಲ್ವರು ಶವವಾಗಿ ಪತ್ತೆ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ದೆಹಲಿಯ ಬುರಾರಿಯಲ್ಲಿ 2018ರಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆಯ (Mass Suicide) ಪ್ರಕರಣವು ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. ಇದೀಗ ಅದೇ ರೀತಿಯ ಮತ್ತೊಂದು ಘಟನೆ ಮಹಾರಾಷ್ಟ್ರದ (Maharashtra) ಪುಣೆಯಲ್ಲಿ ನಡೆದಿದೆ. ಒಂದೇ ಕುಟುಂಬದ ನಾಲ್ವರು ತಮ್ಮ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಶುಕ್ರವಾರ ಸಂಜೆ ಒಂದೇ ಕುಟುಂಬದ ನಾಲ್ವರು ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಧಿಕಾರಿಗಳು ನೀಡಿದ ಮಾಹಿತಿಯಂತೆ ಕುಟುಂಬ ವಾಸವಿದ್ದ ಬಾಡಿಗೆ ಮನೆಯಲ್ಲಿ 4 ಜನರ ಶವಗಳು ಪತ್ತೆಯಾಗಿವೆ.

ಆ ಮನೆಯ ದಂಪತಿ, ಅವರ 24 ವರ್ಷದ ಮಗ ಮತ್ತು 17 ವರ್ಷದ ಮಗ ಸೇರಿದಂತೆ ಮೃತ ವ್ಯಕ್ತಿಗಳು ಪುಣೆ ನಗರದ ಮುಂಧ್ವಾ ಪ್ರದೇಶದ ಕೇಶವ್ ನಗರದಲ್ಲಿರುವ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಇದೊಂದು ಆತ್ಮಹತ್ಯೆ ಪ್ರಕರಣವಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಿಯಕರನ ಜೊತೆಗೂಡಿ ಪತಿಯ ಕೊಲೆ; ಆರು ತಿಂಗಳ ನಂತರ ತಾಯಿಯ ಕ್ರೂರತೆ ಬಗ್ಗೆ ಬಾಯಿಬಿಟ್ಟ ಮಕ್ಕಳು

ಈ ಬಗ್ಗೆ ಪೊಲೀಸರ ತನಿಖೆ ನಡೆಯುತ್ತಿದೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲವಾದರೂ, ಪುಣೆ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಇದೊಂದು ಸಾಮೂಹಿಕ ಆತ್ಮಹತ್ಯೆ ಪ್ರಕರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಇದು ಕೊಲೆ ಇರಬಹುದಾ ಎಂದು ಕೂಡ ತನಿಖೆ ನಡೆಸಲಾಗುತ್ತಿದೆ.

ಈ ಪ್ರಕರಣವು ಉತ್ತರ ದೆಹಲಿಯ ಬುರಾರಿ ಸಾವಿನ ಪ್ರಕರಣಕ್ಕೆ ಹೋಲುತ್ತದೆ. 2018ರಲ್ಲಿ ಒಂದೇ ಮನೆಯ 11 ಜನ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದರು. 11 ಜನರಲ್ಲಿ 10 ಜನರು ತಮ್ಮ ಮನೆಯ ಸೀಲಿಂಗ್‌ಗೆ ನೇಣು ಹಾಕಿಕೊಂಡಿದ್ದರು. 77 ವರ್ಷದ ಮಹಿಳೆಯ ಶವ ನೆಲದ ಮೇಲೆ ಬಿದ್ದಿತ್ತು. ಇದು ಸಾಮೂಹಿಕ ಆತ್ಮಹತ್ಯೆ ಪ್ರಕರಣವೆಂದು ಬಯಲಾಗಿತ್ತು.

ಇದನ್ನೂ ಓದಿ: Murder: ದೆಹಲಿಯಲ್ಲಿ ಮತ್ತೊಂದು ಬರ್ಬರ ಹತ್ಯೆ; ಮಹಿಳೆಯನ್ನು ಕೊಂದು, ಹೂತಿಟ್ಟ ಹಂತಕರು

ಮೃತರಲ್ಲಿ 7 ಮಂದಿ ಮಹಿಳೆಯರಾಗಿದ್ದರೆ, ಇಬ್ಬರು ಮಕ್ಕಳಿದ್ದರು. ಶವಗಳು ಕಣ್ಣಗೆ ಬಟ್ಟೆ ಕಟ್ಟಿದ, ಬಾಯಿಕೆ ಪಟ್ಟಿ ಹಾಕಿದ ಸ್ಥಿತಿಯಲ್ಲಿದ್ದರೆ, ಮಕ್ಕಳಿಬ್ಬರ ಶವಗಳ ಕೈಕಾಲುಗಳನ್ನು ಕಟ್ಟಿಹಾಕಲಾಗಿತ್ತು. ಇದರ ಹಿಂದೆ ಮಾಟ-ಮಂತ್ರದ ಶಂಕೆಯೂ ವ್ಯಕ್ತವಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ