UK: ಅರ್ಧ ಬಾಟಲಿ ವಿಸ್ಕಿ ಹೊಟ್ಟೆಗಿಳಿಸಿದ ಮಗ ಮಾಡಿದ ಘನಂದಾರಿ ಕೆಲಸವೆಂದರೆ ಜನ್ಮ ನೀಡಿದ ತಂದೆಯ ತಲೆಗೆ ಬಾಟಲಿಯಿಂದ ಹೊಡೆದು ಸಾಯಿಸಿದ್ದು!
ಅವನ ತಂಗಿ ಒಬ್ಬ ಯಶಸ್ವೀ ವಕೀಲೆಯಾಗಿ ವೃತ್ತಿಬದುಕು ರೂಪಿಸಿಕೊಂಡು ಮದುವೆ ಮಾಡಿಕೊಂಡರೆ ದೀಕನ್ ಮಾತ್ರ ಗರ್ಲ್ ಫ್ರೆಂಡ್ ಗಳನ್ನೂ ಮಾಡಿಕೊಳ್ಳದೆ ಫ್ಯಾಮಿಲಿ ಬಿಸಿನೆಸ್ ನಲ್ಲಿ ತಂದೆ ಜೊತೆ ಕೈ ಜೋಡಿಸಿದ್ದ. ಲಾಕ್ ಡೌನ್ ಸಂದರ್ಭದಲ್ಲಿ ಅವನು ಮದ್ಯದ ದಾಸನಾದ ಎಂದು ಕೋರ್ಟ್ ಗೆ ತಿಳಿಸಲಾಗಿದೆ.
ಸುಮಾರು ಒಂದೂವರೆ ವರ್ಷದ ಹಿಂದೆ, ಕಂಠಮಟ್ಟ ಕುಡಿದಿದ್ದ ಭಾರತೀಯ ಮೂಲದ ಕುಟುಂಬಕ್ಕೆ ಸೇರಿದ ವ್ಯಕ್ತಿಯೊಬ್ಬ ಮದ್ಯದ ಬಾಟಲಿಯಿಂದಲೇ ತನ್ನ ತಂದೆಯ ತಲೆಗೆ ಹೊಡೆದು ಕೊಂದಿರುವ ದಾರುಣ ಘಟನೆ ಲಂಡನ್ ನಗರದ ಉತ್ತರಭಾಗಕ್ಕಿರುವ (North London) ಸೌತ್ ಗೇಟ್ ಪ್ರದೇಶದ ಮನೆಯೊಂದರಲ್ಲಿ ನಡೆದಿದ್ದು ವಿಚಾರಣೆ ಕೋರ್ಟ್ ಒಂದರಲ್ಲಿ ನಡೆಯುತ್ತಿದೆ. ದೀಕನ್ ಸಿಂಗ್ ವಿಗ್ (Deekan Singh Vig) ಹೆಸರಿನ ಆರೋಪಿಯು ಅರ್ಧ ಬಾಟಲಿಯಷ್ಟು ವಿಸ್ಕಿಯನ್ನು ಹೊಟ್ಟೆಗಿಳಿಸಿದ ನಂತರ ತನ್ನ ತಂದೆ ಅರ್ಜನ್ ಸಿಂಗ್ ವಿಗ್ (Arjan Singh Vig) ಮೇಲೆ ಆಕ್ರಮಣ ನಡೆಸಿದ್ದಾನೆ. ಪೊಲೀಸರು ವಿಗ್ ಗಳ ಮನೆ ತಲುಪಿದಾಗ 86-ವರ್ಷ ವಯಸ್ಸಿನ ಅರ್ಜನ್ ಸಿಂಗ್ ದೇಹ ರಕ್ತದ ಮಡುವಿನಲ್ಲಿತ್ತು ಮತ್ತು ಅವರ ಮಗ ಬೆತ್ತಲೆಯಾಗಿ ಅದರ ಮುಂದೆ ಕುಳಿತಿದ್ದ. ಅವನ ಸುತ್ತ ಸುಮಾರು 100 ಶಾಂಪೇನ್ ಬಾಟಲಿಗಳು ಬಿದ್ದಿದ್ದವು. ಅವುಗಳಲ್ಲಿ ಒಂದು ಬಾಟಲಿಗೆ ರಕ್ತ ಮೆತ್ತಿಕೊಂಡಿತ್ತು ಎಂದು ಪೊಲೀಸರು ಕೋರ್ಟ್ ಗೆ ತಿಳಿಸಿದ್ದಾರೆ.
ನಾನೇ ಕೊಂದುಬಿಟ್ಟೆ
ಪೊಲೀಸರ ಮುಂದೆ 54-ವರ್ಷ-ವಯಸ್ಸಿನ ದೀಕನ್ ಸಿಂಗ್, ‘ನಮ್ಮಪ್ಪ ಸತ್ತಿದ್ದಾನೆ, ಅವನನ್ನು ನಾನೇ ಕೊಂದೆ, ವಿಸ್ಕಿಯ ಬಾಟಲಿಯಿಂದ ಅವನ ತಲೆಗೆ ಜೋರಾಗಿ ಹೊಡೆದೆ, ಅವನು ಹೃದಯಾಘಾತಕ್ಕೊಳಗಾಗಿ ಸಾಯುವವನಿದ್ದ, ಹಾಗಾಗೇ ನಾನೇ ಕೊಂದುಬಿಟ್ಟೆ. ನನಗೆ ಫ್ರೆಂಚ್ ವಿಸ್ಕಿಯೆಂದರೆ ಆಗದು, ಐ ಹೇಟ್ ಇಟ್,’ ಅಂತ ಪೊಲೀಸರ ಮುಂದೆ ಬಡಬಡಿಸಿದ್ದಾನಂತೆ. ದೀಕನ್ ತನ್ನಪ್ಪನ ಮೇಲೆ ಹಲ್ಲೆ ನಡೆಸಿದ್ದು ಒಪ್ಪಿಕೊಂಡಿರುವನಾದರೂ ಕೊಲೆ ಮಾಡಿದ ಅರೋಪವನ್ನು ನಿರಾಕರಿಸಿದ್ದಾನೆ.
ಇದನ್ನೂಓದಿ: Child Malnutrition: ವಿಶ್ವದ 15 ದೇಶಗಳಲ್ಲಿ 30 ಮಿಲಿಯನ್‌ಗಿಂತಲೂ ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು
ಪ್ರಾಸಿಕ್ಯೂಟರ್ ಡಿಯನ್ನಾ ಹೀರ್ ಕೆಸಿ ಅವರು, ಅರ್ಜನ್ ಅವರ ಮುಖ ಮತ್ತು ತಲೆಯ ಮೇಲೆ ವಿಸ್ಕಿಯ ಬಾಟಲಿಯಿಂದ ಎಡೆಬಿಡದೆ ಹೊಡೆಯಲಾಗಿದೆ. ಅವರಿಗಾದ ಗಾಯಗಳು ಎಷ್ಟು ಗಂಭೀರವಾಗಿದ್ದವೆಂದರೆ, ಕೂಡಲೇ ಕುಸಿದುಬಿದ್ದು ಸಾವನ್ನಪ್ಪಿದ್ದರು ಎಂದು ಕೋರ್ಟ್ ಗೆ ತಿಳಿಸಿದರು. ಆರೋಪಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಮತ್ತು ಅವನು ತಂದೆಯ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆಯನ್ನು ಸಮರ್ಥಿಸಿಕೊಳ್ಳುವ ಘಟನೆಯೇನೂ ನಡೆದಿರಲಿಲ್ಲವೆಂದು ಅವರು ಹೇಳಿದ್ದಾರೆ. ಆದರೆ ಅವರ ಪ್ರಾಣ ತೆಗೆಯುವ ಉದ್ದೇಶವೇನೂ ದೀಕನ್ ಗೆ ಇರಲಿಲ್ಲವೆಂತಲೂ ಅವರು ಕೋರ್ಟ್ ನಲ್ಲಿ ಹೇಳಿದ್ದಾರೆ.
ಕುಟುಂಬ ಮೊದಲು ಉಗಾಂಡದಲ್ಲಿತ್ತು
ದೀಕನ್; ತನ್ನ ತಂದೆ, 85-ವರ್ಷ-ವಯಸ್ಸಿನ ತಾಯಿ ದಮನ್ಜಿತ್ ವಿಗ್ ರೊಂದಿಗೆ 4 ಬೆಡ್ ರೂಮುಗಳ ಮನೆಯಲ್ಲಿ ಕಳೆದ 40-ವರ್ಷಗಳಿಂದ ವಾಸವಾಗಿದ್ದ. ಅದೇ ಮನೆಯಲ್ಲಿ ಅವನ ಸಹೋದರಿ ರಿಪ್ಪನ್ ವಿಗ್ ತನ್ನ ಸಂಗಾತಿಯೊಂದಿಗೆ ವಾಸವಾಗಿದ್ದಾಳೆ. ವಿಗ್ ಕುಟುಂಬ ಮೊದಲು ಉಗಾಂಡದಲ್ಲಿ ವಾಸವಾಗಿತ್ತು. ಅದರೆ ದೀಕನ್ 5 ವರ್ಷದವನಾಗಿದ್ದಾಗ ಉಗಾಂಡಾದ ಸರ್ವಾಧಿಕಾರಿ ಏಷ್ಯನ್ ಸಮುದಾಯಗಳ ಜನರನ್ನು ದೇಶದಿಂದ ಹೊರದಬ್ಬಲಾರಂಭಿಸಿದ್ದರಿಂದ ಅವರು ಯುಕೆಗೆ ಬಂದು ನೆಲೆಸಿದ್ದರು. ಅರ್ಜನ್ ಸಿಂಗ್ ವೃತ್ತಿಯಲ್ಲಿ ಒಬ್ಬ ಅಕೌಂಟಂಟ್ ಆಗಿದ್ದರು ಮತ್ತು ಪ್ರಾಣಿಶಾಸ್ತ್ರಜ್ಞೆ ಅಗಿರುವ ಅವರ ಪತ್ನಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
ಅವನ ತಂಗಿ ಒಬ್ಬ ಯಶಸ್ವೀ ವಕೀಲೆಯಾಗಿ ವೃತ್ತಿಬದುಕು ರೂಪಿಸಿಕೊಂಡು ಮದುವೆ ಮಾಡಿಕೊಂಡರೆ ದೀಕನ್ ಮಾತ್ರ ಗರ್ಲ್ ಫ್ರೆಂಡ್ ಗಳನ್ನೂ ಮಾಡಿಕೊಳ್ಳದೆ ಫ್ಯಾಮಿಲಿ ಬಿಸಿನೆಸ್ ನಲ್ಲಿ ತಂದೆ ಜೊತೆ ಕೈ ಜೋಡಿಸಿದ್ದ. ಲಾಕ್ ಡೌನ್ ಸಂದರ್ಭದಲ್ಲಿ ಅವನು ಮದ್ಯದ ದಾಸನಾದ ಎಂದು ಕೋರ್ಟ್ ಗೆ ತಿಳಿಸಲಾಗಿದೆ.
ವಾಂತಿ ಮಾಡಿಕೊಳ್ಳುವ ಸದ್ದು
ಅಕ್ಟೋಬರ್ 30, 2021 ರಂದು ಕೊಲೆ ನಡೆದ ದಿನ ದೀಕನ್ ನ ಅಪ್ಪ ಮತ್ತು ಅಮ್ಮ ಹೊರಗಡೆಯಿಂದ ಬಂದು ಟಿವಿ ಮುಂದೆ ಕುಳಿತಿದ್ದರು. ದೀಕನ್ ತಾಯಿಗೆ ಮಗನ ರೂಮಿನಿಂದ ವಾಂತಿ ಮಾಡಿಕೊಳ್ಳುವ ಸದ್ದ್ದು ಕೇಳಿಸಿದ್ದರಿಂದ ಅಲ್ಲಿಗೆ ಧಾವಿಸಿದ್ದಾರೆ. ತಾನು ಅರ್ಧ ಬಾಟಲ್ ವಿಸ್ಕಿ ಕುಡಿದಿರುವುದಾಗಿ ಅವನು ತಾಯಿಗೆ ಹೇಳಿದನಂತೆ, ಎಂದು ಕೋರ್ಟ್ ಗೆ ತಿಳಿಸಲಾಗಿದೆ. ಆಕೆ ಕಂಡ ಕೊನೆಯ ದೃಶ್ಯವೆಂದರೆ ತನ್ನ ಪತಿ ಅರ್ಜನ್ ಮಗನ ಮೇಲೆ ರೇಗಾಡಲಾರಂಭಿಸಿದ್ದು.
ದಮನ್ಜಿತ್ ಕೂಡಲೇ ತಮ್ಮ ಮಗಳನ್ನು ಕರೆದು ದೀಕನ್ ಕಂಠಮಟ್ಟ ಕುಡಿದಿದ್ದಾನೆ, ಅವನು ನಿಯಂತ್ರಣಲ್ಲಿಲ್ಲ ಅಂತ ಹೇಳಿದಾಗ, ಮಗಳು 999 ಗೆ ಕಾಲ್ ಮಾಡಿದ್ದಾರೆ ಎಂದು ಪ್ರಾಸಿಕ್ಯೂಟರ್ ಕೋರ್ಟ್ ಗೆ ತಿಳಿಸಿದ್ದಾರೆ.
ನಮ್ಮಪ್ಪ ಸತ್ತು ಗಂಟೆ ಮೇಲಾಯ್ತು!
ಪೊಲೀಸ್ ಅಧಿಕಾರಿಯೊಬ್ಬರು ಆರೋಪಿಯಿದ್ದ ರೂಮಿನ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ, ಅದು ಓಪನ್ ಆಗದೇ ಹೋದಾಗ ಕಿಟಕಿಯಿಂದ ರೂಮಿನೊಳಗೆ ದೃಷ್ಟಿ ಹಾಯಿಸಿದ್ದಾರೆ. ಅಗಲೇ ಅವರಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅರ್ಜನ್ ಅವರ ದೇಹ ಕಾಣಿಸಿದೆ, ಎಂದು ಕೋರ್ಟ್ ಗೆ ತಿಳಿಸಲಾಗಿದೆ.
ಅರೋಪಿಯು ತಾನು ಬಾಗಿಲು ತೆರೆಯುವುದಿಲ್ಲ ಅಂತ ಹೇಳಿ, ‘ನೀವು ಬರೋದು ಬಹಳ ತಡವಾಗಿದೆ, ನಮ್ಮಪ್ಪ ಸತ್ತು ಒಂದು ಗಂಟೆ ಮೇಲಾಯ್ತು,’ ಅಂದಿದ್ದಾನೆ.
ದೀಕನ್ ಬೆತ್ತಲೆ ಸ್ಥಿತಿಯಲ್ಲಿದ್ದ
ಪೊಲೀಸರು ಶಕ್ತಿ ಪ್ರಯೋಗಿಸಿ ಬಾಗಿಲು ತೆರೆದಾದ ದೀಕನ್ ಬೆತ್ತಲೆ ಸ್ಥಿತಿಯಲ್ಲಿದ್ದ ಮತ್ತು ಅವನ ಕೈ ಮತ್ತು ಪಾದಗಳು ರಕ್ತಸಿಕ್ತವಾಗಿದ್ದವು. ಅವನನ್ನು ವಶಕ್ಕೆ ಪಡೆದು ಕೈಕೋಳ ತೊಡಿಸುವಾಗ ಪೊಲೀಸ್ ಅಧಿಕಾರಿಗಳನ್ನು ನಿಂದಿಸಲಾರಂಭಿಸಿದ್ದ, ಎಂದ ಕೋರ್ಟ್ ಗೆ ಹೇಳಲಾಗಿದೆ. ಕೊಲೆ ನಡೆದ ಸ್ಥಳದಲ್ಲಿ ಪೊಲೀಸರಿಗೆ 100 ಶಾಂಪೇನ್ ಮತ್ತು 10 ವಿಸ್ಕಿ ಬಾಟಲಿ ಸಿಕ್ಕಿವೆ. ಅವನ ಬೆಡ್ ಮೇಲೆ ಒಂದು ಖಾಲಿ ಸ್ಕಾಚ್ ವಿಸ್ಕಿ ಬಾಟಲಿ ಕೂಡ ಸಿಕ್ಕಿದೆ.
ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ ಅರ್ಜನ್ ಅವರ ತಲೆಗೆ ತುಂಬಿದ ಶಾಂಪೇನ್ ಬಾಟಲಿಯಿಂದ ಪದೇಪದೆ ಹೊಡೆಯಲಾಗಿದೆ, ಎಂದು ಪ್ರಾಸಿಕ್ಯೂಟರ್ ಹೀರ್ ಹೇಳಿದ್ದಾರೆ.
ಪ್ರಕರಣದ ವಿಚಾರಣೆ ಜಾರಿಯಲ್ಲಿದೆ.
ಮತ್ತಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ