Child Malnutrition: ವಿಶ್ವದ 15 ದೇಶಗಳಲ್ಲಿ 30 ಮಿಲಿಯನ್‌ಗಿಂತಲೂ ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು

ಸಂಘರ್ಷ, ಹವಾಮಾನ ವೈಪರಿತ್ಯ, ಕೋವಿಡ್‌ನಿಂದಾದ ಪರಿಣಾಮಗಳು ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಗಳು ಮಕ್ಕಳ ತೀವ್ರವಾದ ಅಪೌಷ್ಠಿಕತೆಗೆ ಕಾರಣವಾಗುತ್ತಿದೆ ಎಂದು ವಿಶ್ವಸಂಸ್ಥೆಯು ಎಚ್ಚರಿಸಿದೆ.

Child Malnutrition: ವಿಶ್ವದ 15 ದೇಶಗಳಲ್ಲಿ 30 ಮಿಲಿಯನ್‌ಗಿಂತಲೂ ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿರುವ  ಮಕ್ಕಳು
ಸಾಂದರ್ಭಿಕ ಚಿತ್ರImage Credit source: thehealthsite
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Jan 13, 2023 | 6:41 PM

ಹವಾಮಾನ ವೈಪರಿತ್ಯ, ಕೋವಿಡ್‌ನಿಂದಾದ ಪರಿಣಾಮಗಳು ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಗಳು ಮಕ್ಕಳ ತೀವ್ರವಾದ ಅಪೌಷ್ಠಿಕತೆಗೆ ಕಾರಣವಾಗುತ್ತಿದೆ ಎಂದು ವಿಶ್ವಸಂಸ್ಥೆಯು ಎಚ್ಚರಿಸಿದೆ. ತೀವ್ರ ಅಪೌಷ್ಠಿಕತೆಯು ಆಹಾರ ಮತ್ತು ಪೌಷ್ಠಿಕಾಂಶದ ಬಿಕ್ಕಟ್ಟಿನಿಂದ 15 ದೇಶಗಳಲ್ಲಿ 30 ದಶಲಕ್ಷಕ್ಕೂ ಹೆಚ್ಚು ಮಕ್ಕಳ ಜೀವಕ್ಕೆ ಅಪಾಯವನ್ನು ಉಂಟುಮಾಡುತ್ತಿದೆ. ಅವರನ್ನು ರಕ್ಷಿಸಲು ತುರ್ತು ಕ್ರಮ ಕೈಗೊಳ್ಳವೆಕು ಎಂದು ವಿಶ್ವಸಂಸ್ಥೆಯು ಎಚ್ಚರಿಸಿದೆ. ಈ ಪೈಕಿ 8 ಮಿಲಿಯನ್ ಮಕ್ಕಳು ತೀವ್ರವಾಗಿ ಬಳಲುತ್ತಿದ್ದಾರೆ. ಇದು ಅಪೌಷ್ಠಿಕತೆಯ ಮಾರಕ ರೂಪವಾಗಿದೆ ಎಂದು ಬಹಿರಂಗಪಡಿಸಿದೆ.

ಕ್ಷಯ ಅಥವಾ ತೀವ್ರವಾದ ಅಪೌಷ್ಟಿಕತೆಯು ಮಕ್ಕಳ ಜೀವನಕ್ಕೆ ಮತ್ತು ಅವರ ದೀರ್ಘಕಾಲಿನ ಆರೋಗ್ಯ ಮತ್ತು ಅಭಿವೃದ್ಧಿಗೆ ಮಾರಕವಾಗಿದೆ. ಇದರ ಪರಿಣಾಮವನ್ನು ವ್ಯಕ್ತಿಗಳು, ಅವರ ಸಮುದಾಯಗಳು ಮತ್ತು ಅವರ ದೇಶಗಳು ಅನುಭವಿಸುತ್ತಿದೆ ಎಂದು ಏಜೆನ್ಸಿಗಳು ಪ್ರಕಟಣೆಯಲ್ಲಿ ತಿಳಿಸಿವೆ. ಮಕ್ಕಳ ಕ್ರಿಯಾ ಯೋಜನೆಯನ್ನು ವೇಗಗೊಳಿಸುವ ಮೂಲಕ ವಿಶ್ವಸಂಸ್ಥೆಯ ಏಜೆನ್ಸಿಗಳಾದ ಆಹಾರ ಮತ್ತು ಕೃಷಿ ಸಂಸ್ಥೆ , ಯು.ಎನ್ ನಿರಾಶ್ರಿತರ ಸಂಸ್ಥೆ, ವಿಶ್ವಸಂಸ್ಥೆಯ ಮಕ್ಕಳ ನಿಧಿ, ವಿಶ್ವ ಆಹಾರ ಕಾರ್ಯಕ್ರಮ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಈ ಬಿಕ್ಕಟ್ಟಿಗೆ ಪ್ರತಿಕ್ರಿಯಿಸುತ್ತಿವೆ. ಜಾಗತಿಕವಾಗಿ ವ್ಯರ್ಥವಾಗುವುದನ್ನು ತಡೆಗಟ್ಟುವ, ಪತ್ತೆ ಮಾಡುವ ಮತ್ತು ಚಿಕಿತ್ಸೆ ನೀಡುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಚೀನಾದಲ್ಲಿ ಮುಂದಿನ 2-3 ತಿಂಗಳಲ್ಲಿ ಕೊರೊನಾ ಸೋಂಕು ಉತ್ತುಂಗಕ್ಕೆ: ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು

ಅಫ್ಘಾನಿಸ್ಥಾನ, ಬುರ್ಕಿನಾ ಫಾಸೋ, ಚಾಡ್, ಡೆಮೊಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಇಥಿಯೋಪಿಯಾ, ಹೈಟಿ, ಕೀನ್ಯಾ, ಮಡಗಾಸ್ಕರ್, ಮಾಲಿ, ನೈಜರ್, ನೈಜೀರಿಯಾ, ಸೊಮಾಲಿಯಾ, ದಕ್ಷಿಣ ಸುಡಾನ್ ಮತ್ತು ಯೆಮೆನ್ ದೇಶಗಳಂತಹ ಹೆಚ್ಚು ಪೀಡಿತ ದೇಶಗಳ ಮೇಲೆ ಕೇಂದ್ರಿಕರಿಸುತ್ತಿದ್ದಾರೆ.

ಜಾಗತಿಕ ಕ್ರಿಯಾ ಯೋಜನೆಯು ಆಹಾರ, ಆರೋಗ್ಯ, ನೀರು, ನೈರ್ಮಲ್ಯ ಮತ್ತು ಸಾಮಾಜಿಕ ಸಂರಕ್ಷಣಾ ವ್ಯವಸ್ಥೆಗಳ ಮೂಲಕ ತಾಯಿ ಮತ್ತು ಮಗುವಿನ ಪೋಷಣೆಯ ಆಧ್ಯತೆಯ ಕ್ರಮವನ್ನು ಎತ್ತಿ ತೋರಿಸುತ್ತದೆ. ವಿಶ್ವಸಂಸ್ಥೆ ಏಜೆನ್ಸಿಗಳು ಐದು ಆದ್ಯತೆಯ ಕ್ರಮಗಳನ್ನು ಗುರುತಿಸಿವೆ, ಅದು ಸಂಘರ್ಷ ಮತ್ತು ನೈಸರ್ಗಿಕ ವಿಕೋಪಗಳಿಂದ ಪ್ರಭಾವಿತವಾಗಿರುವ ದೇಶಗಳಲ್ಲಿ ಮತ್ತು ಮಾನವೀಯ ತುರ್ತುಪರಿಸ್ಥಿತಿಗಳಲ್ಲಿ ತೀವ್ರವಾದ ಅಪೌಷ್ಟಿಕತೆಯನ್ನು ಪರಿಹರಿಸುವಲ್ಲಿ ಪರಿಣಾಮಕಾರಿಯಾಗಿದೆ. 2023 ರಲ್ಲಿ ಈ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಮಹಾನಿರ್ದೇಶಕ ಕ್ಯು ಡಾಂಗ್ಯು ಕಳವಳ ವ್ಯಕ್ತಪಡಿಸಿದ್ದಾರೆ. ತೀವ್ರ ಅಪೌಷ್ಟಿಕತೆಯನ್ನು ನಿಭಾಯಿಸಲು ಚಿಕ್ಕ ಮಕ್ಕಳು, ಹುಡುಗಿಯುರು, ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರಿಗೆ ಆರೋಗ್ಯಕರ ಆಹಾರದ ಲಭ್ಯತೆ, ಕೈಗೆಟಕುವಿಕೆಯ ಅಗತ್ಯದ ಬಗ್ಗೆ ಅವರು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: ಒಣ ಕೆಮ್ಮಿನಿಂದ ಬಳಲುತ್ತಿದ್ದೀರಾ? ಈ ಎರಡು ಪದಾರ್ಥಗಳಿಂದ ಕೆಮ್ಮು ಶಮನ ಮಾಡಬಹುದು

ಈ ಸಮಸ್ಯೆಗೆ ನಾವು ಒಟ್ಟಿಗೆ ಕಾರ್ಯನಿರ್ವಹಿಸಬೇಕು ಎಂದು ವಿಶ್ವ ಆಹಾರ ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಬೀಸ್ಲಿ ತಿಳಿಸಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಡಾ. ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಮಕ್ಕಳ ಜೀವನ ಮತ್ತು ಆರೋಗ್ಯವನ್ನು ರಕ್ಷಿಸಲು ಕಷ್ಟಕರವಾಗುವ ದೇಶಗಳಲ್ಲಿ ಬೆಂಬಲದ ಅಗತ್ಯವಿದೆ ಎಂದು ಹೇಳಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 6:41 pm, Fri, 13 January 23