AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ 40 ದಿನ ನಿರ್ಣಾಯಕ, ಜನವರಿ ಮಧ್ಯಭಾಗದಲ್ಲಿ ಕೋವಿಡ್​​​​ ಪ್ರಕರಣ ಏರಿಕೆಯಾಗುವ ಸಾಧ್ಯತೆ: ತಜ್ಞರು

ಈ ಹಿಂದೆ, ಕೋವಿಡ್ -19 ರ ಹೊಸ ಅಲೆಯು ಪೂರ್ವ ಏಷ್ಯಾಕ್ಕೆ ಅಪ್ಪಳಿಸಿದ 30-35 ದಿನಗಳ ನಂತರ ಭಾರತವನ್ನು ಅಪ್ಪಳಿಸುತ್ತದೆ ಎಂದು ಗಮನಿಸಲಾಗಿದೆ. ಇದು ಒಂದು ಪ್ರವೃತ್ತಿಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ಸೋಂಕಿನ ತೀವ್ರತೆ ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಮುಂದಿನ 40 ದಿನ ನಿರ್ಣಾಯಕ, ಜನವರಿ ಮಧ್ಯಭಾಗದಲ್ಲಿ ಕೋವಿಡ್​​​​ ಪ್ರಕರಣ ಏರಿಕೆಯಾಗುವ ಸಾಧ್ಯತೆ: ತಜ್ಞರು
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Dec 28, 2022 | 5:58 PM

Share

ದೇಶದಲ್ಲಿ ಕೋವಿಡ್​​ನ BF.7 ತಳಿ ಆತಂಕ ಹುಟ್ಟಿಸಿದೆ. ಅದೇ ವೇಳೆ ಬೇರೆ ಯಾವುದೇ ಕೊರೊನಾವೈರಸ್ (Coronavirus) ಅಲೆ ಇರುವುದಿಲ್ಲ ಎಂದು ತಜ್ಞರು ಸೂಚಿಸಿದ್ದರೂ, ಹೆಚ್ಚುತ್ತಿರುವ ಪ್ರಕರಣಗಳ ಭಯ ಇದ್ದೇ ಇದೆ. ಮುಂದಿನ 40 ದಿನಗಳು ನಿರ್ಣಾಯಕವಾಗಲಿವೆ.  ಏಕೆಂದರೆ ಭಾರತವು ಜನವರಿ ಮಧ್ಯದಲ್ಲಿ ಕೋವಿಡ್-19 (Covid 19) ಪ್ರಕರಣಗಳ ಉಲ್ಬಣವನ್ನು ಹಿಂದಿನ ಪ್ರವೃತ್ತಿಗಳ ಮೂಲಕ ನೋಡಬಹುದು ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಕಳೆದ ಕೆಲವು ದಿನಗಳಲ್ಲಿ ಭಾರತವು ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ. ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ (Dr Mansukh Mandaviya) ಅವರು ಕೋವಿಡ್-19 ಪರಿಸ್ಥಿತಿ ಮತ್ತು ಸನ್ನದ್ಧತೆಯ ಕುರಿತು ರಾಜ್ಯ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿದರು. ಏತನ್ಮಧ್ಯೆ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ‘ಟೆಸ್ಟ್-ಟ್ರ್ಯಾಕ್-ಟ್ರೀಟ್ & ವ್ಯಾಕ್ಸಿನೇಷನ್’ ಮೇಲೆ ಕೇಂದ್ರೀಕರಿಸಲು ನಿರ್ದೇಶಿಸಲಾಗಿದೆ.

ಈ ಹಿಂದೆ, ಕೋವಿಡ್ -19 ರ ಹೊಸ ಅಲೆಯು ಪೂರ್ವ ಏಷ್ಯಾಕ್ಕೆ ಅಪ್ಪಳಿಸಿದ 30-35 ದಿನಗಳ ನಂತರ ಭಾರತವನ್ನು ಅಪ್ಪಳಿಸುತ್ತದೆ ಎಂದು ಗಮನಿಸಲಾಗಿದೆ. ಇದು ಒಂದು ಪ್ರವೃತ್ತಿಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ಸೋಂಕಿನ ತೀವ್ರತೆ ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ. ಅಲೆ ಬಂದರೂ  ಸಾವು ಮತ್ತು ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ತೀರಾ ಕಡಿಮೆ ಇರುತ್ತದೆ ಎಂದರು. ಚೀನಾ, ಜಪಾನ್, ದಕ್ಷಿಣ ಕೊರಿಯಾ, ಫ್ರಾನ್ಸ್, ಬ್ರೆಜಿಲ್.ಇ ಮುಂತಾದ ದೇಶಗಳಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾದ ನಂತರ ಈ ಸಲಹೆ ಬಂದಿದೆ.

ದೇಶದಲ್ಲಿ ಕೋವಿಡ್ ಪ್ರಕರಣ; ಇತ್ತೀಚಿನ ಬೆಳವಣಿಗೆಗಳು

  1. ವರದಿಯ ಪ್ರಕಾರ ದೇಶದ ರಾಜಧಾನಿಯಲ್ಲಿ 60 ವರ್ಷಕ್ಕಿಂತೆ ಹೆಚ್ಚಿನ ವಯಸ್ಸಿನವರಿಗೆ ಲಭ್ಯವಿರುವ ಉಚಿತ-ವೆಚ್ಚದ ಕೋವಿಡ್ ಬೂಸ್ಟರ್ ಲಸಿಕೆಗಳು ಮುಗಿದವೆ. ಏತನ್ಮಧ್ಯೆ, ರೂ 386.25 ಬೆಲೆಯ ಖಾಸಗಿ ಸೌಲಭ್ಯಗಳಲ್ಲಿ ಎಲ್ಲರಿಗೂ ಪಾವತಿಸಿದ ಲಸಿಕೆಗಳು ಮುಂದಿನ ಕೆಲವು ದಿನಗಳಲ್ಲಿ ಲಭ್ಯವಿರುತ್ತವೆ. ಇವುಗಳು ಹೆಚ್ಚೇನೂ ಇಲ್ಲ.
  2. ಕಳೆದ ವಾರ ಪ್ರತಿರಕ್ಷಣೆ ಕಾರ್ಯಕ್ರಮದ ಭಾಗವಾಗಿ ಅನುಮೋದಿಸಲಾದ ಭಾರತ್ ಬಯೋಟೆಕ್‌ನ ಇಂಟ್ರಾನಾಸಲ್ ಲಸಿಕೆ ಕುರಿತು ಮಾತನಾಡುತ್ತಾ, ಖಾಸಗಿ ಆಸ್ಪತ್ರೆಗಳಿಗೆ ಸರಕು ಮತ್ತು ಸೇವಾ ತೆರಿಗೆಯನ್ನು ಹೊರತುಪಡಿಸಿ iNCOVACC ನ ಒಂದು ಡೋಸ್ ಪ್ರತಿ 800 ರೂ ಆಗಿದ್ದು, ಇದಕ್ಕಾಗಿ ಸ್ಲಾಟ್‌ಗಳನ್ನು ಈಗ CoWin ಪೋರ್ಟಲ್‌ನಲ್ಲಿ ಬುಕ್ ಮಾಡಬಹುದು.
  3. ಜನವರಿ ನಾಲ್ಕನೇ ವಾರದಿಂದ ಮೂಗಿನ ಲಸಿಕೆ ಸಾರ್ವಜನಿಕರಿಗೆ ನೀಡಿಕೆಗೆ ಸಿದ್ಧವಾಗಲಿದೆ.
  4. ಕಳೆದ ಮೂರು ದಿನಗಳಲ್ಲಿ ಮುಂಬೈನಲ್ಲಿ ಶೇ 32% ರಷ್ಟು ಪ್ರಕರಣಗಳು ಹೆಚ್ಚಿದ್ದು. BMC ಹೈ ಅಲರ್ಟ್ ಆಗಿದೆ.
  5. ತಮಿಳುನಾಡಿನಲ್ಲಿ ಇಂದು 4 ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್-19 ವೈರಸ್ ಸೋಂಕಿದೆ. ದುಬೈನಿಂದ ಬಂದ 2 ಮಂದಿಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಪಾಸಿಟಿವ್ ಬಂದಿದ್ದು, ತಾಯಿ-ಮಗಳು ಇಬ್ಬರು ಚೀನಾದಿಂದ ಶ್ರೀಲಂಕಾ ಮೂಲಕ ಆಗಮಿಸಿದ್ದರು.
  6. ರಾಜ್ಯದಲ್ಲಿ ಕೋವಿಡ್-19 ಪರಿಸ್ಥಿತಿ ಕುರಿತು ಇಂದು ಸಭೆ ನಡೆಸುತ್ತೇನೆ. ಪರಿಸ್ಥಿತಿ ಸಾಮಾನ್ಯವಾಗಿದೆ. ಒಂದು ನಿರ್ದಿಷ್ಟ ಲಸಿಕೆ ಕೊರತೆ ಇದೆ. ನಾನು ನೀತಿ ಆಯೋಗದೊಂದಿಗೂ ಮಾತನಾಡಿದ್ದೇನೆ ಎಂದು ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.
  7. ಈ ವಾರದ ಆರಂಭದಲ್ಲಿ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾದ ಮ್ಯಾನ್ಮಾರ್‌ನ ಹನ್ನೊಂದು ಪ್ರವಾಸಿಗರು ಇಲ್ಲಿನ ಐಜಿಐ ವಿಮಾನ ನಿಲ್ದಾಣದಲ್ಲಿ ಕೋವಿಡ್ ಪಾಸಿಟಿವ್ ಅನ್ನು ಪರೀಕ್ಷಿಸಿದ ನಂತರ ನೆಗೆಟಿವ್ ಎಂದು ತಿಳಿದುಬಂದಿದೆ. ಅವರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. “ಮೇನ್ಮಾರ್‌ನ 11 ಪ್ರವಾಸಿಗರ ಗುಂಪನ್ನು ಭಾನುವಾರ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಕರೆತರಲಾಯಿತು. ಅವರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿತ್ತು. ಈಗ ಅವರೆಲ್ಲರನ್ನೂ ನೆಗೆಟಿವ್ ಪರೀಕ್ಷೆ ಮಾಡಿ ಬಿಡುಗಡೆ ಮಾಡಲಾಗುತ್ತಿದೆ” ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:53 pm, Wed, 28 December 22