AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾವಿನಹಣ್ಣು ಖರೀದಿಗೆ ವ್ಯಾಪಾರಿಗಳ ಹಿಂದೇಟು: ಹವಾಮಾನ ವೈಪರಿತ್ಯದೊಂದಿಗೆ ಬೆಳೆಗಾರರಿಗೆ ಮತ್ತೊಂದು ಸಂಕಷ್ಟ

ಅಕಾಲಿಕ ಮಳೆಯಿಂದಾಗಿ ಬೆಳೆಹಾನಿಯ ಸಮಸ್ಯೆಯು ಬೆಳೆಗಾರರನ್ನು ಮತ್ತು ವ್ಯಾಪಾರಿಗಳನ್ನು ಬಾಧಿಸುತ್ತಿದೆ.

ಮಾವಿನಹಣ್ಣು ಖರೀದಿಗೆ ವ್ಯಾಪಾರಿಗಳ ಹಿಂದೇಟು: ಹವಾಮಾನ ವೈಪರಿತ್ಯದೊಂದಿಗೆ ಬೆಳೆಗಾರರಿಗೆ ಮತ್ತೊಂದು ಸಂಕಷ್ಟ
ತುಮಕೂರಿನ ಮಾವಿನ ಮಂಡಿ
TV9 Web
| Edited By: |

Updated on:Jun 08, 2022 | 8:21 PM

Share

ತುಮಕೂರು: ಮಾವಿನಹಣ್ಣು ಖರೀದಿಗೆ ವ್ಯಾಪಾರಿಗಳು (Mango Vendors) ಹಿಂದೇಟು ಹಾಕುತ್ತಿರುವುದು ಬೆಳೆಗಾರರ ಸಂಕಷ್ಟ ಹೆಚ್ಚಾಗುವಂತೆ ಮಾಡಿದೆ. ಬೆಳಗಾರರಿಂದ ಮಾವಿನಹಣ್ಣು ಖರೀದಿಸಿದರೂ, ಅದರ ಮಾರಾಟಕ್ಕೆ ತೊಂದರೆಯಾಗಬಹುದು ಎಂದು ವ್ಯಾಪಾರಿಗಳು ಹಿಂಜರಿಯುತ್ತಿದ್ದಾರೆ. ಧಾರ್ಮಿಕ ಕಾರಣಗಳ ಗೊಂದಲ ಒಂದೆಡೆಯಿದ್ದರೆ, ಅಕಾಲಿಕ ಮಳೆಯಿಂದಾಗಿ (Weather Problem) ಬೆಳೆಹಾನಿಯ (Crop Loss) ಸಮಸ್ಯೆಯು ಬೆಳೆಗಾರರನ್ನು ಬಾಧಿಸುತ್ತಿದೆ. ಹೀಗಾಗಿಯೇ ತುಮಕೂರು ಜಿಲ್ಲೆಯಲ್ಲಿ ಮಾವು ಬೆಳೆಗಾರರ‌ ಸಮಸ್ಯೆ ಹೆಚ್ಚಾಗಿದೆ.

ತುಮಕೂರಿನ ಗುಬ್ಬಿ, ತಿಪಟೂರು, ತುರುವೇಕೆರೆ, ಕುಣಿಗಲ್, ಕೊರಟಗೆರೆ, ಶಿರಾ, ಮಧುಗಿರಿ ಭಾಗದಲ್ಲಿ ಮಾವಿನ ತೋಪುಗಳು ಹೆಚ್ಚಾಗಿವೆ. ತುಮಕೂರು ಜಿಲ್ಲೆಯಲ್ಲಿ ಈ ಬಾರಿ ಒಟ್ಟು 16,987 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ಬೆಳೆ ಇದೆ. ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಆಲಿಕಲ್ಲು ಮಳೆಯಿಂದಾಗಿ ಮಾವಿನ ಬಣ್ಣ ಕಪ್ಪಾಗಿದೆ. ಈ ಬಾರಿ ಶೇ 40ರಷ್ಟು ಫಸಲು ಮಾರುಕಟ್ಟೆ ಬಂದಿಲ್ಲ. ಆಲಿಕಲ್ಲು ಮಳೆಯಿಂದಾಗಿ ತೋಪುಗಳಲ್ಲೇ ನಾಶವಾಗಿದೆ.

ಇದರ ಜೊತೆಗೆ ಹಾಗೂ ಹೀಗೂ ಮಾರುಕಟ್ಟೆಗೆ ತಂದ ಬೆಳೆಗೂ ಉತ್ತಮ ಬೆಲೆ ಸಿಗುತ್ತಿಲ್ಲ. ಪ್ರತಿಬಾರಿಯೂ ತುಮಕೂರಿನ ಮಾವಿನಹಣ್ಣಿಗೆ ಹೊರರಾಜ್ಯಗಳಿಂದ ಉತ್ತಮ ಬೇಡಿಕೆ ಇರುತ್ತಿತ್ತು. ಆದರೆ ಈ ಬಾರಿ ಹೊರರಾಜ್ಯಗಳ ವ್ಯಾಪಾರಿಗಳು ಮಾವು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಪ್ರತಿಬಾರಿಯೂ ಕೋಟ್ಯಂತರ ರೂಪಾಯಿ ಹಣ ಸುರಿದು ಮಾವು ಖರೀದಿಸುತ್ತಿದ್ದವರು ಈ ಬಾರಿ ಏಕೆ ಹಿಂಜರಿಯುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ರೈತರು ಅಲವತ್ತುಕೊಳ್ಳುತ್ತಾರೆ. ಈ ಬಾರಿ ತುಮಕೂರಿನ ಮಾವಿನ ಮಂಡಿಗಳು ವ್ಯಾಪಾರ ಇಲ್ಲದೇ ಖಾಲಿ ಖಾಲಿ ಕಾಣಿಸುತ್ತಿವೆ.

‘ಮಾವು ವ್ಯಾಪಾರ ಈ ವರ್ಷ ಕಡಿಮೆಯಾಗಿದೆ. ಕಾರ್ಖಾನೆಗಳಿಗೆ ಕಳಿಸ್ತಾ ಇದ್ದೇವೆ. ಆದರೆ ಉತ್ತಮ ಬೆಲೆ ಸಿಗುತ್ತಿಲ್ಲ. ಬೆಳೆದವರು, ಮಂಡಿಯವರು ಮತ್ತು ಚಿಲ್ಲರೆ ಮಾರಾಟಗಾರರಿಗೆ ನಷ್ಟವಾಗಿದೆ. ಬೆಳೆಹಾನಿಯಿಂದಾಗಿ ಹಲವು ರೈತರು ಮತ್ತೊಂದು ವರ್ಷದ ಗುತ್ತಿಗೆ ಬಿಟ್ಟುಕೊಡಲು ಮುಂದಾಗಿದ್ದಾರೆ. ಆದರೆ ಮುಂಗಡ ಪಾವತಿಸಿದ್ದ ಗುತ್ತಿಗೆದಾರರಿಗೆ ದೊಡ್ಡಮಟ್ಟದ ನಷ್ಟವಾಗಿದೆ’ ಎಂದು ಮಾವು ವ್ಯಾಪಾರಿ ಶೌಕತ್ ಆಲಿ ಹೇಳಿದರು.

‘ಮಾವು ವ್ಯಾಪಾರವನ್ನು ಸಾಬರಷ್ಟೇ ಮಾಡುತ್ತಾರೆ ಎಂದು ಹೇಳಲು ಆಗುವುದಿಲ್ಲ. ಬೆಳೆಗಾರರು, ಗುತ್ತಿಗೆದಾರರು, ಚಿಲ್ಲರೆ ವ್ಯಾಪಾರಿಗಳು ಮತ್ತು ತಿನ್ನುವವರು ಎರಡೂ ಧರ್ಮಕ್ಕೆ ಸೇರಿದವರಿದ್ದಾರೆ. ಧಾರ್ಮಿಕ ವಿವಾದಗಳ ಕಾರಣಗಳಿಗಿಂತಲೂ ಪ್ರಕೃತಿ ವಿಕೋಪದಿಂದ ನಷ್ಟವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು. ಮತ್ತೋರ್ವ ವ್ಯಾಪಾರಿ ಝಬಿವುಲ್ಲಾ ಮಾತನಾಡಿ, ಮಳೆಯಿಂದ ರೈತರಿಗೆ ತುಂಬಾ ಹೊಡೆತ ಬಿದ್ದಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:18 pm, Wed, 8 June 22

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ