ಸ್ಯಾಂಟ್ರೋ ರವಿ ಎಂಬ ಕ್ರಿಮಿಯ ಹಿಡಿಯಲು ಹುಟ್ಟುಹಬ್ಬ ಮರೆತು, ಕಾರ್ಯಾಚರಣೆಗೆ ಇಳಿದಿದ್ದರು ರಾಯಚೂರು ಎಸ್ಪಿ ನಿಖಿಲ್!
ಸ್ಯಾಂಟ್ರೋ ರವಿ ಆಪ್ತ ಲಕ್ಷ್ಮೀಶ್ ಅಲಿಯಾಸ್ ಚೇತನ್ ಮಂತ್ರಾಲಯಕ್ಕೆ ಬರುತ್ತಿದ್ದಾನೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮಫ್ತಿಯಲ್ಲೇ ಎಸ್ಪಿ ನಿಖೀಲ್ ಫೀಲ್ಡ್ಗೆ ಇಳಿದಿದ್ದಾರೆ. ತಮ್ಮ ಬರ್ತ್ ಡೇ ಪಾರ್ಟಿ ಕ್ಯಾನ್ಸಲ್ ಮಾಡಿ, ಪೊಲೀಸ್ ಆಪರೇಷನ್ನಡೆಸಿದ್ದಾರೆ.

ರಾಯಚೂರು: ಕಳೆದ ಹತ್ತು ಹನ್ನೊಂದು ದಿನದಿಂದ ರಾಜ್ಯದಲ್ಲಿ ಬಾರಿ ಸದ್ದು ಮಾಡಿದ್ದ ಸ್ಯಾಂಟ್ರೋ ರವಿಯನ್ನು ಪೊಲೀಸರು ಯಶಸ್ವಿಯಾಗಿ ಕಾರ್ಯಚರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ. ಹೈಟೆಕ್ ವೇಶ್ಯಾವಾಟಿಕೆ, ಪ್ರಭಾವಿಗಳಿಗೆ, ಉದ್ಯಮಿಗಳಿಗೆ ರಾಜಕೀಯ ನಾಯಕರಿಗೆ ಹುಡುಗೀರ ಸರಬರಾಜು, ಟ್ರಾನ್ಸ್ಫರ್ ದಂಧೆ. ಯುವತಿಯರಿಗೆ ಕಾರುಗಳ ಹೆಸರನ್ನಿಟ್ಟು ದೊಡ್ಡ ದೊಡ್ಡವರಿಗೆ ಸರ್ವೀಸ್, ಕಾಸ್ಟಲಿ ವಾಚ್ಗಳ ಹೆಸರಿಟ್ಟು, ಸ್ಯಾಂಡಲ್ವುಡ್ ನಟಿಯರ, ಮಾಡೆಲ್ಗಳನ್ನ ಟೈಂ ಟು ಟೈಂ ಸಪ್ಲೈ. ಪ್ರಭಾವಿಗಳು ಸಿಡಿ ಇಟ್ಕೊಂಡು ಬ್ಲ್ಯಾಕ್ ಮೇಲ್. ಕೊನೆಗೆ, ಕಟ್ಕೊಂಡ ಹೆಂಡ್ತೀನ ವ್ಯಭೀಚಾರಕ್ಕೆ ತಳ್ಳಲು ಯತ್ನ. ಹೀಗೆ ಸಾಲು ಸಾಲು ಆರೋಪಗಳ ಸುಳಿಯಲ್ಲಿರುವ ಸ್ಯಾಂಟ್ರೋ ರವಿಯನ್ನು ಅರೆಸ್ಟ್ ಮಾಡಲು ಸಹಾಯ ಮಾಡಿದ ರಾಯಚೂರು ಎಸ್ಪಿ ನಿಖೀಲ್ ತಮ್ಮ ಹುಟ್ಟಹಬ್ಬದ ಪಾರ್ಟಿಯನ್ನು ಕ್ಯಾನ್ಸಲ್ ಮಾಡಿ ತಕ್ಷಣವೇ ಕ್ರಿಮಿಯ ಹಿಡಿಯಲು ಮುಂದಾಗಿದ್ರು.
ಜನವರಿ 12ರಂದು ರಾಯಚೂರು ಎಸ್ಪಿ ನಿಖೀಲ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಪೊಲೀಸ್ ಅಧಿಕಾರಿಗಳು ಜಿಲ್ಲೆಯಲ್ಲಿ ಪಾರ್ಟಿ ಅರೆಂಜ್ ಮಾಡಿದ್ದರು. ಎಲ್ಲರೂ ಪಾರ್ಟಿಯಲ್ಲಿ ಭಾಗಿಯಾಗಿ ಸಂಭ್ರಮಿಸುವ ತಯಾರಿ ನಡೆದಿತ್ತು. ಆದ್ರೆ ಯಾವಾಗ ಸ್ಯಾಂಟ್ರೋ ರವಿ ಆಪ್ತ ಲಕ್ಷ್ಮೀಶ್ ಅಲಿಯಾಸ್ ಚೇತನ್ ಮಂತ್ರಾಲಯಕ್ಕೆ ಬರುತ್ತಿದ್ದಾನೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮಫ್ತಿಯಲ್ಲೇ ಎಸ್ಪಿ ನಿಖೀಲ್ ಫೀಲ್ಡ್ಗೆ ಇಳಿದಿದ್ದಾರೆ. ತಮ್ಮ ಬರ್ತ್ ಡೇ ಪಾರ್ಟಿ ಕ್ಯಾನ್ಸಲ್ ಮಾಡಿ, ಪೊಲೀಸ್ ಆಪರೇಷನ್ ನಡೆಸಿದ್ದಾರೆ.
ಸ್ಯಾಂಟ್ರೋ ರವಿ ಆಪ್ತ ಲಕ್ಷ್ಮೀಶ್ ರಾಯಚೂರಿಗೆ ಬರುವ ಮಾಹಿತಿ ತಿಳಿಯುತ್ತಿದ್ದಂತೆ ಖುದ್ದು ಎಸ್ಪಿ ನಿಖೀಲ್ ಅವರು 30 ಜನರ ತಂಡವನ್ನು ರಚಿಸಿ ಬಲೆ ಬೀಸಿದ್ದಾರೆ. ಮಂತ್ರಾಲಯಕ್ಕೆ ಕುಟುಂಬ ಸಮೇತ ಬಂದಿದ್ದ ಲಕ್ಷ್ಮೀಶ್ ಮೊದಲು ಸದ್ಗುರು ರಾಘವೇಂದ್ರ ಲಾಡ್ಜ್ನಲ್ಲಿ 2 ರೂಂ ಬುಕ್ ಮಾಡಿ ಫ್ರೆಶ್ ಆಗಿದ್ದಾನೆ. ಇದನ್ನು ವಾಚ್ ಮಾಡುತ್ತಿದ್ದ ಪೊಲೀಸರು. ಮೂರು ತಂಡಗಳಾಗಿ ಗ್ರಾಹಕ, ಭಕ್ತ, ಸ್ಥಳೀಯರಂತೆ ಲಾಡ್ಜ್, ದೇವಸ್ಥಾನವನ್ನು ಸುತ್ತುವರೆದಿದ್ದಾರೆ. ಬಳಿಕ ಲಕ್ಷ್ಮೀಶ್ನ ಪ್ರತಿ ಹೆಜ್ಜೆ ಮೇಲೂ ನಿಗಾ ಇಟ್ಟಿದ್ದಾರೆ. ಪೊಲೀಸರ ಕಾರ್ಯಾಚರಣೆ ಲಾಡ್ಜ್ನ ಸಿಸಿ ಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.
ಹತ್ತು ಸಿಬ್ಬಂದಿ ಲಾಡ್ಜ್ ಹೊರಗಡೆ, ಐವರು ಒಳಗಡೆ ಹೋಗಿ ಲಕ್ಷ್ಮೀಶ್ನ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಎಸ್ಪಿ ನಿಖಿಲ್ ಅವರು ಲಾಡ್ಜ್ನ ಪ್ರವೇಶ ದ್ವಾರದಿಂದಲೇ ಎಲ್ಲವನ್ನೂ ಮಾನಿಟರ್ ಮಾಡಿದ್ದಾರೆ. ಈ ರೀತಿ ಕಾರ್ಯಾಚರಣೆ ನಡೆಸಿ ಕೊನೆಗೆ ಮಂತ್ರಾಲಯದಲ್ಲಿ ರಾಯರ ದರ್ಶನದ ಬಳಿಕ ಲಕ್ಷ್ಮೀಶ್ ಅಲಿಯಾಸ್ ಚೇತನ್ನನ್ನು ಬಂಧಿಸಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:04 pm, Sat, 14 January 23