Shraddha Walkar Murder: ಶ್ರದ್ಧಾ ವಾಕರ್ ಶವವನ್ನು ಅಫ್ತಾಬ್ ಗರಗಸದಿಂದ ಕತ್ತರಿಸಿದ್ದ; ಮೂಳೆಯ ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗ
Delhi Murder Case: ಕಳೆದ ತಿಂಗಳು ಕೊಲೆಗಾರ ಅಫ್ತಾಬ್ ಪೂನಾವಾಲಾ ಪೊಲೀಸರನ್ನು ಮೆಹ್ರೌಲಿಯ ಅರಣ್ಯ ಪ್ರದೇಶದಲ್ಲಿ ಮತ್ತು ಗುರುಗ್ರಾಮಕ್ಕೆ ಕರೆದೊಯ್ದು ತಾನು ಶ್ರದ್ಧಾಳ ಶವದ ತುಂಡುಗಳನ್ನು ಬಿಸಾಡಿದ್ದ ಜಾಗವನ್ನು ತೋರಿಸಿದ್ದ.
ನವದೆಹಲಿ: ದೆಹಲಿಯಲ್ಲಿ ಕಳೆದ ವರ್ಷ ತನ್ನ ಲಿವ್ ಇನ್ ಪಾರ್ಟನರ್ ಅಫ್ತಾಬ್ ಪೂನಾವಾಲಾ (Aaftab Poonawala) ಎಂಬಾತನಿಂದ ಹತ್ಯೆಗೀಡಾದ ಶ್ರದ್ಧಾ ವಾಕರ್ (Shraddha Walkar) ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಶ್ರದ್ಧಾಳ ಶವವನ್ನು 35 ತುಂಡುಗಳಾಗಿ ಮಾಡಿ, ಪ್ರತಿದಿನ ರಾತ್ರಿ ಬೇರೆ ಬೇರೆ ಸ್ಥಳಗಳಲ್ಲಿ ಬಿಸಾಡಿದ್ದ ಅಫ್ತಾಬ್ ಆಕೆ ಶವವನ್ನು ಗರಗಸದಿಂದ ತುಂಡರಿಸಿದ್ದ ಎಂದು ಆಕೆಯ ಮೂಳೆಗಳ ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ.
ಕಳೆದ ತಿಂಗಳು ಕೊಲೆಗಾರ ಅಫ್ತಾಬ್ ಪೂನಾವಾಲಾ ಪೊಲೀಸರನ್ನು ಮೆಹ್ರೌಲಿಯ ಅರಣ್ಯ ಪ್ರದೇಶದಲ್ಲಿ ಮತ್ತು ಗುರುಗ್ರಾಮಕ್ಕೆ ಕರೆದೊಯ್ದು ತಾನು ಶ್ರದ್ಧಾಳ ಶವದ ತುಂಡುಗಳನ್ನು ಬಿಸಾಡಿದ್ದ ಜಾಗವನ್ನು ತೋರಿಸಿದ್ದ. ಅಲ್ಲಿ ಸಿಕ್ಕ ಮೂಳೆಗಳು ಶ್ರದ್ಧಾಳದ್ದು ಎಂದು ಡಿಎನ್‌ಎ ಪರೀಕ್ಷೆ ದೃಢಪಡಿಸಿತ್ತು.
ಇದನ್ನೂ ಓದಿ: Delhi News: ಯುವತಿಯನ್ನು ಕಾರಿನಡಿ ಎಳೆದೊಯ್ದ ಪ್ರಕರಣ; ದೆಹಲಿಯ 11 ಪೊಲೀಸರ ಅಮಾನತು
ಅಫ್ತಾಬ್ ಮತ್ತು ಶ್ರದ್ಧಾ ಒಟ್ಟಾಗಿ ವಾಸವಾಗಿದ್ದ ಫ್ಲಾಟ್‌ನಲ್ಲಿ ಕಂಡುಬಂದ ರಕ್ತದ ಗುರುತುಗಳು ಆಕೆಯ ಬ್ಲಡ್ ಗ್ರೂಪ್ನೊಂದಿಗೆ ಹೊಂದಿಕೆಯಾಗಿತ್ತು. ಆಕೆಯ ತಂದೆಯ ಡಿಎನ್ಎ ಮಾದರಿಗಳನ್ನು ಬಳಸಿಕೊಂಡು ಪರೀಕ್ಷೆಯನ್ನು ನಡೆಸಲಾಗಿತ್ತು. ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS)ನಲ್ಲಿ ಮೂಳೆಗಳ ಶವಪರೀಕ್ಷೆ ನಡೆಸಲಾಯಿತು.
ಅಫ್ತಾಬ್ ಪೂನಾವಾಲಾ ಶ್ರದ್ಧಾ ವಾಕರ್‌ಳನ್ನು ಮೇ 18ರಂದು ಮೆಹ್ರೌಲಿಯಲ್ಲಿರುವ ತಮ್ಮ ಬಾಡಿಗೆ ಫ್ಲಾಟ್‌ನಲ್ಲಿ ಕೊಲೆ ಮಾಡಿದ್ದ. ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ನಂತರ ಬೇರೆ ಬೇರೆ ಕಡೆ ಎಸೆದಿದ್ದ. ಆಕೆಯ ಮೃತದೇಹವನ್ನು ಕತ್ತರಿಸಲು ಬಳಸಲಾಗಿದೆ ಎನ್ನಲಾದ ಗರಗಸ ಮತ್ತು ಬ್ಲೇಡ್ ಅನ್ನು ಗುರುಗ್ರಾಮದ ಒಂದು ಕಡೆ ಪೊದೆಗಳಲ್ಲಿ ಎಸೆಯಲಾಗಿತ್ತು. ಅಕ್ಟೋಬರ್‌ನಲ್ಲಿ ಆಕೆಯ ತಂದೆ ಮಹಾರಾಷ್ಟ್ರದ ತಮ್ಮ ಊರಿನ ಪೊಲೀಸರಿಗೆ ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ ನಂತರ ಈ ಕೊಲೆಯ ವಿಷಯ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: Shraddha Murder Case: ಅರಣ್ಯದಲ್ಲಿ ಪತ್ತೆಯಾದ ಅಸ್ಥಿ ಶ್ರದ್ಧಾಳದ್ದೇ : ಡಿಎನ್‌ಎ ವರದಿ
ಶ್ರದ್ಧಾಳ ಕೊಲೆ ಆರೋಪದಲ್ಲಿ 28ರ ಹರೆಯದ ಯುವಕ ಅಫ್ತಾಬ್ ಕಳೆದ ವರ್ಷ ನವೆಂಬರ್‌ನಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ. ದೆಹಲಿ ಪೊಲೀಸರು ಈ ತಿಂಗಳ ಕೊನೆಯಲ್ಲಿ ಪ್ರಕರಣದ ಆರೋಪಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ. ಅಫ್ತಾಬ್ ತನ್ನ ಲಿವ್ ಇನ್ ಪಾರ್ಟನರ್ ಶ್ರದ್ಧಾ ವಾಕರ್‌ಳನ್ನು ಜಗಳದ ಕೋಪದ ಆವೇಶದಲ್ಲಿ ಕೊಂದಿರುವುದಾಗಿ ಈ ಹಿಂದೆ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದ.