Shraddha Murder Case: ಶ್ರದ್ಧಾಳ ದೇಹದ ಭಾಗಗಳು ಫ್ರಿಜ್​ನಲ್ಲಿರುವಾಗಲೇ ಅದೇ ಮನೆಯಲ್ಲಿ ವೈದ್ಯೆ ಜತೆ ಅಫ್ತಾಬ್​ನ ಪ್ರೇಮದಾಟ

ಪ್ರೇಯಸಿ ಶ್ರದ್ಧಾ ವಾಕರ್​ ಅನ್ನು ಹತ್ಯೆ ಮಾಡಿ, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಜ್​ನಲ್ಲಿಟ್ಟು, ಅಫ್ತಾಬ್ ವೈದ್ಯೆ ಜತೆ ಅದೇ ಮನೆಯಲ್ಲಿ ಡೇಟಿಂಗ್ ಮಾಡುತ್ತಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

Shraddha Murder Case: ಶ್ರದ್ಧಾಳ ದೇಹದ ಭಾಗಗಳು ಫ್ರಿಜ್​ನಲ್ಲಿರುವಾಗಲೇ ಅದೇ ಮನೆಯಲ್ಲಿ ವೈದ್ಯೆ ಜತೆ ಅಫ್ತಾಬ್​ನ ಪ್ರೇಮದಾಟ
Aftab
Follow us
TV9 Web
| Updated By: ನಯನಾ ರಾಜೀವ್

Updated on:Nov 27, 2022 | 9:41 AM

ಪ್ರೇಯಸಿ ಶ್ರದ್ಧಾ ವಾಕರ್​ (Shraddha Walker) ಅನ್ನು ಹತ್ಯೆ ಮಾಡಿ, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಜ್​ನಲ್ಲಿಟ್ಟು, ಅಫ್ತಾಬ್ ವೈದ್ಯೆ ಜತೆ ಅದೇ ಮನೆಯಲ್ಲಿ ಡೇಟಿಂಗ್ ಮಾಡುತ್ತಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಈ ಹಿಂದೆ ಈ ವಿಚಾರ ತಿಳಿದಿತ್ತಾದರೂ ಆತ ಡೇಟಿಂಗ್ ಮಾಡುತ್ತಿದ್ದ ಯುವತಿ ವೃತ್ತಿಯಲ್ಲಿ ವೈದ್ಯೆ ಎಂದು ತಿಳಿದಿರಲಿಲ್ಲ.

ಶ್ರದ್ಧಾಳನ್ನು ಕೊಂದ ಬಳಿಕ ಅಫ್ತಾಬ್ ತನ್ನ ಫ್ಲಾಟ್‌ಗೆ ಕರೆತಂದ ಯುವತಿ ವೃತ್ತಿಯಲ್ಲಿ ವೈದ್ಯೆ, ಪೊಲೀಸರು ಆಕೆಯನ್ನು ಪತ್ತೆ ಮಾಡಿದ್ದಾರೆ. ಇಲ್ಲಿ ನೋಡಬೇಕಾದ ದೊಡ್ಡ ವಿಷಯವೆಂದರೆ ಶ್ರದ್ಧಾ ದೇಹದ ಭಾಗಗಳು ಫ್ರಿಜ್‌ನಲ್ಲಿ ಇರುವಾಗಲೇ ಹುಡುಗಿಯನ್ನು ಆತ ಫ್ಲಾಟ್‌ಗೆ ಕರೆತಂದಿದ್ದ. ಅಫ್ತಾಬ್​ಗೆ ತಾನು ಕೊಲೆ ಮಾಡಿರುವ ಕುರಿತು ಯಾವುದೇ ತಪ್ಪಿತಸ್ಥ ಭಾವನೆಯೂ ಇರಲಿಲ್ಲ ಎಂಬುದು ತೋರುತ್ತದೆ.

ಅಫ್ತಾಬ್ ಪೂನವಾಲಾ ಅವರ ಪಾಲಿಗ್ರಾಫ್ ಪರೀಕ್ಷೆ ನಡೆದಿದ್ದು, ಇದೀಗ ನಾರ್ಕೋ ಪರೀಕ್ಷೆ ಕೂಡ ನಡೆಯಲಿದೆ. ಪೂನಾವಾಲಾ ಮೊಬೈಲ್ ಡೇಟಿಂಗ್ ಅಪ್ಲಿಕೇಷನ್ ಬಂಬಲ್ ಮೂಲಕ ಮಹಿಳೆಯನ್ನು ಭೇಟಿಯಾಗಿದ್ದ, ಅದೇ ಆನ್​ಲೈನ್ ಪ್ಲಾಟ್​ಫಾರ್ಮ್ ಮೂಲಕ ಈ ಮೊದಲು ಶ್ರದ್ಧಾಳನ್ನು ಕೂಡ ಭೇಟಿಯಾಗಿದ್ದ.

ಇದೀಗ ಅಫ್ತಾಬ್​ ಜತೆ ಇದ್ದ ಮಹಿಳೆಯು ಮನೋವೈದ್ಯೆ ಎಂಬುದು ತಿಳಿದುಬಂದಿದೆ.ಈ ಆ್ಯಪ್ ಮೂಲಕ ಅಫ್ತಾಬ್ ತುಂಬಾ ಮಹಿಳೆಯನ್ನು ಭೇಟಿಯಾಗಿದ್ದಾನೆ ಎಂಬುದು ತಿಳಿದುಬಂದಿದೆ. ಶನಿವಾರ ಅಫ್ತಾಬ್​ನನ್ನು ದೆಹಲಿ ನ್ಯಾಯಾಲಯವು 13 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ಕರೆತಂದಿದ್ದು, ಅಲ್ಲಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮತ್ತೊಂದೆಡೆ ನವೆಂಬರ್ 28 ಸೋಮವಾರ, ಆರೋಪಿಯ ನಾರ್ಕೋ ಪರೀಕ್ಷೆ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಫ್ತಾಬ್ ಪೂನಾವಾಲಾ ಶ್ರದ್ಧಾ ವಾಕರ್​ ಅನ್ನು ಹತ್ಯೆ ಮಾಡಿ 31 ತುಂಡುಗಳಾಗಿ ಕತ್ತರಿಸಿ, ನಗರದ ವಿವಿಧೆಡೆ ಎಸೆದಿದ್ದ.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:39 am, Sun, 27 November 22

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ