Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಹೆಂಡತಿಯನ್ನು ಕೊಂದು ಡ್ರಮ್​ನಲ್ಲಿ 1 ವರ್ಷ ಶವ ಬಚ್ಚಿಟ್ಟ ಗಂಡ!; ಆಂಧ್ರದಲ್ಲೊಂದು ಭಯಾನಕ ಘಟನೆ

Murder Case: ಹಲವು ತಿಂಗಳುಗಳಿಂದ ತಮ್ಮ ಮನೆಯಲ್ಲಿ ಬಾಡಿಗೆಗಿದ್ದ ಬಾಡಿಗೆದಾರರು ಬಾಡಿಗೆಯನ್ನು ಪಾವತಿಸದ ಕಾರಣ ಮನೆಯ ಮಾಲೀಕರು ಮನೆಯ ಬಾಗಿಲು ಒಡೆದು ನೋಡಿದಾಗ ಡ್ರಮ್ ಒಳಗೆ ಮಹಿಳೆಯ ಮೃತದೇಹದ ಭಾಗಗಳು ಪತ್ತೆಯಾಗಿವೆ.

Crime News: ಹೆಂಡತಿಯನ್ನು ಕೊಂದು ಡ್ರಮ್​ನಲ್ಲಿ 1 ವರ್ಷ ಶವ ಬಚ್ಚಿಟ್ಟ ಗಂಡ!; ಆಂಧ್ರದಲ್ಲೊಂದು ಭಯಾನಕ ಘಟನೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Dec 05, 2022 | 1:58 PM

ಹೈದರಾಬಾದ್: ಕಳೆದ ತಿಂಗಳು ದೆಹಲಿಯಲ್ಲಿ ತನ್ನ ಪ್ರೇಯಸಿ ಶ್ರದ್ಧಾ ವಾಕರ್ (Shraddha Walkar) ಅವರನ್ನು ಕೊಂದು, ಆಕೆಯ ದೇಹವನ್ನು 35 ಭಾಗಗಳಾಗಿ ಕತ್ತರಿಸಿದ ಘಟನೆಗೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಆ ಕೊಲೆಯ ಆರೋಪದ ಮೇಲೆ ಅಫ್ತಾಬ್ ಅಮೀನ್ ಪೂನಾವಾಲಾನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ, ದೇಶಾದ್ಯಂತ ಹಲವಾರು ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ. ಇದೀಗ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂನಲ್ಲಿ ಬೀಗ ಹಾಕಿದ ಬಾಡಿಗೆ ಮನೆಯೊಳಗೆ ಇರಿಸಲಾಗಿದ್ದ ಡ್ರಮ್‌ನಲ್ಲಿ ಮಹಿಳೆಯ ಮೃತದೇಹದ ಭಾಗಗಳು ಪತ್ತೆಯಾಗಿವೆ. ಆ ಮೃತದೇಹ (Dead Body) 1 ವರ್ಷದಿಂದ ಅದೇ ಡ್ರಮ್​ನಲ್ಲಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.

ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಹಾಗೇ, ಹಲವು ತಿಂಗಳುಗಳಿಂದ ತಮ್ಮ ಮನೆಯಲ್ಲಿ ಬಾಡಿಗೆಗಿದ್ದ ಬಾಡಿಗೆದಾರರು ಬಾಡಿಗೆಯನ್ನು ಪಾವತಿಸದ ಕಾರಣ ಮನೆಯ ಮಾಲೀಕರು ಮನೆಯ ಬಾಗಿಲು ಒಡೆದು ನೋಡಿದಾಗ ಡ್ರಮ್ ಒಳಗೆ ಮಹಿಳೆಯ ಮೃತದೇಹದ ಭಾಗಗಳು ಪತ್ತೆಯಾಗಿವೆ.

ಇದನ್ನೂ ಓದಿ: Crime News: ಶ್ರದ್ಧಾಳಂತೆ ಮತ್ತೊಂದು ಬರ್ಬರ ಹತ್ಯೆ, ಮಗನ ಜತೆ ಸೇರಿ ಪತಿಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್​ನಲ್ಲಿಟ್ಟ ಪತ್ನಿ

ವಿಶಾಖಪಟ್ಟಣಂನ ಮಧುರವಾಡದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಬಾಡಿಗೆ ಕೊಡದ ಹಿನ್ನೆಲೆಯಲ್ಲಿ ಆ ಮನೆಯಲ್ಲಿದ್ದ ಸಾಮಾನುಗಳನ್ನು ಹೊರಗೆ ಹಾಕಲು ಮನೆಯ ಮಾಲೀಕರು ಬಲವಂತವಾಗಿ ಮನೆಯೊಳಗೆ ಪ್ರವೇಶಿಸಿದಾಗ ಶವವನ್ನು ಬಚ್ಚಿಟ್ಟಿರುವುದು ಗೊತ್ತಾಗಿದೆ. 2021ರ ಜೂನ್ ತಿಂಗಳಲ್ಲಿ ಬಾಡಿಗೆದಾರನು ತನ್ನ ಹೆಂಡತಿ ಗರ್ಭಿಣಿಯಾಗಿದ್ದಾಳೆ ಎಂದು ಹೇಳಿ ಊರಿಗೆ ಹೋಗಿದ್ದ. ತನ್ನ ವಸ್ತುಗಳನ್ನು ತೆಗೆದುಕೊಂಡಿದ್ದ ಆತ ಅದಾದ ಬಳಿಕ ಮನೆ ಬಾಡಿಗೆಯನ್ನು ಕಟ್ಟಿರಲಿಲ್ಲ.

ಅದಾದ ಬಳಿಕ ಒಂದೆರಡು ಬಾರಿ ಆ ಮನೆಗೆ ಆತ ಬಂದಿದ್ದರೂ ಬಾಡಿಗೆಯನ್ನು ಕೊಟ್ಟಿರಲಿಲ್ಲ. ಹೆಂಡತಿ- ಮಗುವನ್ನು ಕರೆದುಕೊಂಡು ಬೇಗ ಬರುತ್ತೇನೆ ಎಂದು ಆತ ಹೇಳಿ ಊರಿಗೆ ವಾಪಾಸ್ ಹೋಗಿದ್ದ. 1 ವರ್ಷಕ್ಕೂ ಹೆಚ್ಚು ಕಾಲ ಕಾದ ಬಳಿಕ ಮಾಲೀಕ ಇಂದು ಬಲವಂತವಾಗಿ ಆ ಮನೆಗೆ ನುಗ್ಗಿ ಬಾಡಿಗೆದಾರನ ಸಾಮಾನುಗಳನ್ನು ಹೊರಗೆ ಹಾಕಿದ್ದಾರೆ. ಆಗ ಮನೆಯೊಳಗೆ ಇದ್ದ ಡ್ರಮ್​ನಲ್ಲಿ ಮಹಿಳೆಯ ಕೊಳೆತ ದೇಹದ ಭಾಗಗಳು ಪತ್ತೆಯಾಗಿವೆ.

ಇದನ್ನೂ ಓದಿ: Shocking News: ಹಿಂದಿ ಸೀರಿಯಲ್​ ನೋಡಿ ಆತ್ಮಹತ್ಯೆಯ ನಾಟಕವಾಡಿದ ಯುವತಿ; ಆಮೇಲೆ ಬಯಲಾಯ್ತು ಕೊಲೆ ರಹಸ್ಯ!

ಸದ್ಯದ ಮಾಹಿತಿ ಪ್ರಕಾರ, 2021ರ ಜೂನ್​ನಲ್ಲೇ ಆತ ಮಹಿಳೆಯ ದೇಹವನ್ನು ತುಂಡು ಮಾಡಿ ಆ ಡ್ರಮ್​ನೊಳಗೆ ತುಂಬಿಸಿಟ್ಟಿದ್ದ. ಆದರೆ, ಆ ಶವ ಯಾರದ್ದು ಎಂಬುದು ಇನ್ನೂ ಪತ್ತೆಯಾಗಿಲ್ಲ. ಆ ಶವ ಆತನ ಹೆಂಡತಿಯದ್ದೇ ಇರಬಹುದು ಎಂದು ನಮಗೆ ಅನುಮಾನವಿದೆ ಎಂದು ಪೊಲೀಸರು ಹೇಳಿದ್ದಾರೆ. ಆತನ ಹೆಂಡತಿ ನಿಜವಾಗಿಯೂ ಗರ್ಭಿಣಿಯಾಗಿದ್ದಳೇ? ಆಕೆ ಈಗ ಎಲ್ಲಿದ್ದಾಳೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:47 pm, Mon, 5 December 22