Crime News: ಹೆಂಡತಿ ಮನೆಗೆ ವಾಪಾಸ್​ ಬಂದಾಗ ಬೆಡ್​ ರೂಂನಲ್ಲಿತ್ತು ಯುವತಿಯ ಅರೆ ನಗ್ನ ಶವ!

ದೆಹಲಿಯ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮನೆಯಿಂದ ಹೊರಗೆ ಹೋದ ನಂತರ ಯುವತಿಯನ್ನು ಮನೆಗೆ ಆಹ್ವಾನಿಸಿದ್ದ. ಆದರೆ, ಆತನ ಹೆಂಡತಿ ಮನೆಗೆ ವಾಪಾಸಾದಾಗ ಆ ಯುವತಿಯ ಶವ ಅರೆ ನಗ್ನ ಸ್ಥಿತಿಯಲ್ಲಿ ಬೆಡ್​ರೂಂನ ಹಾಸಿಗೆ ಮೇಲೆ ಬಿದ್ದಿತ್ತು.

Crime News: ಹೆಂಡತಿ ಮನೆಗೆ ವಾಪಾಸ್​ ಬಂದಾಗ ಬೆಡ್​ ರೂಂನಲ್ಲಿತ್ತು ಯುವತಿಯ ಅರೆ ನಗ್ನ ಶವ!
ಪ್ರಾತಿನಿಧಿಕ ಚಿತ್ರ
Updated By: ಸುಷ್ಮಾ ಚಕ್ರೆ

Updated on: Feb 19, 2022 | 1:21 PM

ನವದೆಹಲಿ: ದೆಹಲಿಯ ಬುರಾರಿ ಏರಿಯಾದಲ್ಲಿ ಯುವತಿಯೊಬ್ಬಳನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ಆಕೆಯ ಅರೆ ಬೆತ್ತಲೆ ಶವ ಪತ್ತೆಯಾಗಿದೆ. ಬುರಾರಿ ಪ್ರದೇಶದ ಕೌಶಿಕ್ ಎನ್‌ಕ್ಲೇವ್‌ನಲ್ಲಿ ಯುವತಿಯನ್ನು ಕೊಲೆ (Murder) ಮಾಡಿದ ಆರೋಪಿಯನ್ನು ಅಮನ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿಯ ಹೆಂಡತಿ ತನ್ನ ಸಂಬಂಧಿಕರನ್ನು ಭೇಟಿಯಾಗಲು ಮನೆಯಿಂದ ಹೊರಗೆ ಹೋಗಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡ ಆತ ತನ್ನ ಹೆಂಡತಿ ಮನೆಯಿಂದ ಹೊರಗೆ ಹೋದ ನಂತರ ಯುವತಿಯನ್ನು ಮನೆಗೆ ಆಹ್ವಾನಿಸಿದ್ದ. ಆದರೆ, ಆತನ ಹೆಂಡತಿ ಮನೆಗೆ ವಾಪಾಸಾದ ನಂತರ ಆ ಯುವತಿಯ ಶವ ಅರೆ ನಗ್ನ ಸ್ಥಿತಿಯಲ್ಲಿ ಬೆಡ್​ರೂಂನ ಹಾಸಿಗೆ ಮೇಲೆ ಬಿದ್ದಿರುವುದನ್ನು ಕಂಡು ಆಘಾತಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡ ಬುರಾರಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಅಮನ್ ತನ್ನ ಪತ್ನಿ ಪ್ರಿಯಾಂಕಾ ರಾವತ್ ಜೊತೆ ಕೌಶಿಕ್ ಎನ್‌ಕ್ಲೇವ್‌ನಲ್ಲಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದ. ಯುವತಿಯ ಶವ ಆತನ ಮನೆಯಲ್ಲಿ ಪತ್ತೆಯಾದ ಬೆನ್ನಲ್ಲೇ ಆತ ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಅಮನ್ ಅವರ ಪತ್ನಿ ಪ್ರಿಯಾಂಕಾ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು. ಅವರು ರಾತ್ರಿ 8 ಗಂಟೆಗೆ ಮನೆಗೆ ಹಿಂತಿರುಗಿದಾಗ ಹಾಸಿಗೆಯ ಮೇಲೆ ಅರೆಬೆತ್ತಲೆ ಸ್ಥಿತಿಯಲ್ಲಿ ಯುವತಿಯ ಶವವನ್ನು ಕಂಡು ಆತಂಕದಿಂದ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಅವರು ಸ್ಥಳಕ್ಕೆ ಆಗಮಿಸಿ, ತನಿಖೆ ಆರಂಭಿಸಿದರು. ಮೃತ ಯುವತಿ ನಾಥುಪುರ ಪ್ರದೇಶದ ನಿವಾಸಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕುರಿತು ಮೃತಳ ತಂದೆಗೆ ಮಾಹಿತಿ ನೀಡಲಾಗಿದೆ.

ಅಮನ್​ನನ್ನು ಬಂಧಿಸಲು ಮತ್ತು ಕೊಲೆಯ ಹಿಂದಿನ ನಿಖರವಾದ ಉದ್ದೇಶವನ್ನು ತಿಳಿಯಲು ಪೊಲೀಸರು ತನಿಖೆ ನಡೆಸಿದ್ದಾರೆ. ಮೃತ ಯುವತಿಯೊಂದಿಗೆ ಅಮನ್‌ಗೆ ಬಹಳ ಸಮಯದಿಂದ ಸಂಬಂಧವಿತ್ತು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಆದರೆ ಯಾವ ಸಂದರ್ಭದಲ್ಲಿ ಕೊಲೆ ನಡೆದಿದೆ ಮತ್ತು ಅದರ ಹಿಂದಿನ ಕಾರಣವೇನು ಎಂಬುದನ್ನು ತಿಳಿಯಲು ಪೊಲೀಸರು ಅಮನ್‌ಗಾಗಿ ಹುಡುಕುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: Crime News: ಕುಡಿದ ಅಮಲಿನಲ್ಲಿ ಯುವಕನ ತಲೆ ಕತ್ತರಿಸಿದ ಗುಂಪು; ಕಸದ ರಾಶಿಯಲ್ಲಿ ರುಂಡ ಪತ್ತೆ

Murder: ತನ್ನ ಉದ್ಯೋಗಿಯನ್ನು ಕೊಂದು, ಶವವನ್ನು ಬ್ಯಾಗ್​ನಲ್ಲಿ ತುಂಬಿ ಮೆಟ್ರೋ ಸ್ಟೇಷನ್​ನಲ್ಲಿ ಎಸೆದ ಉದ್ಯಮಿ!