Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಲಿವ್ ಇನ್ ಗೆಳತಿಯ ಕತ್ತು ಸೀಳಿ ಕೊಂದು, ಮಚ್ಚಿನಿಂದ ತುಂಡು ಮಾಡಿದ ಪ್ರಿಯಕರ; ದೆಹಲಿಯಲ್ಲಿ ಮತ್ತೊಂದು ಭೀಕರ ಹತ್ಯೆ

Delhi Murder: ರೇಖಾ ರಾಣಿಯ ಮುಖವನ್ನು ಕತ್ತರಿಸಿದ ಆಕೆಯ ಪ್ರಿಯಕರ ಮನ್​ಪ್ರೀತ್ ಸಿಂಗ್ ಆಕೆಯ ಕತ್ತು ಸೀಳಿ, ನಂತರ ಹತ್ತಾರು ಬಾರಿ ಇರಿದು ಕೊಂದಿದ್ದಾನೆ.

Crime News: ಲಿವ್ ಇನ್ ಗೆಳತಿಯ ಕತ್ತು ಸೀಳಿ ಕೊಂದು, ಮಚ್ಚಿನಿಂದ ತುಂಡು ಮಾಡಿದ ಪ್ರಿಯಕರ; ದೆಹಲಿಯಲ್ಲಿ ಮತ್ತೊಂದು ಭೀಕರ ಹತ್ಯೆ
ಸಾಂದರ್ಭಿಕ ಚಿತ್ರImage Credit source: India.com
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 03, 2022 | 11:04 AM

ನವದೆಹಲಿ: ದೆಹಲಿಯ ಶ್ರದ್ಧಾ ವಾಕರ್ (Shraddha Walkar) ಕೊಲೆ ಪ್ರಕರಣ ಬೆಳಕಿಗೆ ಬಂದ ಬಳಿಕ ಅದೇ ರೀತಿಯ ಇನ್ನಷ್ಟು ಹತ್ಯೆಗಳು ಬಯಲಾಗುತ್ತಿವೆ. ಇದೀಗ ದೆಹಲಿಯಲ್ಲಿ (Delhi) ಮತ್ತೆ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ ಮಹಿಳೆಯನ್ನು ಆಕೆಯ ಪ್ರಿಯಕರನೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ದೆಹಲಿಯ ತಿಲಕ್‌ ನಗರದಲ್ಲಿ 35 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಲಿವ್‌ ಇನ್‌ ಪಾರ್ಟ್‌ನರ್‌ ಚಾಕುವಿನಿಂದ ಇರಿದು ಕೊಂದಿದ್ದಷ್ಟೇ ಅಲ್ಲದೆ, ಆಕೆಯ ದೇಹವನ್ನು ಸಣ್ಣ ತುಂಡುಗಳಾಗಿ ಮಾಡಿ ಬಿಸಾಡಲು ಪ್ಲಾನ್ ಮಾಡಿದ್ದ.

ರೇಖಾ ರಾಣಿ ಎಂಬ ಮಹಿಳೆಯ ಮೃತದೇಹದಲ್ಲಿ ಇರಿತದ ಗಾಯಗಳಾಗಿದ್ದು, ಅವರು 16 ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದ ಗಣೇಶ್ ನಗರದ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ದೆಹಲಿಯಲ್ಲಿ ಶ್ರದ್ಧಾ ವಾಕರ್ ಎಂಬ ಯುವತಿಯನ್ನು ಆಕೆಯ ಗೆಳೆಯ ಅಫ್ತಾಬ್ ಪೂನಾವಾಲಾ ಕ್ರೂರವಾಗಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದ ಕೆಲವು ವಾರಗಳ ನಂತರ ಪಶ್ಚಿಮ ದೆಹಲಿಯಲ್ಲಿ ಅದೇ ರೀತಿಯ ಘಟನೆ ವರದಿಯಾಗಿದೆ.

ಇದನ್ನೂ ಓದಿ: Crime News: ಶ್ರದ್ಧಾಳಂತೆ ಮತ್ತೊಂದು ಬರ್ಬರ ಹತ್ಯೆ, ಮಗನ ಜತೆ ಸೇರಿ ಪತಿಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್​ನಲ್ಲಿಟ್ಟ ಪತ್ನಿ

ರೇಖಾ ರಾಣಿಯ ಮುಖವನ್ನು ಕತ್ತರಿಸಿದ ಆಕೆಯ ಪ್ರಿಯಕರ ಮನ್​ಪ್ರೀತ್ ಸಿಂಗ್ ಆಕೆಯ ಕತ್ತು ಸೀಳಿ, ನಂತರ ಹತ್ತಾರು ಬಾರಿ ಇರಿದು ಕೊಂದಿದ್ದಾನೆ. ಮನ್​ಪ್ರೀತ್ ಸಿಂಗ್ ಕೊಲೆ ನಡೆದ ಸ್ಥಳದಿಂದ ತಪ್ಪಿಸಿಕೊಳ್ಳುವ ಮೊದಲು ರೇಖಾಳನ್ನು ಕೊಂದು ಅವಳ 16 ವರ್ಷದ ಮಗಳಿಗೆ ನಿದ್ರೆ ಮಾತ್ರೆಯನ್ನು ನೀಡಿದ್ದಾನೆ. ಶುಕ್ರವಾರ ಬೆಳಗ್ಗೆ ಸಿಂಗ್ ಪಂಜಾಬ್‌ಗೆ ಪಲಾಯನ ಮಾಡುವಲ್ಲಿ ಯಶಸ್ವಿಯಾಗಿದ್ದರೂ, ಆ ಘಟನೆ ನಡೆದ 24 ಗಂಟೆಗಳಲ್ಲಿ ಪಟಿಯಾಲಾದ ಆತನ ಊರಿನಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮೃತ ಮಹಿಳೆಯ ಮಗಳು ಪೊಲೀಸರು ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಗುರುವಾರ ಬೆಳಿಗ್ಗೆ 6 ಗಂಟೆಗೆ ನನಗೆ ಎಚ್ಚರವಾದಾಗ ನನ್ನ ತಾಯಿಯ ಗೆಳೆಯ ಮನ್‌ಪ್ರೀತ್ ತಲೆನೋವಿಗೆ ಕೆಲವು ಮಾತ್ರೆಗಳನ್ನು ನೀಡಿ, ಅದನ್ನು ನುಂಗಿದ ನಂತರ ಮಲಗಲು ಹೇಳಿದ್ದ. ಅದಾದ ಸ್ವಲ್ಪ ಸಮಯದ ನಂತರ ನನಗೆ ಅನುಮಾನ ಬಂದು ನನ್ನ ತಾಯಿ ಎಲ್ಲಿ ಹೋದಳೆಂದು ಕೇಳಿದೆ. ಆಗ ಆತ ಅವಳು ಮಾರುಕಟ್ಟೆಗೆ ಹೋಗಿದ್ದಾಳೆ ಎಂದು ಹೇಳಿದ್ದ. ನಂತರ ಮನ್​ಪ್ರೀತ್ ತನ್ನ ಕಾರಿನಲ್ಲಿ ಹೊರಟುಹೋದ. ಆದರೆ, ಎಷ್ಟು ಹೊತ್ತಾದರೂ ಅಮ್ಮ ಬರದಿದ್ದರಿಂದ ಅನುಮಾನಗೊಂಡು ನನ್ನ ಸಂಬಂಧಿಕರಿಗೆ ಫೋನ್ ಮಾಡಿದೆ. ಅವರು ಪೊಲೀಸರಿಗೆ ವಿಷಯ ತಿಳಿಸಿದರು ಎಂದಿದ್ದಾಳೆ.

ಇದನ್ನೂ ಓದಿ: Shocking News: ಹಿಂದಿ ಸೀರಿಯಲ್​ ನೋಡಿ ಆತ್ಮಹತ್ಯೆಯ ನಾಟಕವಾಡಿದ ಯುವತಿ; ಆಮೇಲೆ ಬಯಲಾಯ್ತು ಕೊಲೆ ರಹಸ್ಯ!

ಪೊಲೀಸರು ಸ್ಥಳಕ್ಕೆ ಧಾವಿಸಿ ಅವರ ಕೋಣೆಯ ಬಾಗಿಲು ಒಡೆದು ನೋಡಿದಾಗ ರೇಖಾ ಅವರ ಮೃತದೇಹವು ಆಕೆಯ ಮುಖ ಮತ್ತು ಕುತ್ತಿಗೆಯ ಮೇಲೆ ಅನೇಕ ಗಾಯಗಳೊಂದಿಗೆ ಪತ್ತೆಯಾಗಿತ್ತು. ಆಕೆಯ ಬಲ ಉಂಗುರದ ಬೆರಳು ಛಿದ್ರಗೊಂಡಿತ್ತು. ಈ ಕುರಿತು ಪೊಲೀಸರು ತನಿಖೆಯನ್ನು ಪ್ರಾರಂಭಿಸಿ, ಮನ್​ಪ್ರೀತ್ ಸಿಂಗ್ ಅವರ ಮೊಬೈಲ್ ಫೋನ್ ಲೊಕೇಷನ್ ಆಧಾರದ ಮೇಲೆ ಆತನನ್ನು ಬಂಧಿಸಿದ್ದಾರೆ.

2006ರಲ್ಲಿ ಮದುವೆಯಾಗಿದ್ದ ಮನ್​ಪ್ರೀತ್ ಸಿಂಗ್​ಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 2015ರಲ್ಲಿ ಕಾಮನ್ ಫ್ರೆಂಡ್ ಮೂಲಕ ಆತನಿಗೆ ರೇಖಾಳ ಪರಿಚಯವಾಗಿತ್ತು. ಗಣೇಶ್ ನಗರದಲ್ಲಿ ಉಳಿದುಕೊಂಡು ಆಕೆಯ ಖರ್ಚುವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದ ಆತ ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆಕೆಯೊಂದಿಗೆ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ ಆತನ ಬಗ್ಗೆ ಇತ್ತೀಚೆಗೆ ರೇಖಾ ರಾಣಿಗೆ ಅನುಮಾನ ಶುರುವಾಗಿತ್ತು. ಆಕೆ ಆತ ಮತ್ತೆ ತನ್ನ ಹೆಂಡತಿ, ಮಕ್ಕಳ ಬಳಿ ವಾಪಾಸ್ ಹೋಗುತ್ತಾನೆಂದು ಅನುಮಾನಗೊಂಡಿದ್ದಳು. ಹೀಗಾಗಿ, ಅವರೊಂದಿಗಿನ ಸಂಬಂಧವನ್ನು ಮುರಿದುಕೊಳ್ಳಲು ಒತ್ತಾಯಿಸುತ್ತಿದ್ದಳು. ಇದೇ ವಿಚಾರಕ್ಕೆ ಅವರಿಬ್ಬರ ನಡುವೆ ಜಗಳವಾಗುತ್ತಿತ್ತು. ಇದೇ ಕಾರಣದಿಂದ ಆತ ಆಕೆಯನ್ನು ಕೊಲೆ ಮಾಡಿ, ತುಂಡಾಗಿ ಕತ್ತರಿಸಲು ಪ್ಲಾನ್ ಮಾಡಿದ್ದ. ಆದರೆ, ಅದಕ್ಕೆ ಸಮಯ ಸಾಕಾಗದ ಕಾರಣದಿಂದ ಶವವನ್ನು ಹಾಗೇ ಬಿಟ್ಟು ತಪ್ಪಿಸಿಕೊಂಡಿದ್ದ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ