Crime News: ಹಸುಗೂಸಿನ ಮೈಗೆ ಬರೆ ಹಾಕಿ ಚಿತ್ರಹಿಂಸೆ ನೀಡಿದ ಬಾಲಕಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರ

| Updated By: ಸುಷ್ಮಾ ಚಕ್ರೆ

Updated on: Dec 13, 2021 | 4:56 PM

ತಮ್ಮ ಮಗುವಿನ ಮೈಮೇಲೆ ಕೆಂಪು ಬಣ್ಣದ ಗಾಯ ಹೆಚ್ಚಾಗುತ್ತಿರುವುದನ್ನು ನೋಡಿ ಆಕೆಯ ಪೋಷಕರು ಕಂಗಾಲಾಗಿದ್ದರು. ಇದಕ್ಕೆ ಕಾರಣ ಯಾರೆಂಬುದೇ ಅವರಿಗೆ ನಿಗೂಢ ಪ್ರಶ್ನೆಯಾಗಿತ್ತು. ತಮ್ಮ ಕಂದನಿಗೆ ಚಿತ್ರಹಿಂಸೆ ನೀಡಿದ್ದು ತಮ್ಮ 5 ವರ್ಷದ ಮಗಳು ಎಂದು ಗೊತ್ತಾದ ಮೇಲೆ ಅವರಿಬ್ಬರಿಗೂ ಆಘಾತವಾಯಿತು!

Crime News: ಹಸುಗೂಸಿನ ಮೈಗೆ ಬರೆ ಹಾಕಿ ಚಿತ್ರಹಿಂಸೆ ನೀಡಿದ ಬಾಲಕಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರ
ಸಾಂಕೇತಿಕ ಚಿತ್ರ
Follow us on

ಭುವನೇಶ್ವರ: ‘ಹುಟ್ಟುತ್ತಾ ಅಣ್ಣತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು’ ಎಂಬ ಮಾತೊಂದಿದೆ. ಇದು ಕೇವಲ ಪುರುಷರಿಗೆ ಅನ್ವಯವಾಗುವ ಮಾತಲ್ಲ. ಈ ಮಾತು ಎಲ್ಲರಿಗೂ ಅನ್ವಯವಾಗದಿದ್ದರೂ ಮಕ್ಕಳಲ್ಲಿ ತಮ್ಮ ತಂದೆ-ತಾಯಿ ತನ್ನನ್ನೇ ಹೆಚ್ಚು ಪ್ರೀತಿ ಮಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ತನಗಿಂತ ತನ್ನ ತಂಗಿಯನ್ನೋ, ತಮ್ಮನನ್ನೋ ಜಾಸ್ತಿ ಪ್ರೀತಿ ಮಾಡುತ್ತಾರೆ ಎಂದು ಮಕ್ಕಳಿಗೆ ಅನಿಸಿದರೆ ಅವರು ಅದನ್ನು ಸಹಿಸುವುದಿಲ್ಲ. ತಂಗಿ ಹುಟ್ಟಿದ ಮೇಲೆ ಅಪ್ಪ-ಅಮ್ಮ ತನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಅಸೂಯೆಯಿಂದ 5 ವರ್ಷದ ಬಾಲಕಿಯೊಬ್ಬಳು 1 ತಿಂಗಳ ತನ್ನ ತಂಗಿಗೆ ಬಿಸಿಯಾದ ಫೋರ್ಕ್​ನಿಂದ ಬರೆ ಹಾಕಿ ಚಿತ್ರಹಿಂಸೆ ನೀಡಿದ ಘಟನೆ ಘಟನೆ ಒಡಿಶಾದಲ್ಲಿ ನಡೆದಿದೆ.

ಅಪ್ಪ-ಅಮ್ಮ ರೂಮಿನಲ್ಲಿ ಇಲ್ಲದಿದ್ದಾಗ ಆ 5 ವರ್ಷದ ಹುಡುಗಿ ತೊಟ್ಟಿಲಲ್ಲಿ ಮಲಗಿದ್ದ 1 ತಿಂಗಳ ಮಗುವಿನ ಮೇಲೆ ಪ್ರತಿ ದಿನವೂ ಫೋರ್ಕ್ ಅನ್ನು ಬಿಸಿ ಮಾಡಿ ಸುಡುತ್ತಿದ್ದಳು. ಅಪ್ಪ-ಅಮ್ಮ ತನಗಿಂತ ತನ್ನ ತಂಗಿಗೆ ಹೆಚ್ಚು ಪ್ರೀತಿ ತೋರಿಸುತ್ತಾರೆಂದು ಆಕೆ ಕೋಪದಿಂದ ಈ ರೀತಿ ಮಾಡಿದ್ದಳು.

ತಮ್ಮ ಮಗುವಿನ ಮೈಮೇಲೆ ಕೆಂಪು ಬಣ್ಣದ ಗುರುತು ಇರುವುದನ್ನು ನೋಡಿ ಆಕೆಯ ಪೋಷಕರು ಕಂಗಾಲಾಗಿದ್ದರು. ಮಗು ದಿನವೂ ನೋವಿನಿಂದ ಅಳುತ್ತಿರುವುದನ್ನು ಕೂಡ ಏನು ಮಾಡಬೇಕೆಂದು ತೋಚದೆ ಆ ಮಗುವಿನ ತಂದೆ-ತಾಯಿ ವೈದ್ಯರ ಬಳಿ ಕರೆದುಕೊಂಡು ಹೋದರು. ತಮ್ಮ ಮಗುವಿನ ಮೈ ಮೇಲೆ ಹೇಗೆ ಗಾಯಗಳಾಗುತ್ತಿವೆ ಎಂಬುದೇ ಅವರಿಗೆ ನಿಗೂಢ ಪ್ರಶ್ನೆಯಾಗಿತ್ತು.

ಕೊನೆಗೆ ವೈದ್ಯರ ಸಲಹೆಯಂತೆ ಅವರು ತಮ್ಮ ಮನೆಯೊಳಗೆ ಸಿಸಿಟಿವಿ ಕ್ಯಾಮೆರಾವನ್ನು ಅಳವಿಸಿದರು. ಮನೆಯಲ್ಲಿರುವ ಸಿಸಿಟಿವಿ ಫೂಟೇಜ್ ನೋಡಿದಾಗ ಅದರಲ್ಲಿ ತಮ್ಮ ಮಗಳು ಆ ಮಗುವಿನ ಮೈಗೆ ಬಿಸಿಯಾದ ಫೋರ್ಕ್​ನಿಂದ ಬರೆ ಹಾಕುತ್ತಿರುವುದು ಗೊತ್ತಾಯಿತು. ಇದನ್ನು ನೋಡಿ ಅವರು ಆಘಾತಕ್ಕೊಳಗಾದರು. ಸುಮಾರು ಒಂದು ತಿಂಗಳ ನಂತರ ಆ ಮಗುವಿನ ಮೈ ಮೇಲಿನ ಗಾಯದ ರಹಸ್ಯ ಬಯಲಾಯಿತು.

ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಹೆಣ್ಣು ಮಗು ದಿನವೂ ಜೋರಾಗಿ ಅಳುತ್ತಿತ್ತು. ಆಕೆಯ ಪೋಷಕರು ಆ ಮಗುವನ್ನು ಕಟಕ್‌ನಲ್ಲಿರುವ ಮಕ್ಕಳ ವೈದ್ಯರ ಬಳಿಗೆ ಕರೆದೊಯ್ದರು. ಮಕ್ಕಳ ವೈದ್ಯ ವಿಕ್ರಮ್ ಸಮಲ್ ಮಗುವಿನ ದೇಹದ ಮೇಲೆ ಕೆಲವು ಕೆಂಪು ಕಲೆಗಳನ್ನು ಗಮನಿಸಿದರು. ಆರಂಭದಲ್ಲಿ ಅವರು ಮಗುವಿಗೆ ಸೆಪ್ಸಿಸ್ ಅಥವಾ ಕೆಲವು ಅಲರ್ಜಿಯ ಕಾರಣದಿಂದಾಗಿ ಕಲೆಗಳು ಉಂಟಾಗುತ್ತವೆ ಎಂದು ಭಾವಿಸಿದ್ದರು. ಹೀಗಾಗಿ, ಮಗುವಿಗೆ ಒಂದು ತಿಂಗಳ ಕಾಲ ಚಿಕಿತ್ಸೆ ನೀಡಲಾಯಿತು. ಆದರೆ, ದೇಹದ ಬೇರೆ ಭಾಗಗಳಲ್ಲೂ ಗಾಯಗಳು ಹೆಚ್ಚುತ್ತಲೇ ಇತ್ತು.

ಕೆಲವು ದಿನಗಳಾದಾಗ ಆ ಕೆಂಪು ಗಾಯವಾದ ಜಾಗದಲ್ಲಿ ಸುಟ್ಟು ಒಣಗಿದ ಗುರುತುಗಳಿದ್ದವು. ಹೀಗಾಗಿ, ಇದು ಸುಟ್ಟ ಗಾಯವೆಂದು ವೈದ್ಯರಿಗೆ ಖಚಿತವಾಯಿತು. ಇದು ಯಾರ ಕೆಲಸವೆಂದು ತಿಳಿಯಲು ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಮಗುವಿನ ಪೋಷಕರಿಗೆ ಸೂಚಿಸಿದರು. ತನ್ನ ತಾಯಿ ಮನೆಯ ಕೆಲಸದಲ್ಲಿ ನಿರತರಾಗಿದ್ದಾಗ, ಅಪ್ಪ ಹೊರಗೆ ಹೋಗಿದ್ದಾಗ ಅವರ ದೊಡ್ಡ ಮಗಳು ಅಡುಗೆಮನೆಗೆ ಹೋಗಿ, ಫೋರ್ಕ್ ಅನ್ನು ಬಿಸಿ ಮಾಡಿ ಮಗುವಿನ ದೇಹದ ಮೇಲೆ ಆ ಚಮಚವನ್ನು ಇಡುತ್ತಿದ್ದಳು. ಆಕೆ ಹುಟ್ಟಿದ ಮೇಲೆ ಅಪ್ಪ-ಅಮ್ಮ ತನ್ನ ಬಗ್ಗೆ ಪ್ರೀತಿ ತೋರಿಸುತ್ತಿಲ್ಲ ಎಂದು ಆಕೆ ಈ ರೀತಿ ಮಾಡಿದ್ದಳು.

ಇದನ್ನೂ ಓದಿ: Crime News: ಗಂಡ ಬ್ಲೌಸ್ ಹೊಲಿದಿದ್ದು ಸರಿಯಾಗಿಲ್ಲವೆಂದು ಹೆಂಡತಿ ಆತ್ಮಹತ್ಯೆ!

Crime News: ಪ್ರೇಯಸಿಯ ಗಂಡನನ್ನು ಕೊಂದು, ಶವವನ್ನು ಕತ್ತರಿಸಿ ಬಿಸಾಡಿದ ವ್ಯಕ್ತಿ