Murder: ಮಲಗಿದ್ದ ಮೂವರ ತಲೆಗೆ ಸುತ್ತಿಗೆಯಿಂದ ಹೊಡೆದು ಕಗ್ಗೊಲೆ; 19 ವರ್ಷದ ಯುವಕನ ಬಂಧನ
Crime News: ಶ್ರೀಕಾಂತ್ ಮನೆ ಮೇಲೆ ದಾಳಿ ನಡೆಸಿದಾಗ ರಕ್ತದಲ್ಲಿ ಮುಳುಗಿದ್ದ ಶರ್ಟ್ ಪತ್ತೆಯಾಗಿದೆ. ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದಾಗ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಹೈದರಾಬಾದ್: ಸುತ್ತಿಗೆಯನ್ನು ಬಳಸಿ ಮೂವರನ್ನು ಕೊಂದ ಆರೋಪದ ಮೇಲೆ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿರುವ ಆಘಾತಕಾರಿ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಡಿಸೆಂಬರ್ 7ರ ಮಧ್ಯರಾತ್ರಿ ತ್ರಿವಳಿ ಕೊಲೆ ನಡೆದಿದೆ. ಸುತ್ತಿಗೆಯಿಂದ ಮೂವರನ್ನು ಕೊಂದು ಶ್ರೀಕಾಂತ್ ಆ ಮೂವರ ಬಳಿ ಇದ್ದ ಮೊಬೈಲ್ ಹಾಗೂ ಹಣದೊಂದಿಗೆ ಪರಾರಿಯಾಗಿದ್ದಾನೆ ಎಂದು ನಿಜಾಮಾಬಾದ್ ಪೊಲೀಸ್ ಅಧಿಕಾರಿ ಕಾರ್ತಿಕೇಯ ತಿಳಿಸಿದ್ದಾರೆ.
ಬಲಿಯಾದವರನ್ನು ಪಂಜಾಬ್‌ನ ಕೊಯ್ಲು ಯಂತ್ರದ ಮೆಕ್ಯಾನಿಕ್ ಹರ್ಪಾಲ್ ಸಿಂಗ್, ಜೋಗಿಂದರ್ ಸಿಂಗ್ ಮತ್ತು ಕ್ರೇನ್ ಆಪರೇಟರ್ ಬಾನೋತ್ ಸುನಿಲ್ ಎಂದು ಗುರುತಿಸಲಾಗಿದೆ. ನಿಜಾಮಾಬಾದ್‌ನಲ್ಲಿ ಖ್ಯಾತ ಕ್ರಿಮಿನಲ್‌ಗಳ ವಿಚಾರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಶ್ರೀಕಾಂತ್ ಮನೆ ಮೇಲೆ ದಾಳಿ ನಡೆಸಿದಾಗ ರಕ್ತದಲ್ಲಿ ಮುಳುಗಿದ್ದ ಶರ್ಟ್ ಪತ್ತೆಯಾಗಿದೆ. ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದಾಗ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ರಚಿಸಿದ್ದರು. ಹಿಂದಿನ ಅಪರಾಧಿಗಳು ಮತ್ತು ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದವರ ಪಟ್ಟಿಯನ್ನು ಪರಿಶೀಲಿಸುವುದಲ್ಲದೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಿಸಿಟಿವಿ ದೃಶ್ಯಗಳು ಸೇರಿದಂತೆ ಇತರ ಲೀಡ್‌ಗಳಲ್ಲಿ ಪೊಲೀಸರು ಕೆಲಸ ಮಾಡಿದರು.
ಕುಡಿದ ಅಮಲಿನಲ್ಲಿ ಕೃತ್ಯ ಎಸಗಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಹಣ ಕದಿಯುವ ಉದ್ದೇಶದಿಂದ ವರ್ಕ್‌ಶಾಪ್‌ಗೆ ಹೋದಾಗ ಮೂವರು ಮಲಗಿದ್ದನ್ನು ಕಂಡಿದ್ದಾನೆ. ಸುತ್ತಿಗೆಯಿಂದ ಸುನೀಲ್ನನ್ನು ಕೊಲೆ ಮಾಡಿ ಮೊಬೈಲ್ ಕಸಿದುಕೊಂಡಿದ್ದಾನೆ. ನಂತರ ಅವರು ಹರ್ಪಾಲ್ ಮತ್ತು ಜೋಗಿಂದರ್ ಮಲಗಿದ್ದ ವರ್ಕ್ಶಾಪ್ನ ಮತ್ತೊಂದು ಭಾಗಕ್ಕೆ ಹೋಗಿ, ಅದೇ ಸುತ್ತಿಗೆಯಿಂದ ಅವರನ್ನೂ ಕೊಂದು ಅವರ ಬಳಿಯಿದ್ದ ಮೊಬೈಲ್ ಫೋನ್ ಮತ್ತು ನಗದು ಸಮೇತ ಪರಾರಿಯಾಗಿದ್ದಾನೆ.
ಪೊಲೀಸರ ಪ್ರಕಾರ, ಚಿಂದಿ ಆಯುವ ಶ್ರೀಕಾಂತ್ ಬಾಲ್ಯದಿಂದಲೂ ಅಪರಾಧಿಯಾಗಿದ್ದ. ದೇವಸ್ಥಾನದ ವಾಚ್‌ಮನ್ ಮೇಲೆ ಹಲ್ಲೆ ನಡೆಸಿ ಹಂದಿಯನ್ನು ಕದ್ದಿದ್ದ. ಈ ವೇಳೆ ಹೈದರಾಬಾದ್ನ ಮಕ್ಕಳ ಸುಧಾರಣಾ ಕೇಂದ್ರಕ್ಕೆ ಮೂರು ವರ್ಷಗಳ ಕಾಲ ಕಳುಹಿಸಲಾಗಿತ್ತು. ಈ ವರ್ಷದ ಅಕ್ಟೋಬರ್‌ನಲ್ಲಿ ಆತನನ್ನು ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ: Crime News: ಹಸುಗೂಸಿನ ಮೈಗೆ ಬರೆ ಹಾಕಿ ಚಿತ್ರಹಿಂಸೆ ನೀಡಿದ ಬಾಲಕಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರ
Murder: ಸ್ನಾನಕ್ಕೆ ಹೋದ ಗಂಡನಿಗೆ ಟವೆಲ್ ಕೊಡಲು ತಡವಾಗಿದ್ದಕ್ಕೆ ಹೆಂಡತಿಯ ಬರ್ಬರ ಹತ್ಯೆ