Crime News: ಆಟಿಕೆ ಗನ್ ತೋರಿಸಿ ಚಿನ್ನದಂಗಡಿ ದೋಚಿದ ಖದೀಮರು!

| Updated By: ಝಾಹಿರ್ ಯೂಸುಫ್

Updated on: Aug 16, 2021 | 10:32 PM

Crime News In Kannada: ವಿಚಾರಣೆ ವೇಳೆ ಈ ಇಬ್ಬರು ಖದೀಮರು ಸೋಷಿಯಲ್ ಮೀಡಿಯಾದಲ್ಲಿನ ಪ್ರಾಂಕ್ ವಿಡಿಯೋಗಳಿಂದ ಸ್ಪೂರ್ತಿ ಪಡೆದು ಈ ಕೃತ್ಯ ಎಸೆಗಿದ್ದಾಗಿ ಬಾಯಿ ಬಿಟ್ಟಿದ್ದಾರೆ.

Crime News: ಆಟಿಕೆ ಗನ್ ತೋರಿಸಿ ಚಿನ್ನದಂಗಡಿ ದೋಚಿದ ಖದೀಮರು!
ಸಾಂದರ್ಭಿಕ ಚಿತ್ರ
Follow us on

ಅಪರಾಧ ಲೋಕದ ಕೆಲವು ಕೃತ್ಯಗಳ ಬಗ್ಗೆ ಕೇಳಿದರೆ ಬೆಚ್ಚಿಬೀಳಬೇಕಾ ಅಥವಾ ನಗಬೇಕಾ ಎಂದೆನಿಸುವುದು ಸಹಜ. ಇದೀಗ ಅಂತಹದೊಂದು ಘಟನೆ ದೆಹಲಿಯಲ್ಲಿ ನಡೆದಿದೆ. ದಕ್ಷಿಣ ದೆಹಲಿಯ ಪ್ರಮುಖ ರಸ್ತೆಯಲ್ಲಿರುವ ಚಿನ್ನದಂಗಡಿಗೆ ಇಬ್ಬರು ದರೋಡೆಕೋರರು ರೈನ್ ಕೋಟ್ ಹಾಗೂ ಮಾಸ್ಕ್ ಧರಿಸಿ ಬಂದಿದ್ದರು. ಅಲ್ಲದೆ ಗನ್ ತೋರಿಸಿ ಚಿನ್ನದ ಅಂಗಡಿಯನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಚಿನ್ನದಂಗಡಿ ಮಾಲೀಕ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅಂಗಡಿಯ ಹಾಗೂ ರಸ್ತೆಯುದ್ದಕ್ಕೂ ಇರುವ ಸಿಸಿ ಟಿವಿಯನ್ನು ಪರಿಶೀಲಿಸಿದ್ದರು. ಇದೇ ವೇಳೆ ದರೋಡೆಕೋರಿಬ್ಬರು ಬಿಳಿ ಸ್ಕೂಟರ್​ನಲ್ಲಿ ಬಂದಿರುವುದು ತಿಳಿದು ಬಂದಿದೆ. ಅದರಂತೆ ಸ್ಕೂಟರ್​ನ ಮಾಹಿತಿಯನ್ನು ಬೆನ್ನತ್ತಿದ ಪೊಲೀಸರು ಇದೀಗ ಇಬ್ಬರು ಖದೀಮರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಬಿಹಾರದ ಮಧುಬನಿ ನಿವಾಸಿಗಳಾದ ಧೀರಜ್ ಮತ್ತು ಪಂಕಜ್ ಎಂದು ಗುರುತಿಸಲಾಗಿದೆ. ಹರಿಯಾಣದ ಪಾಣಿಪತ್​ನಿಂದ ಧೀರಜ್ ನನ್ನು ಬಂಧಿಸಲಾಗಿದ್ದರೆ, ಪಂಕಜ್ ನನ್ನು ಉತ್ತರ ಪ್ರದೇಶದ ನೋಯ್ಡಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಳಿಕ ವಿಚಾರಣೆಗೊಳಪಡಿಸಿದಾಗ ಇಬ್ಬರು ದರೋಡೆಕೋರರ ಅಸಲಿಯತ್ತು ಬಯಲಾಗಿದೆ.

ವಿಚಾರಣೆ ವೇಳೆ ಈ ಇಬ್ಬರು ಖದೀಮರು ಸೋಷಿಯಲ್ ಮೀಡಿಯಾದಲ್ಲಿನ ಪ್ರಾಂಕ್ ವಿಡಿಯೋಗಳಿಂದ ಸ್ಪೂರ್ತಿ ಪಡೆದು ಈ ಕೃತ್ಯ ಎಸೆಗಿದ್ದಾಗಿ ಬಾಯಿ ಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ದರೋಡೆಗಾಗಿ ಬಳಸಲಾದ ಗನ್ ಹಾಗೂ ವಸ್ತಗಳನ್ನು ವಶಪಡಿಸಿದಾಗ ಖುದ್ದು ಪೊಲೀಸರಿಗೆ ನಗು ಬಂದಿದೆ. ಹೌದು, ಇವರಿಬ್ಬರು ಆಟವಾಡುವ ಎರಡು ಗನ್ ತೋರಿಸಿ ಈ ದುಷ್ಕತ್ಯವನ್ನು ಎಸೆಗಿದ್ದರು. ಆದರೆ ಚಿನ್ನದಂಗಡಿಯಲ್ಲಿದ್ದವರು ಭಯದಿಂದ ಅದನ್ನು ಗಮನಿಸಿರಲಿಲ್ಲ.

ಇನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ಈ ಹಿಂದೆ ಕಲ್ಕಾಜಿ ಪ್ರದೇಶದಲ್ಲೂ ಇದೇ ಮಾದರಿಯಲ್ಲಿ ಟಾಯ್ ಗನ್ ತೋರಿಸಿ ಅಪರಾಧ ಎಸಗಿರುವ ಬಗ್ಗೆ ಬಾಯಿಬಿಟ್ಟಿದ್ದಾರೆ. ಸದ್ಯ ದರೋಡೆಕೋರರು ದಕ್ಷಿಣ ದೆಹಲಿ ಪೊಲೀಸರ ವಶದಲ್ಲಿದ್ದು, ಇನ್ನಷ್ಟು ವಿಚಾರಣೆಗೆ ಒಳಪಡಿಸಿ ಮತ್ತಷ್ಟು ಮಾಹಿತಿ ಕಲೆಹಾಕಲು ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ: Crime News: ಡಬಲ್ ಆ್ಯಕ್ಟಿಂಗ್ ಮೂಲಕ 2ನೇ ಮದುವೆಗೆ ಮುಂದಾದ ಭೂಪ..!

ಇದನ್ನೂ ಓದಿ: Crime News: ಹಣ ಬಿಟ್ಟು 129 ಬಾಕ್ಸ್​ ಮದ್ಯ ದೋಚಿದ ಕಳ್ಳರು..!

ಇದನ್ನೂ ಓದಿ:  ಪತ್ರಿಕೆಯಲ್ಲಿ ಜಾಹೀರಾತು ನೀಡಿ ಕಿಡ್ನಿ ಕದಿಯೋ ಖದೀಮರು..!